ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕೆ ಪತ್ರಿಕೆಗಳಸಂಘದ ಉಪಾಧ್ಯಕ್ಷರಾಗಿ ಕೆ.ಎಸ್.ಗಣೇಶ್ ಆಯ್ಕೆ
ಕೋಲಾರ: ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಉಪಾಧ್ಯಕ್ಷರಾಗಿ ಕೋಲಾರದ ಕೆ.ಎಸ್.ಗಣೇಶ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚಿಕ್ಕಬಳ್ಳಾಪುರದ ಮುನಿಕೃಷ್ಣಪ್ಪ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಹಿತ ಕಾಪಾಡುವ ಉದ್ದೇಶದಿಂದ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಂಘದ ಅಧ್ಯಕ್ಷರಾಗಿ ಹಾಸನದ ಕೆಂಚೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಕೊಡಗಿನ ಡಾ.ಬಿ.ಸಿ.ನವೀನ್‍ಕುಮಾರ್, ಸಂಚಾಲಕರಾಗಿ ಹಾಸನದ ಎಚ್.ಬಿ.ಮದನಗೌಡ, ಸಂಘಟನಾ ಸಂಚಾಲಕರಾಗಿ ಮಂಡ್ಯದ ಸೋಮಶೇಖರ್ ಕೆರಗೋಡು, ಶಿವಮೊಗ್ಗದ ಎನ್.ರವಿಕುಮಾರ್, ಖಜಾಂಚಿಯಾಗಿ ಮಂಡ್ಯದ ಎಂ.ಎಸ್.ಶಿವಪ್ರಕಾಶ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಧಾರವಾಢದ ಗಣಪತಿ ಗಂಗೊಳ್ಳಿ, ಕೋಲಾರದ ಕೆ.ಎಸ್.ಗಣೇಶ್, ರಾಮನಗರದ ಚೆಲುವರಾಜು, ಶಿವಮೊಗ್ಗದ ಕೆ.ವಿ.ಶಿವಕುಮಾರ್, ದಾವಣಗೆರೆಯ ಎ.ಎಸ್.ವಿಕಾಸ್, ಹಾವೇರಿಯ ತೇಜಸ್ವಿನಿ ಕಾಸೆಟ್ಟಿ.
ಕಾರ್ಯದರ್ಶಿಗಳಾಗಿ ಮೈಸೂರಿನ ಎಂ.ಆರ್.ಸತ್ಯನಾರಾಯಣ, ರಾಯಚೂರಿನ ಆರ್.ಗುರುನಾಥ್, ಬೆಂಗಳೂರಿನ ಸೋಮಶೇಖರ್ ಗಾಂಧಿ, ಡಾ.ಕೆ.ಎಸ್.ಸ್ವಾಮಿ, ಮುರಳೀಧರ, ಮಂಗಳೂರಿನ ಪ್ರಕಾಶ್ ಪಾಂಡೇಶ್ವರ, ಗಂಗಾವತಿಯ ವೆಂಕಟೇಶ್ ಕುಲಕರ್ಣಿ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚಿಕ್ಕಮಗಳೂರಿನ ಎಚ್.ಎಸ್.ಸುಂದರೇಶ್, ತುಮಕೂರಿನ ಸೊಗಡು ವೆಂಕಟೇಶ್, ಶಿವಮೊಗ್ಗದ ಲತಾ ರಂಗಸ್ವಾಮಿ, ಗದಗದ ಅಜಿತ್ ಹೊಂಬಾಳೆ, ಮೈಸೂರಿನ ಮಹಿಮಹೇಶ್, ಬೆಳಗಾವಿಯ ಕುಂತಿನಾಥಕಲಮನಿ, ಬಳ್ಳಾರಿಯ ಅನೂಪ್, ಮಂಡ್ಯದ ಬಿ.ಪಿ.ಪ್ರಕಾಶ್, ಚಿಕ್ಕಬಳ್ಳಾಪುರದ ಮುನಿಕೃಷ್ಣಪ್ಪ, ಬೀದರ್‍ನ ಅಶೋಕಕುಮಾರ್ ಕಾರಂಜ, ಗುಲ್ಬರ್ಗಾದ ದೇವೇಂದ್ರಪ್ಪ ಕಪ್ಪನೂರ್, ಚಿತ್ರದುರ್ಗದ ಬಿ.ಎನ್.ಮೈಲಾರಪ್ಪ, ದಾವಣಗೆರೆಯ ಮಲ್ಲಿಕಾರ್ಜುನ ಕಬ್ಬೂರು, ಕೊಪ್ಪಳದ ದೇವೇಂದ್ರಪ್ಪ ನಾಗನೂರು, ಬಾಗಲಕೋಟೆಯ ಸುಭಾಷ್ ಹೊದ್ಲೂರು, ಚಾಮರಾಜನಗರದ ಸವಿತಾ ಜಯಂತ್, ಕಾರವಾರದ ಲಾವಣ್ಯ ಸಂದೀಪ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಮೂಲಕ ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳ ಉಳಿವಿಗಾಗಿ ಸರಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲು ರಚನಾತ್ಮಕ ಹಾಗೂ ಕ್ರಿಯಾತ್ಮಕ ಹೋರಾಟಗಳನ್ನು ನಡೆಸುವ ಉದ್ದೇಶ ಹೊಂದಲಾಗಿದೆ.