ಉದ್ಯಮಿ ಮುಂದಾಳು ಲಯನ್ಸ್ ಆರ್ಚಿಬಾಲ್ಡ್ ಕ್ವಾಡ್ರಸ್ (65) ಧೈವಾಧಿನರಾದರು

JANANUDI.COM NETWORK

ಉದ್ಯಮಿ ಮುಂದಾಳು ಲಯನ್ಸ್ ಆರ್ಚಿಬಾಲ್ಡ್ ಕ್ವಾಡ್ರಸ್ ಧೈವಾಧಿನರಾದರು
ಕುಂದಾಪುರ, ಕುಂದಾಪುರ ಹಂಗಳೂರಿನ, ಹೆಚ್ಚಿನವರ ಚಿರಪರಿಚಿತರಾದ ಉದ್ಯಮಿ, ಸಮಾಜದ ಮುಂದಾಳು, ಲಯನ್ಸ್ ಆರ್ಚಿಬಾಲ್ಡ್ ಕ್ವಾಡ್ರಸ್ ಒಕ್ಟೋಬರ್ 8 ರಂದು ಸಂಜೆ ಹ್ರದಯಾಘಾತದಿಂದ ಧೈವಾಧಿನರಾದರು. ಅವರಿಗೆ 65 ವರ್ಷ ಪ್ರಾಯವಾಗಿದ್ದು, ಆರ್ಚಿಬಾಲ್ಡ್ ಕ್ವಾಡ್ರಸ್ ರವರ ಮೊದಲ ಪತ್ನಿ ನಿಂಫ್ಹಾ ಕ್ವಾಡ್ರಸ್ ಧೈವಾಧಿರಾಗಿದ್ದು, ಅವರ ಹೆಣ್ಣ ಮಕ್ಕಳಾಗಿರುವ ಆ್ಯಂಡ್ರಿಯಾ / ನಿತಿನ್ ಲೋಬೊ (ಅಳಿಯ) ನತಾಶಾ/ಸಾಮ್ಯಿಯುಕ್ (ಅಳಿಯ), ರೈಶಾ, ಈಗಿನ ಪತ್ನಿ ರೀಟಾ ಗ್ರೇಸಿ ಮತ್ತು ಮಗಳಾದ ರೂತ್, ಹಾಗೇ ಮೊಮ್ಮಕ್ಕಳಾದ ಇವಾನಾ, ನೀಲ್ ಮತ್ತು ಅನಾವ್ ಇವರುಗಳನ್ನು ಅಗಲಿದ್ದಾರೆ.
ಆರ್ಚಿಬಾಲ್ಡ್ ಕ್ವಾಡ್ರಸ್ ರವರು ಖ್ಯಾತ ಕ್ವಾಡ್ರಸ್ ಮನೆತನದ ಭಾರತೀಯ ವಾಯು ಸೇನಾ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದ ಧೈವಾಧಿನ ವಿಕ್ಟರ್ ಮತ್ತು ಮೇರಿ ಕ್ವಾಡ್ರಸ್ ಪುತ್ರರಾಗಿದ್ದು, 1955 ಜನವರಿ 6 ರಂದು ಜನಿಸಿದ ಆರ್ಚಿಬಾಲ್ಡ್ ಹಲವು ವರ್ಷಗಳ ಕಾಲ ಅಬುಧಾಬಿಯಲ್ಲಿ ಸೇವೆ ಸಲ್ಲಿಸಿದ್ದರು. ಅವರು ಪತ್ರಿಕೋದ್ಯಮದಲ್ಲಿ ತರಬೇತಿ ಪಡೆದಿದ್ದರು. ಗಲ್ಫ್ ನಲ್ಲಿ ಸೇವೆ ಮುಗಿಸಿ ತಾಯ್ನಾಡಿಗೆ ಬಂದು ಉದ್ಯಮ ಆರಂಭಿಸಿದರು. ಅವರು ಕರಾವಳಿ ಝೋನನಲ್ಲಿ (ಪ್ರೋನ್ಸ್) ಚಟ್ಲಿ (ಆಹಾರ) ಫಿಡಿನ ಪ್ರಮುಖ ಡೀಲರ್ ಆಗಿದ್ದರು.
ಪಿಯುಸ್ ನಗರ್ ಚರ್ಚಿನಲ್ಲಿ ಸಕ್ರೀಯ ಸದಸ್ಯರಾಗಿದ್ದು, ಪಾಲನ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದರು. ಪಿಯುಸ್ ನಗರ್ ಚರ್ಚಿನ ಕಥೊಲಿಕ್ ಸಭಾ ಸಂಘಟನೇಯ ಅಧ್ಯಕ್ಷಾಗಿ ಸೇವೆ ಸಲ್ಲಿಸಿದ್ದರು. ಹಾಗೇ ಕಥೊಲಿಕ್ ಸಭಾ ಕುಂದಾಪುರ ವಲಯದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಹಂಗಳೂರಿನ ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯರಾಗಿ ಲಯನ್ಸ್ ಕ್ಲಬಿನಲ್ಲಿ ಹಲವು ರೀತಿಯ ಹುದ್ದೆಗಳಲ್ಲಿ ಅವರು ಅಲಂಕರಿಸಿದ್ದರು.
ಇವರ ಸಮಾಜಮುಖಿ ಸೇವೆಯಿಂದ ಹಂಗಳೂರು, ಕೋಟೆಶ್ವರ, ಕುಂದಾಪುರ ಪರಿಸರದಲ್ಲಿ ಚಿರಪರಿಚಿತರಾಗಿದ್ದರು. ಇವರ ಅಗಲಿಕೆಯಿಂದ ನೊಂದ ಕುಟುಂಬಕ್ಕೆ, ಜನನುಡಿ.ಕಾಮ್ ಸಾಂತ್ವಾನವನ್ನು ನೀಡುತದೆ, ಈ ನೋವು ಸಹಿಸಲು ಶಕ್ತಿ ನೀಡಲೆಂದು ಹಾರೈಸುತ್ತೇವೆ. ಜನನುಡಿ.ಕಾಮ್ ನ ಹಿತೈಶಿಗಳಾದ ಆರ್ಚಿಬಾಲ್ಡ್ ಕ್ವಾಡ್ರಸ್ ರವರಿಗೆ ಜನನುಡಿ.ಕಾಮ್ ಶ್ರದ್ದಾಂಜಲಿ ಅರ್ಪಿಸುತ್ತದೆ.

Funeral cortege leave residence at 3:30pm followed by mass at St. Pius x Church, Piusnagar, Hangloor at 4:00 pm on Saturday 10th October.