ಕಥೊಲಿಕ್ ಸಭಾ- ಜಾನ್ ಡಿಸಿಲ್ವಾ ಫೌಂಡೆಶನ್ ಇವರಿಂದ ಪ್ರತಿಭಾ ಪುರಸ್ಕಾರ- ಸ್ಕಾಲರ್‍ಶಿಪ್ ವಿತರಣೆ- ಆರೋಗ್ಯ ಕಾರ್ಡ್ ವಿತರಣೆ

ಕಥೊಲಿಕ್ ಸಭಾ- ಜಾನ್ ಡಿಸಿಲ್ವಾ ಫೌಂಡೆಶನ್ ಇವರಿಂದ ಪ್ರತಿಭಾ ಪುರಸ್ಕಾರ- ಸ್ಕಾಲರ್‍ಶಿಪ್ ವಿತರಣೆ- ಆರೋಗ್ಯ ಕಾರ್ಡ್ ವಿತರಣೆ

ಕಥೊಲಿಕ್ ಸಭಾ – ಜಾನ್ ಡಿಸಿಲ್ವಾ ಫೌಂಡೆಶನ್ ಇವರಿಂದ ಪ್ರತಿಭಾ ಪುರಸ್ಕಾರ- ಸ್ಕಾಲರ್‍ಶಿಪ್ ವಿತರಣೆ – ಆರೋಗ್ಯ ಕಾರ್ಡ್ ವಿತರಣೆ
ಕುಂದಾಪುರ,ಸೆ.1: ’ನಾವು ಎನೆಂದು ಅರ್ಥೈಸಿಕೊಳ್ಳಬೇಕು, ಆವಾಗ ನಮ್ಮ ಸಾಮಥ್ರ್ಯ ಅರಿವಾಗುವುದು, ಯೋಚಿಸು ಆಗುತ್ತದೊ ಇಲ್ಲವೊ, ಯೋಚಿಸು ಆಗುವುದಿಲ್ಲವೋ ಎಂದು ನಾವು ನಿರ್ಧಾರ ಮಾಡಬೇಕು, ಪ್ರಯತ್ನ ಪಟ್ಟರೆ ಆಸಾಧ್ಯ ಎಂಬುದು ಎನೂ ಇಲ್ಲಾ. ನಾವೂ ಆಗುತ್ತೇನೆ ಎಂಬುದು ಗಟ್ಟಿ ನಿರ್ಧಾರ ಮಾಡಿದರೆ, ಅದು ನಮ್ಮ ಜಿವಿತದಲ್ಲಿ ಎನಾಗಬೇಕೆಂಬುದು ಅದು ಆಗಿಯೆ ಆಗುತ್ತದೆ, ಹಾಗಾಗಿ ನಾವು ಒಳ್ಳೆದು ಮಾಡಿ ಕಲಿತು, ಸರ್ಕಾದಿ ಹುದ್ದೆಗಳನ್ನು ಗಳಿಸಿಕೊಂಡು ಸಮಾಜ ಸೇವೆ ಮಾಡಬೇಕು’ ಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಪಿಂಟೊ ದೀಪ ಬೆಳಗಿಸಿ ಅವರು ಮಾತಾನಾಡಿದರು.
ಅವರು ಜಾನ್ ಡಿಸಿಲ್ವಾ ಫೌಂಡೆಶನ್ ಮುಂಬಯಿ ಮತ್ತು ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಇವರ ಸಹಯೋಗದಲ್ಲಿ ಕುಂದಾಪುರ ಕಲಾಮಂದಿರದಲ್ಲಿ ನಡೆದ ಬ್ರಹತ್ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಸ್ಕಾಲರ್‍ಶಿಪ್ ವಿತರಣೆ ಹಾಗೂ ಆರೋಗ್ಯ ಕಾರ್ಡ್ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತಾನಾಡುತಿದ್ದರು. ‘ಕಥೊಲಿಕ್ ಸಭಾ ಸಂಘಟನೇಯು ಸಮಾಜಕ್ಕೆ ಒಳಿತಾಗುಗುವ ಹಲವು ಕೆಲಸಗಳನ್ನು ಮಾಡುತಿದ್ದೆ ಅದರಲ್ಲಿ ಒಂದು ಆರೋಗ್ಯ ಕಾರ್ಡ್ ಮಾಡಿ ಕೊಡುವುದು. ಈ ಅತ್ಯುತ್ತಮ ಸೇವೆ ಅರಿತು, ನಮ್ಮ ರಾಜ್ಯ ಮಾತ್ರವಲ್ಲಾ ದೇಶದ ಧರ್ಮಪ್ರಾಂತ್ಯಗಳು ಈ ಯೋಜನೆಯನ್ನು ತಮ್ಮ ಧರ್ಮಪ್ರಾಂತ್ಯದಲ್ಲಿಯೂ ಹಮ್ಮಿಕೊಳ್ಳಲು ನಮ್ಮ ನೆರವು ಕೋರಿದೆ’ ಎಂದು ತಿಳಿಸಿದರು.
ಮುಖ್ಯ ದಿಕ್ಸೂಚಿ ಭಾಷಣಕಾರದ ಡೆಪ್ಯೂಟಿ ರೇಂಜ್ ಫಾರೆಸ್ಟ್ ಅಧಿಕಾರಿ ಶಾಮಾನ್ ಕ್ಯಾಸ್ಟೆಲೀನೊ ‘ನಾನು ಸ್ನಾನಕೋತ್ತರ ಪದವಿ ಪಡೆದರೂ, ತಣ್ಣಗೆ ಕುಳಿಯದೆ, ಉನ್ನತ ಮಟ್ಟದ ವ್ಯಾಸಂಗ ಮಾಡಬೇಕೆಂದು ನಿರ್ಧಾರದಂತೆ, ಸರ್ಕಾರಿ ಉನ್ನತ ವ್ಯಾಸಂಗ ಮಾಡಿ ಪರೀಕ್ಷೆಗಳನ್ನು ಕಟ್ಟಿ ಉತೀರ್ಣಳಾಗಿ ಈ ಹುದ್ದೆಯನ್ನು ಪಡೆದಿದ್ದೆನೆ. ಅನೇಕ ರೀತಿಯ ಸರ್ಕಾರಿ ಹುದ್ದೆಗಳು ಇವೆ, ಅದನ್ನು ನಾವು ತಿಳಿದವರ ಜೊತೆ ತಿಳಿದುಕೊಂಡು ವ್ಯಾಸಂಗ ಮಾಡಿ ಸರ್ಕಾರಿ ಹುದ್ದೆಗಳನ್ನು ಪಡೆದುಕೊಳ್ಳಬೇಕು’ ಎಂದು ವಿವರಿಸಿದರು.
ಒಂದು ಸಾವಿರ ರೂಪಾಯಿ ಲೆಕ್ಕದಲ್ಲಿ 69 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದ ದಾನಿ ಜಾನ್ ಜಾನ್ ಡಿಸಿಲ್ವಾ ಫೌಂಡೆಶನ್ ಮುಂಬಯ್ ಇದರ ಅಧ್ಯಕ್ಷ ಜಾನ್ ಡಿಸಿಲ್ವಾ ಮಾತಾಡಿ ‘ಶಿಕ್ಷಣ, ಉದ್ಯೋಗ, ಸರ್ಕಾರಿ ಸೇವೆಯಲ್ಲಿ ನಾವು ಮುಂದಿರಬೇಕು, ಸ್ವದ್ಯೋಗ ಮಾಡಿ ಧನಿಗಳಾಗಿ ಇತರರಿಗೆ ಉದ್ಯೋಗ ನೀಡಿ ಎಂದರು. ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ದಾನಿಗಳಿ ಸಹಕಾರದೊಂದಿಗೆ 5 ಸಾವಿರ ರೂಪಾಯಿ ಲೆಕ್ಕದಲ್ಲಿ 40 ವಿದ್ಯಾರ್ಥಿಗಳಿಗೆ ಸ್ಕೊಲರ್‍ಶಿಪ್ ವಿತರಿಸಲಾಯಿತು.ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಾತ್ಮಿಕ ನಿರ್ದೇಶಕ ವಂ|ಫಾ|ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಂದಾಪುರ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕ ವಂ|ಫಾ| ಸ್ಟ್ಯಾನಿ ತಾವ್ರೊ ಪ್ರೇರಣೆಯ ಮಾತುಗಳನ್ನಾಡಿದರು. ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾರ್ಡರ್ಸ್ ‘ಕೇವಲ ಡಿಗ್ರಿಗಳಲ್ಲಿ ಯಶಸ್ಸು ಗಳಿಸಿದರೆ ಸಾಲದು, ಅದನ್ನು ನಿರಂತರ ಮುಂದುವರೆಸಿ, ಉನ್ನತ ಶಿಕ್ಷಣದಲ್ಲಿ ಯಶಸ್ಸನ್ನು ಪಡೆಯ ಬೇಕು ಎಂದು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಡಗಳನ್ನು ವಿತರಿಸಲಾಯಿತು ಸಂಚಾಲಕ ವಿವಿಯನ್ ಮತ್ತು ವೆರೋನಿಕಾ ಕರ್ನೇಲಿಯೊ ವಿವರಗಳನ್ನು ನೀಡಿದರು. ವೇದಿಕೆಯಲ್ಲಿ ಗ್ಲ್ಯಾಡಿಸ್ ಡಿಸಿಲ್ವಾ, ಕಾರ್ಯಕ್ರಮದ ಸಂಚಾಲಕ ಡಾ|ಜೆರಾಲ್ಡ್ ಪಿಂಟೊ, ಮಾಜಿ ಕಥೊಲಿಕ್ ಸಭಾ ಅಧ್ಯಕ್ಷ ಬಾಲೇರಿಯನ್ ಫೆರ್ನಾಂಡಿಸ್, ಖಜಾಂಚಿ ಜೆರಾಲ್ಡ್ ರೊಡ್ರಿಗಸ್, ಕುಂದಾಪುರ ಕಥೊಲಿಕ್ ಸಭಾದ ಅಧ್ಯಕ್ಷ ವಾಲ್ಟರ್ ಡಿ ಸೋಜಾ ಉಪಸ್ಥಿತರಿದ್ದರು. ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಕಾರ್ಯದರ್ಶಿ ವಂದಿಸಿದರು. ಉಪಾಧ್ಯಕ್ಷ ಫ್ಲಾಯ್ವನ್ ಡಿಸೋಜಾ ಮತ್ತು ಪ್ರಮೀಳಾ ಡೆಸಾ ಕಾರ್ಯಕ್ರಮವನ್ನು ನಿರೂಪಿಸಿದರು.