ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2020-21 ನೇ ಸಾಲಿನಲ್ಲಿ ಹಲವು ರೀತಿಯ ಸಾಲದ ಯೋಜನೆಗಳು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2020-21 ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಶ್ರಮಶಕ್ತಿ ಸಾಲದ ಯೋಜನೆ , ಕಿರು ( ಮೈಕ್ರೋ ) ಸಾಲ ಸಹಾಯಧನ ಯೋಜನೆ, ಗಂಗಾ ಕಲ್ಯಾಣ ಯೋಜನೆ , ವೃತ್ತಿ ಪ್ರೋತ್ಸಾಹ ಯೋಜನೆ , ಟ್ಯಾಕ್ಸಿ ಅಥವಾ ಗೂಡ್ಸ್ ಖರೀದಿ ಯೋಜನೆ , ಪಶುಸಂಗೋಪನೆ ಯೋಜನೆ , ಕೃಷಿಯಂತ್ರ ಖರೀದಿ ಯೋಜನೆ , ಅಟೋ ಸರ್ವಿಸ್ ಯೋಜನೆ , ಗೃಹ ನಿರ್ಮಾಣ ಮಾರ್ಜಿನ್ ಹಣ ಸಾಲ ಯೋಜನೆ , ರೇಷ್ಮೆ ಚಟುವಟಿಕೆಗಳಿಗೆ ತರಬೇತಿ ಹಾಗೂ ಸಾಲ ಯೋಜನೆಗಳಿಗೆ ಮತೀಯ ಅಲ್ಪಸಂಖ್ಯಾತರಿಂದ ( ಮುಸ್ಲಿಂ , ಕ್ರಿಶ್ಚಿಯನ್ , ಜೈನರು , ಬೌದ್ಧರು , ಸಿಬ್ಬರು , ಪಾರ್ಸಿಗಳು ) ಅನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ . ಕೋವಿಡ್ -19 ವಿಶೇಷ ಯೋಜನೆಯಡಿ ಮಹಿಳೆಯರಿಗೆ ಮಾತ್ರ ಮೈಕ್ರೋ ಸಾಲ ವೈಯಕ್ತಿಕ ಯೋಜನೆಯನ್ನು ನೀಡಲಾಗುವುದು . ಅರ್ಜಿದಾರರು ವಯಸ್ಸು ಕನಿಷ್ಠ 25 ವರ್ಷ ಗರಿಷ್ಠ 50 ವರ್ಷದೊಳಗಾಗಿರಬೇಕು . ಅರ್ಜಿಗಳನ್ನು ವೆಬ್ಸೈಟ್ ವಿಳಾಸ kmdcmicro.karnataka.gov.in ಆನ್‌ಲೈನ್‌ನಲ್ಲಿ ಡಿಸೆಂಬರ್ 10 ರೊಳಗಾಗಿ ಸಲ್ಲಿಸಬೇಕು ಹಾಗೂ ಅರ್ಜಿಯ ಪ್ರತಿ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ನಿಗಮದ ಕಛೇರಿಗೆ ಡಿಸೆಂಬರ್ 21 ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ( ನಿ ) ಜಿಲ್ಲಾ ವ್ಯವಸ್ಥಾಪಕರಾದ ಇಬ್ರಾಹಿಂ ಎಂ ಮುಲ್ಲಾ ಅವರು ತಿಳಿಸಿದ್ದಾರೆ.