ಕವನ:  ಸಾವನ್ ಕೆ ಸಿಂಧನೂರು – ಕಳೆದ ಯಾರನ್ನೋ ಹುಡುಕುವ ಬರೀ ತಿರುಗಾಟಕ್ಕೆ ಕೊನೆ ಇಲ್ಲ ಜಾಣ

ಕವನ:  ಸಾವನ್ ಕೆ ಸಿಂಧನೂರು

ಕಳೆದ ಯಾರನ್ನೋ ಹುಡುಕುವ ಬರೀ ತಿರುಗಾಟಕ್ಕೆ ಕೊನೆ ಇಲ್ಲ ಜಾಣ
*********************************************
ಕಳೆದ ಯಾರನ್ನೋ ಹುಡುಕುವ ಬರೀ ತಿರುಗಾಟಕ್ಕೆ ಕೊನೆ ಇಲ್ಲ ಜಾಣ
ಕತ್ತಲ ಗರ್ಭದಲ್ಲೂ ಮಿಂಚಿನ ಸೆಳಕಿದೆ ಕಣ್ಣ ನೋಟಕ್ಕೆ ಕೊನೆ ಇಲ್ಲ ಜಾಣ.
ಬೆನ್ನುಹುರಿಯ ಹಳೆ ಸರಪಳಿಗೆ ಬಂಧನದ ಹೊಸ ವಜಾ ಸಿಕ್ಕುತ್ತಿಲ್ಲ
ಹೊಸೆವ ಮಜಬೂತ್ ಹೆಜ್ಜೆಗಳೇ ಮೂಡದ ಜಾಗಕ್ಕೆ ಕೊನೆ ಇಲ್ಲ ಜಾಣ.
ಇರುವಷ್ಟು ದಿನ ಕಾಲನ ರಸ್ತಾ ನೋಡುವ ಬದಲಿಗೆ ಇನ್ನೇನಿದೆ ಇಲ್ಲಿ
ದುತ್ತನೆ ಎದುರಾಗಿ ಬೆತ್ತಲಾಗುವ ಗುಟುಕು ಜೀವಕ್ಕೆ ಕೊನೆ ಇಲ್ಲ ಜಾಣ.
ಇಲ್ಲಿ ನಂದಿದ ದೀಪಕ್ಕೆ ಅಲ್ಲೆಲ್ಲೋ ಬತ್ತಿ ಮಸೆದು ಥೇಲ್ ಹಾಕುತ್ತಿದ್ದಾರೆ
ಬಿಡುಗಡೆ ಪಡೆದ ಪ್ರಾಣಪಕ್ಷಿ ಗೂಡು ಮರೆತಂತೆ ಆತ್ಮಕ್ಕೆ ಕೊನೆ ಇಲ್ಲ ಜಾಣ.
ಪ್ರೀತಿಯೊಂದ ಮರೆತು ಬೇರೆ ಎಲ್ಲವೂ ಅದೆಷ್ಟು ಬೇಗ ಸಿಕ್ಕುತವೆ ‘ಸಾವನ್’
ಉರಿವ ಜ್ಯೋತಿಯ ಸುತ್ತಲೂ ಬೆಳಕು ತಳದ ಅಂದಕಾರಕ್ಕೆ ಕೊನೆ ಇಲ್ಲ ಜಾಣ.