ಕರೋನ ಹಾಗೂ ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಮತ್ತು ಸ್ವಚ್ಚತೆ ಬಗ್ಗೆ ಕರ ಪತ್ರದ ಮುಖಾಂತರ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕೆಂದು ರೈತ ಸಂಘ ಆಗ್ರಹ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಕರೋನ ಹಾಗೂ ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಮತ್ತು ಸ್ವಚ್ಚತೆ ಬಗ್ಗೆ ಕರ ಪತ್ರದ ಮುಖಾಂತರ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕೆಂದು ರೈತ ಸಂಘ ಆಗ್ರಹ 

 

ಕೋಲಾರ ಫೆ -3: ಕರೋನ ಹಾಗೂ ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ವಚ್ಚತೆ ಬಗ್ಗೆ ಕರ ಪತ್ರದ ಮುಖಾಂತರ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕೆಂದು ರೈತ ಸಂಘದಿಂದ ಜಿಲ್ಲಾ ಆರೋಗ್ಯ ಅಧಿಕಾರಿ ಕಛೇರಿ ಮುಂದೆ ಹೋರಾಟ ಮಾಡಿ ಭಾರತಿ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪ್ರಪಂಚವನ್ನೇ ತಲ್ಲಣಗೊಳಿಸಿ ಸಾವಿನ ಕದತಟ್ಟುತ್ತಿರುವ ಕೊರೋನ ರೋಗದ ಜಾಗೃತಿ ಬಗ್ಗೆ ಅಧಿಕಾರಿಗಳು ಎಚ್ಚರಿಕೆಯಿಂದ ಇರುವ ಜೊತೆಗೆ ಯಾವುದೇ ರೋಗಿಯನ್ನು £ರ್ಲಕ್ಷೆ ಮಾಡದಂತೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಆದೇಶ ಮಾಡುವ ಜೊತೆಗೆ ಕೊರೋನಾ ವೈರಸ್ ರೋಗವನ್ನೇ ಬಂಡವಾಳಾಗಿಸಕೊಂಡು ರಕ್ತ ಪರೀಕ್ಷೆಗಳ ಹಸರಿನಲ್ಲಿ ಜನ ಸಾಮಾನ್ಯರನ್ನು ಸುಳಿಗೆ ಮಾಡುವುದನ್ನು ತಪ್ಪಿಸಲು ಸರ್ಕಾರಿ ವ್ಯಾಪ್ತಿಯಲ್ಲಿ ಹೆಚ್ಚಿನ ಪರೀಕ್ಷಾ ಕೇಂದ್ರಗಳನ್ನು ತೆರೆಯಬೇಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರಿ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡುವ ಜೊತೆಗೆ ಆರೋಗ್ಯವೇ ಭಾಗ್ಯ ಎಂಬ ಗಾದೆಗೆ ಪರಿರ್ಯಾಯವಾಗಿ ಅನಾರೋಗ್ಯವೇ ಬಡವರಿಗೆ ಭಾಗ್ಯ ಎಂಬಂತಾಗಿದೆ. ಮಹಾತ್ಮಗಾಂಧಿ ಕನಸು ನನಸು ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡುತ್ತಿದ್ದರು ಅಧಿಕಾರಿಗಳು ಮತ್ತು ಟೆಂಡರ್‍ದಾರರ ಭ್ರಷ್ಟಾಚಾರತೆಗೆ ಅಭಿವೃದ್ಧಿ ಎಂಬುದು ಮರುಚಿಕೆಯಾಗಿ ಜನ ಸಾಮಾನ್ಯರು ನಾನಾರೋಗಳಿಗೆ ತುತ್ರ್ತಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆಗಳನ್ನು ಅಲಂಬಿಸಿ ಲಕ್ಷ ಲಕ್ಷ ಆರೋಗ್ಯಕ್ಕಾಗಿ ಸುರಿಯಬೇಕಾದ ಪರಿಸ್ಥಿತಿ ಇದೆ. ಮತ್ತೊಂದಡೆ ಮತ ಪಡೆದು ಆಯ್ಕೆಯಾದ ಜನ ಪ್ರತಿನಿಧಿಗಳಿಗೆ ಗ್ರಾಮೀಣ ಪ್ರದೇಶದ ದೂಳು ಮತ್ತು ಸಗಣಿ ವಾಸನೆ ಕಂಡರೆ ಆಗದು, ಮತ ಕೇಳುವ ಸಮಯದಲ್ಲಿ ಹಳ್ಳಿಗಳ ಜನರ ಕಾಲಿಗೆ ಬೀಳುವ ಜನ ಪ್ರತಿನಿಧಿಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯನು ಸಂಪೂರ್ಣವಾಗಿ 5 ವರ್ಷಗಳ ಕಾಲ ಮರೆತಿರುವುದಕ್ಕೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ವಿರುದ್ಧ ಜನ ಸಾಮಾನ್ಯರು ಆಕ್ರೋಷ ವ್ಯಕ್ತಪಡಿಸುವ ಜೊತೆಗೆ ಸಮರ್ಪಕವಾದ ಮಾಹಿತಿ ನೀಡದ ಆರೋಗ್ಯ ಅಧಿಕಾರಿಗಳ ವಿರುದ್ಧ ಅಸಮದಾನ ವ್ಯಕ್ತಪಡಿಸಿದರು.
ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ ಸರ್ಕಾರಿ ಕೆಲಸ ದೇವರ ಕೆಲಸ ಆರೋಗ್ಯವೇ ಭಾಗ್ಯ ಎಂಬುದು ಸರ್ಕಾರದ ಸಂಬಳ ಪಡೆದು ಶ್ರೀಮಂತರ ಸೇವೆ ಮಾಡುವಂತಾಗಿದೆ. ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಸೂಜಿಯಿಂದ ಮಾತ್ರೆಯವರೆಗೂ ಖಾಸಗಿ ಮೆಡಿಕಲ್ ಸ್ಟೋರ್‍ಗಳಿಗೆ ಬರೆದುಕೊಡುವ ಜೊತೆಗೆ ವೈದ್ಯರು ಬಡವರ ಮೈಮುಟ್ಟಲು ಅಸತ್ಯ ಪಟ್ಟು ನರ್ಸ್‍ಗಳು ಚಿಕಿತ್ಸೆ ಕೊಡುವ ಪರಿಸ್ಥಿತಿ ಇದೆ. ಮತ್ತೊಂದಡೆ ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪರಿಸ್ಥಿತಿಯಂತು ಕೇಳುವಂತಿಲ್ಲ. ಅದರ ಜೊತೆಗೆ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಡೆಂಗ್ಯೂ, ವೈರಲ್ ಪೀವರ್ ಮತ್ತಿತರ ಸಾಂಕ್ರಾಮಿಕ ರೋಗಗಳಿಂದ ತತ್ತರಿಸಿರುವ ಜನ ಸಾಮನ್ಯರಿಗೆ ಪ್ರಪಂಚವನ್ನೇ ತಲ್ಲನಗೊಳಿಸುತ್ತಿರುವ ಕರೋನ ವೈರಸ್ ಬೀತಿಯಿಂದ ಜನ ಸಾಮಾನ್ಯರು ಭಯಬೀತರಾಗಿದ್ದಾರೆ. ಮತ್ತೊಂದಡೆ ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಜನ ಸಾಮಾನ್ಯರಲ್ಲಿ ರೋಗ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸಲು ಮೌನವಾಗಿರುವುದರ ವಿರುದ್ಧ ಜನ ಸಾಮಾನ್ಯರು ಅಸಮದಾನ ವ್ಯಕ್ತಿಪಡಿಸುವ ಜೊತೆಗೆ ಸರ್ಕಾರದಿಂದ ಬರುವ ಆಸ್ಪತ್ರೆ ಅಭಿವೃದ್ಧಿ ಹಣವನ್ನು ನುಂಗಿ ನೀರು ಕುಡಿಯುತ್ತಿದ್ದಾರೆ. ಮತ್ತೊಂದಡೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯನ್ನು 14ರ ಹಣಕಾಸು ಯೋಜನೆಯಡಿಯಲ್ಲಿ ಬರುವ ಅನುದಾನವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನುಂಗಿ ನೀರು ಕುಡಿಯುತ್ತಿದ್ದಾರೆ. ಅಸಮದಾನ ವ್ಯಕ್ತಪಡಿಸುವ ಜೊತೆಗೆ ಕೂಡಲೇ ಮಾನ್ಯ ಜಿಲ್ಲಾ ಆರೋಗ್ಯ ಅಧಿಕಾರಿಗಳು ಕರೋನಾ ಹಾಗೂ ಮತ್ತಿತರ ಸಾಂಕ್ರಾಮಿಕ ರೋಗಗಳ ಲಕ್ಷಣಗಳ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿ, ಮುಂದೆ ಆಗುವ ಸಮಸ್ಯೆಯನ್ನು ತಪ್ಪಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಕುಟುಂಬ ಆರೋಗ್ಯ ಅಧಿಕಾರಿ ಭಾರತಿ ರವರು ಕರೋನಾ ವೈರಲ್ ರೋಗದ ಬಗ್ಗೆ ಜನ ಸಾಮಾನ್ಯರ ಭಯ ಪಡಬೇಕಾದ ಅವಶ್ಯಕತೆ ಇಲ್ಲ. ಈರೋಗದ ಬಗ್ಗೆ ಜನ ಸಾಮಾನ್ಯರಲ್ಲಿ ಕರ ಪತ್ರದ ಮುಖಾಂತರ ಜಾಗೃತಿ ಮೂಡಿಸುವ ಜೊತೆಗೆ ಜಿಲ್ಲಾದ್ಯಂತ ಎಲ್ಲಾ ಪ್ರಾಥಮಿಕ ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ನಿರ್ಲಕ್ಷೆ ಮಾಡುವಂತಿಲ್ಲ. ನಿರ್ಲಕ್ಷೆ ಮಾಡಿದರೆ, ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.

ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಮರಲಗ್ ಶ್ರೀನಿವಾಸ್, ಜಿಲ್ಲಾ ಗೌರವಾಧ್ಯಕ್ಷ ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ವಕ್ಕಲೇರಿ ಹನುಮಯ್ಯ, ಈಕಂಬಳ್ಳಿ ಮಂಜುನಾಥ, ಅನುಶ್ರೀ, ನಲ್ಲಂಡಹಳ್ಳಿ ಕೇಶವ, ವೇಣು, ಪುತ್ತೇರಿ ರಾಜು ಮೀಸೆ ವೆಂಕಟೇಶಪ್ಪ, ಸಹದೇವಣ್ಣ, ಮಾಸ್ತಿ ವೆಂಕಟೇಶ್, ವಡ್ಡಹಳ್ಳಿ ಮಂಜುನಾಥ ಗಣೇಶ್, ಪ್ರತಾಪ್, ಸುಪ್ರಿಂಚಲ, ರಂಜಿತ್, ಸಾಗರ್, ಶಿವ, ಮುಂತಾದವರಿದ್ದರು.