ಕಾಂಗ್ರೆಸ್ ನಿಯೋಗ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಕ್ವಾರಂಟೈನಲ್ಲಿದ್ದವರ ಗೋಳು ಆಲಿಸಿತು

JANANUDI.COM NETWORK

 

ಕಾಂಗ್ರೆಸ್ ನಿಯೋಗ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಕ್ವಾರಂಟೈನಲ್ಲಿದ್ದವರ ಗೋಳು ಆಲಿಸಿತು

 

 

 

ಕುಂದಾಪುರ, ಮೇ.17: ಕೆಲವು ದಿನಗಳ ಹಿಂದೆ ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದು ತಮ್ಮ ಊರಾದ ಕುಂದಾಪುರಕ್ಕೆ ತಲುಪಿದವರನ್ನು ಸರಕಾರ ಶಾಲೆಗಳಲ್ಲಿ ಮತ್ತು ಇತರ ಕಡೆ ಕ್ವಾರಂಟೈನಲ್ಲಿಟ್ಟಿದೆ. ಅಲ್ಲಿಯ ಅವ್ಯವಸ್ಥೆ ಸರಿಯಿಲ್ಲವೆಂದು ತಿಳಿದ ಬಳಿಕ ಕುಂದಾಪುರ ಕಾಂಗ್ರೆಸ್ ನಿಯೋಗ ಕುಂದಾಪುರದ ಕ್ವಾರಂಟೈನ್ ಕೆಂದ್ರಕ್ಕೆ ಭೇಟಿ ನೀಡಿ ಕ್ವಾರಂಟೈನ್ ನಲ್ಲಿ ಇದ್ದವರ ಅಹವಾಲನ್ನು ಆಲಿಸಿತು.
“ಒಂದು ವಾರ ಕಳೆದು ಹೋಗಿದೆ ನೆಟ್ಟಗೆ ನಮಗೆ ಚಾ ತಿಂಡಿ ಸಿಗುವುದಿಲ್ಲ, ಶೌಚಲಾಯದ ವ್ಯವಸ್ಥೆ ಸರಿಯಿಲ್ಲ. ಈ ವರೆಗೆ ನಮ್ಮನ್ನು ಯಾರೂ ಭೇಟಿ ಮಾಡಲು ಕೂಡ ಬಂದಿಲ್ಲ” ಎಂದು ಇಲ್ಲಿನ ಬಿಸಿಎಂ ಕ್ವಾರಂಟೈನ್ ಹಾಸ್ಟೆಲನಲ್ಲಿ ಇರುವರು ತಮ್ಮ ದುಖ ತೋಡಿಕೊಳ್ಳುತ್ತಾ ತಮ್ಮ ಯಾತನೆಯನ್ನು ತಿಳಿಸಿದರು.
“ನಮ್ಮಲ್ಲಿ ಯಾರು ವೈರಸ್ ಪೀಡಿತರಲ್ಲ, ನಮ್ಮನ್ನು ತುಚ್ಚ ದ್ರಷ್ಟಿಯಿಂದ ಕಾಣಬೇಡಿ” ಎಂದು ಕ್ವಾರಂಟೈನ್ ನಲ್ಲಿ ಇರುವರು ಕೈ ಮುಗಿದು ಬೇಡಿಕೊಂಡರು. ಸಮಸ್ಯೆ ಆಲಿಸಿದ ಕಾಂಗ್ರೆಸ್ ನಿಯೋಗ ಸಂಬಂಧಿತ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಪರಿಹಾರ ಮಾಡುವ ಪ್ರಯತ್ನ ಮಾಡಲಾಗುವುದು ಭರವಸೆ ನೀಡಿತು.

‘ಕ್ವಾರಂಟೈನ್ ನಿರ್ವಹಣೆಯಲಿ ಸರಕಾರ ಬಹುತೇಕ ವಿಫಲವಾಗಿದೆ. ನಾವು ತಾಲೂಕಿನ ಎಲ್ಲಾ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ಜಿಲ್ಲಾಡಳಿತ ಮತ್ತು ಸರಕಾರಕ್ಕೆ ವರದಿ ಸಲ್ಲಿಸುತ್ತೇವೆ, ಕ್ವಾರಂಟೈನ್ ನಲ್ಲಿ ಇರುವರನ್ನು ಮಾನವೀಯತೆ ನೋಡಿಕೊಳ್ಳ ಬೇಕಾಗಿದಿದ್ದು ಕರ್ತವ್ಯವಾಗಿದೆ’ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸನ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಮಾಧ್ಯಮಕ್ಕೆ ತಿಳಿಸಿದರು.

ನಿಯೋಗದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸನ ವಿನೋದ್ ಕ್ರಾಸ್ತಾ, ಎ ಪಿ ಎಮ್ ಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಪುರಸಭೆ ಸದಸ್ಯ ಚಂದ್ರಶೇಖರ ಖಾರ್ವಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಹಾಜರಿದ್ದರು.