ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಎಲ್ಲಾ ನಾಗರೀಕ ಸೇವೆಗಳು ಒಂದೇ ಸೂರಿನಡಿ ಲಭ್ಯ-ಶ್ರೀ ಕೃಷ್ಣಬೈರೇಗೌಡ
ಕೋಲಾರ, ಜುಲೈ 01ವಿವಿಧ ಸರ್ಕಾರಿ ಮತ್ತು ಖಾಸಗಿ ಸೇವೆಗಳು ಸೇರಿದಂತೆ 56 ನಾಗರೀಕ ಸೇವೆಗಳನ್ನು ಒಂದೇ ಸೂರಿನಡಿ ನೀಡಲು ಕರ್ನಾಟಕ ಒನ್ ಸಮಗ್ರ ನಾಗರೀಕ ಸೇವಾ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣಬೈರೇಗೌಡ ಅವರು ತಿಳಿಸಿದರು.
ಇಂದು ನಗರದಲ್ಲಿ ಕರ್ನಾಟಕ ಒನ್ ಸಮಗ್ರ ನಾಗರೀಕ ಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಯೋಜನೆಯನ್ನು ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದರಲ್ಲಿ ಕರ್ನಾಟಕ ಸರ್ಕಾರ ಹಾಗೂ ನಿರ್ವಹಣಾ ಪಾಲುದಾರರು, ಬ್ಯಾಂಕಿಂಗ್ ಪಾಲುದಾರರು, ರಾಜ್ಯಸರ್ಕಾರ / ಕೇಂದ್ರಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಗರಸಭೆಗಳು ಈ ಯೋಜನೆಯ ಮುಖ್ಯ ಪಾಲುದಾರರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಒನ್ ಕೇಂದ್ರಗಳಲ್ಲಿ ನೀಡುವ ಸೇವೆಗಳಿಗೆ ಯಾವುದೇ ರೀತಿಯ ಸರಹದ್ದಿನ ನಿರ್ಬಂಧನೆ ಇರುವುದಿಲ್ಲ. ಆದ್ದರಿಂದ ಕೋಲಾರ ನಗರದಲ್ಲಿ ವಾಸಿಸುವ ಎಲ್ಲಾ ನಾಗರೀಕರು ಈ ಕೇಂದ್ರದ ಮೂಲಕ ದೊರೆಯುವ ಸೇವೆಗಳನ್ನು ಪಡೆದು ಸುಪಯೋಗಪಡಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಕೋಲಾರ ಕ್ಷೇತ್ರದ ಶಾಸಕರಾದ ಶ್ರೀನಿವಾಸಗೌಡ, ಜಿಲ್ಲಾಧಿಕಾರಿಗಳ
ಜೆ. ಮಂಜುನಾಥ್, ಕೋಲಾರ ತಹಶೀಲ್ದಾರರಾದ ಗಾಯತ್ರಿದೇವಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.