ಕಡಿಮೆ ಬಂಡವಾಳದಲ್ಲಿ ಉತ್ತಮ ಟಮ್ಯಾಟೊ ಇಳುವರಿ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಕಡಿಮೆ ಬಂಡವಾಳದಲ್ಲಿ ಉತ್ತಮ ಟಮ್ಯಾಟೊ ಇಳುವರಿ

 

ಶ್ರೀನಿವಾಸಪುರ:- ಕೃಷಿ ವ್ಯವಸ್ಥೆ ಇಂದು ದುಬಾರಿಯಾಗುತ್ತಿದೆ ಸಣ್ಣ ಪ್ರಮಾಣದ ವ್ಯವಸಾಯಕ್ಕೂ ದುಬಾರಿ ಬಂಡವಾಳ ಅನಿವಾರ್ಯವಾಗಿದೆ ಹಾಗಾಗಿ ಟಮ್ಯಾಟೊ ಬೆಳೆಯಲು ಲಕ್ಷಗಟ್ಟಲೆ ಬಂಡವಾಳ ಅಗತ್ಯವಾಗುತ್ತಿದೆ ಎಂದು ತೋಟಗಾರಿಕೆ ಕೃಷಿ ತಜ್ಞ, ನಿವೃತ್ತ ಪ್ರಾದ್ಯಪಕ ಡಾ,ಮುನಿಯಪ್ಪ ಹೇಳಿದರು. ಅವರು ಇಂದು ಪಟ್ಟಣದ ಹೊರವಲಯದಲ್ಲಿರುವಂತ ಮಾವಿನ ತಿರಳು ಜ್ಯೂಸ್ ಫ್ಯಾಕ್ಟರಿ ವೆಂಕಟಲಕ್ಷ್ಮೀ ಫುಡ್ಸ್ ಸಂಸ್ಥೆಯ ಅವರಣದಲ್ಲಿರುವಂತ ಟಮ್ಯಾಟೊ ತೋಟದಲ್ಲಿ ತೋಟಗಾರಿಕೆ ಬೆಳೆಗಾರರಿಗೆ ವೆಂಕಟಲಕ್ಷ್ಮೀ ಫುಡ್ಸ್ ಮತ್ತು ಒ.ಆರ್.ಬಿ.ಐ ಅಂತರಾಷ್ಟ್ರೀಯ ಬೀಜೋತ್ಪಾದನೆ ಸಂಸ್ಥೆ ಸಂಯುಕ್ತವಾಗಿ ಏರ್ಪಡಿಸಿದ್ದ ಕಡಿಮೆ ಬಂಡವಾಳದಲ್ಲಿ ಉತ್ತಮ ಟಮ್ಯಾಟೊ ಇಳುವರಿ ತಗೆಯುವುದು ಹೇಗೆ ಎಂಬುದ ಕುರಿತಾಗಿ ನಡೆಸಿದ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತಚಿಗೆ ಮಾರುಕಟ್ಟೆಗೆ ಬಂದಿರುವ ಎಫ್1 ಒ.ಜಿ.ಟಿ 1804 ನೂತನ ತಳಿಗಳು ಉದ್ದ ಬೆಳೆಯದೆ ಭೂಮಿಯಲ್ಲಿ ಹರಡಿಕೊಳ್ಳುವಂತೆÀ ಇಸ್ರೇಲ್ ಪದ್ದತಿಯಲ್ಲಿ ಬೆಳೆಯಬಹುದಾಗಿದೆ ಇದರಲ್ಲಿ ಉತ್ತಮ ಇಳುವರಿ ಬರಲಿದ್ದು ಹೆಚ್ಚಿನ ಖರ್ಚು ಅಗತ್ಯ ಇರುವುದಿಲ್ಲ ಇತರೆ ತಳಿಗಳನ್ನು ಬೆಳೆಯಲು ಆಗುವಂತ ಖರ್ಚಿಗೆ ಲೆಕ್ಕಹಾಕಿದರೆ ಈ ತಳಿಗಳನ್ನು ಶೇ%40 ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ತಗೆಯಬಹುದಾಗಿದೆ ಎಂದರು.
ಕಾರ್ಯಗಾರದಲ್ಲಿ ತೋಟಗಾರಿಕೆ ತಜÐರಾದ ತ್ರಿಪಾಠಿ, ಒ.ಆರ್.ಬಿ.ಐ ಸಂಸ್ಥೆ ಮಾಲಿಕ ಸಂಜಯ್ ದಿವೇದಿ. ಮಾರುಕಟ್ಟೆ ಮುಖ್ಯಸ್ಥ ರವಿ, ಮುಂತಾದವರು ಇದ್ದರು. ತೋಟಗಾರಿಕೆ ಬೆಳೆಗಾರರು ಹಾಜರಿದ್ದರು.