ಕಡೆ ಕಾರ್ತಿಕ ಸೋಮವಾರ ವಿಶ್ವೇಶ್ವರ ದರ್ಶನಕ್ಕೆ ಉಚಿತ ಬಸ್ ಸೇವೆ ಬಜರಂಗದಳದಿಂದ ಸ್ವಾಗತ ಕಮಾನು-ಕೇಸರಿಮಯವಾದ ಕೋಲಾರ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ದಕ್ಷಿಣ ಕಾಶಿಯೆಂದೇ ಖ್ಯಾತಿಯಾದ ನಗರದ ಅಂತರಗಂಗೆಯ ಕಾಶಿ ವಿಶ್ವೇಶ್ವರ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಕಡೆ ಸೋಮವಾರ ಅತ್ಯಂತ ವಿಶೇಷತೆ ಹೊಂದಿದ್ದು, ಲಕ್ಷಾಂತರ ಮಂದಿ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುವ ಹಿನ್ನಲೆಯಲ್ಲಿ ಭಜರಂಗದಳ,ವಿಹಿಂಪ ಸಂಘಟನೆಗಳು ಕಳೆದೆರಡು ದಿನಗಳಿಂದಲೇ ಸಿದ್ದತೆ ನಡೆಸಿವೆ.
ಅಂತರಗಂಗೆ ಬೆಟ್ಟಕ್ಕೆ ಬರುವ ಲಕ್ಷಾಂತರ ಭಕ್ತರನ್ನು ಸ್ವಾಗತಿಸಲು ನಗರದ ಬಸ್‍ನಿಲ್ದಾನದ ಸಮೀಪ ಬೃಹತ್ ಕಮಾನು ನಿರ್ಮಿಸಿರುವ ಬಜರಂಗದಳದ ಕಾರ್ಯಕರ್ತರು ಕಾಶಿ ವಿಶ್ವೇಶ್ವರಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗೆ ನೆರವಾಗಲು ಸಿದ್ದಗೊಂಡಿದ್ದಾರೆ.
ರಾಷ್ಟ್ರೀಯ ಬಜರಂಗದಳ ವಿಹಿಂಪ ಮುಖಂಡರು
ಬಜರಂಗದಳ ಪ್ರತಿ ವರ್ಷವೂ ಅತ್ಯಂತ ಅದ್ದೂರಿ ಹಾಗೂ ಶ್ರದ್ಧಾಭಕ್ತಿಗಳಿಂದ ಆಚರಿಸುವ ಕಾಶಿವಿಶ್ವೇಶ್ವರ ಸ್ವಾಮಿಯ ಕಡೆ ಕಾರ್ತಿಕ ಸೋಮವಾರದ ಜಾತ್ರೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಬಜರಂಗದಳ ವಿಹಿಂಪದ ರಾಜ್ಯ ಮತ್ತು ಜಿಲ್ಲಾ ಮುಖಂಡರು, ಸಂಸದ ಮುನಿಸ್ವಾಮಿ ಮತ್ತಿತರರು ಉಪಸ್ಥಿತರಿರಲಿದ್ದಾರೆ.
ಬೃಹತ್ ಕಮಾನುಗಳು ಕೇಸರಿಧ್ವಜಗಳ ಹಾರಾಟ
ಬಜರಂಗದಳ ಕಾರ್ಯಕರ್ತರು ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಭಕ್ತರನ್ನು ಸ್ವಾಗತಿಸುವ ದೊಡ್ಡ ಕಮಾನಿನೊಂದಿಗೆ ಇಡೀ ಪ್ರದೇಶದಲ್ಲಿ ಕೇಸರಿ ಧ್ವಜಗಳು ರರಾಜಿಸುವಂತೆ ಮಾಡಿದ್ದು, ಇಡೀ ಪ್ರದೇಶವೇ ಕೇಸರಿಮಯವಾಗಿದೆ.
ಕಡೆ ಕಾರ್ತಿಕ ಸೋಮವಾರದ ಜಾತ್ರೆ ಮತ್ತಷ್ಟು ವಿಜೃಂಭಣೆಯಿಂದ ನಡೆಸಲು ಪೂರ್ವಸಿದ್ದತೆ ನಡೆಸಿರುವ ಕಾರ್ಯಕರ್ತರು ಬಸ್‍ನಿಲ್ದಾಣ ವೃತ್ತದಲ್ಲಿ ಶ್ರೀರಾಮಚಂದ್ರ,ಹನುಮಾನ್, ಶಿವನ ಬೃಹತ್ ಕಟೌಟ್ ನಿರ್ಮಿಸಿ, ಇಡೀ ವೃತ್ತವನ್ನು ಕೇಸರಿಮಯಗೊಳಿಸಿದ್ದಾರೆ.
ಬರುವ ಭಕ್ತಾಧಿಗಳಿಗೆ ಉಚಿತ, ಪ್ರಸಾದ,ಕುಡಿಯುವ ನೀರು, ರಕ್ಷಣೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಬಜರಂಗದಳ ಕಾರ್ಯಕರ್ತರು ಕಳೆದೊಂದು ವಾರದಿಂದ ಶ್ರಮಿಸುತ್ತಿದ್ದಾರೆ.
ಉಚಿತ ಬಸ್ ಸೇವೆಗೆ ಸಂಸದರಿಂದ ಚಾಲನೆ
ಬಜರಂಗದಳದಿಂದ ನಗರದ ಬಸ್‍ನಿಲ್ದಾಣ ವೃತ್ತದಿಂದ ಉಚಿತ ಬಸ್ ಸೇವೆ ಸೋಮವಾರ ಮುಂಜಾನೆ 4 ಗಂಟೆಯಿಂದಲೇ ಆರಂಭಗೊಳ್ಳಲಿದ್ದು ಸಂಸದ ಎಸ್.ಮುನಿಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಸಂಘಟನೆಯ ಬಾಲಾಜಿ ಮತ್ತು ಬಾಬು ತಿಳಿಸಿದರು.
ಬಸ್ಸುಗಳು ಬೆಳಗ್ಗಿನಿಂದ ರಾತ್ರಿ ಭಕ್ತರನ್ನು ವಾಪಸ್ಸು ಕರೆತರುವವರೆಗೂ ಬಸ್‍ಗಳು, ಟೆಂಪೋಗಳು ಒಡಾಟ ನಡೆಸುತ್ತವೆ ಎಂದು ಸಂಘಟನೆಯ ಬಾಲಾಜಿ ಹಾಗೂ ಜಿಲ್ಲಾ ಸಂಚಾಲಕ ಬಾಬು ತಿಳಿಸಿದ್ದಾರೆ.
ಭಕ್ತರು ಸ್ವಾಮಿಯ ದರ್ಶನಕ್ಕೆ ಬರಲು ಯಾವುದೇ ಅಡ್ಡಿ ಆತಂಕಕ್ಕೆ ಅವಕಾಶವಿಲ್ಲದಂತೆ ಬಜರಂಗದಳದ ಯುವಕರು ಸ್ವಯಂ ಸೇವಕರಾಗಿ ಹಗಲಿರುಳು ಶ್ರಮಿಸಲು ಸಂಘಟಿತರಾಗಿದ್ದಾರೆ.
ಬರುವ ಭಕ್ತರಿಗೆ ಬಜರಂಗದಳ,ವಿಹಿಂಪ ಸಂಘಟನೆಗಳು, ಕಿಲಾರಿಪೇಟೆಯ ಗೋಕುಲ ಮಿತ್ರ ಬಳಗ ಮತ್ತಿತರ ನೂರಾರು ಸಂಘಟನೆಗಳು, ಭಕ್ತರು ಪ್ರಸಾದ ವಿನಿಯೋಗಕ್ಕೆ ಸಿದ್ದತೆ ನಡೆಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಮಹಿಳೆಯರು ಸೇರುವುದರಿಂದ ಇಲ್ಲಿನ ಪೊಲೀಸ್ ಬಂದೋಬಸ್ತ್ ಮಾಡಬೇಕಾದ ಹೊಣೆಯೂ ಜಿಲ್ಲಾಡಳಿತದ ಮೇಲಿದೆ. ಹಿಂದೂಗಳ ಪವಿತ್ರ ಕ್ಷೇತ್ರವಾದ ಅಂತರಗಂಗೆಯ ಮಹಿಮೆಗೆ ಧಕ್ಕೆಬಾರದಂತೆ ಬರುವ ಭಕ್ತರೂ ಸಹಾ ಸ್ವಚ್ಚತೆಗೆ ಒತ್ತು ನೀಡಬೇಕಾಗಿದೆ.
ಬಜರಂಗದಳದ ಬಾಲಾಜಿ,ಜಿಲ್ಲಾ ಸಂಚಾಲಕ ಬಾಬು, ಮುಖಂಡರಾದ ಅಪ್ಪಿ, ರವಿ, ಪವನ್, ವಿಶ್ವನಾಥ್, ಕೊಂಡೇ, ಪೃಥ್ವಿ,ಲೋಕೇಶ್, ಸಾಯಿ ಸುಮನ್, ಸಾಯಿಮೌಳಿ, ಮಹೇಶ್, ಪ್ರವೀಣ್, ಮೌಳಿ, ಮಂಜು, ದೀಪು, ಜೀವನ್‍ರಾಜ್,ಲೋಹಿತ್, ಯಶವಂತ್, ಭರತ್‍ಮತ್ತಿತರರು ಕಳೆದೆರಡು ದಿನಗಳಿಂದಲೇ ಸಿದ್ದತೆಗಳನ್ನು ನಡೆಸಿದ್ದಾರೆ
.