ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೇಯ ಅಧ್ಯಕ್ಷೆಯಾಗಿ – ಪ್ರಮೀಳಾ ಡೇಸಾ

ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೇಯ ಅಧ್ಯಕ್ಷೆಯಾಗಿ – ಪ್ರಮೀಳಾ ಡೇಸಾ

ಕುಂದಾಪುರ,ಜು.೧೮ ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ, ಉಡುಪಿ ಜಿಲ್ಲಾ -2020 ಸಾಲಿನ ನೂತನ ಅಧ್ಯಕ್ಷ್ಯೆಯಾಗಿ  ಪ್ರಮೀಳಾ ಡೇಸಾ ಕುಂದಾಪುರ, ಪಿಯುಸ್ ನಗರ್, ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  

  ಚುನಾವಣೆ ಪ್ರಕ್ರಿಯೆಯು ಉಡುಪಿ ಧರ್ಮಾಧ್ಯಕ್ಷರ ನಿವಾಸದ ಸಭಾಗೃಹದಲ್ಲಿ ಜಿಲ್ಲಾ ಸಂಘಟನೆಯ ನಿರ್ದೇಶಕರಾದ ವಂ|ಧರ್ಮಗುರು ರೆಜಿನಾಲ್ಡ್ ಪಿಂಟೊರವರು ಇವರ ನೇತ್ರದ್ವದಲ್ಲಿ ನಡೆಯಿತು.  

      ಈ ಸಾಲಿನ ಪದಾಧಿಕಾರಿಗಳು: ನಿಕಟಪೂರ್ವ ಅಧ್ಯಕ್ಷ: ಜೆನೆಟ್ ಬರ್ಬೋಜ, ಮುದರಂಗಡಿ ಆಗಿದ್ದು ಈ ಸಾಲಿನ  ಉಪಾಧ್ಯಕ್ಷೆಯಾಗಿ ಫಿಲೊಮೇನಾ ಕಾಸ್ಟೆಲೀನೊ, ಆಜೆಕಾರು. ಕಾರ್ಯದರ್ಶಿ ಪ್ರೆಸಿಲ್ವಾ ಆಳ್ವಾ, ಕಲ್ಮಾಡಿ. ಸಹಕಾರ್ಯದರ್ಶಿಯಾಗಿ ಹೆಲೆನ್ ಮೋನಿಸ್, ಪಾಂಬೂರ್. ಖಜಾಂಚಿಯಾಗಿ ಫ್ಲೇವಿಯಾ ಡಿಸೋಜ, ಶಿರ್ವಾ ‘ಮೊತಿಯಾಂ’ ಪತ್ರಿಕೆಯ ಸಂಪಾದಕಿಯಾಗಿ ಅನೀಶಾ ಪಿಂಟೊ, ಬ್ರಹ್ಮಾವರ.  ಸಹಸಂಪಾದಕಿಯಾಗಿ ನೋರಿನ್ ಲೋಬೊ, ಬಾರ್ಕೂರ್. ಕೇಂದ್ರೀಯ ಸಮಿತಿಯ ಸದಸ್ಯರಾಗಿ ಜೂಡಿತ್ ಫೆರ್ನಾಂಡಿಸ್, ಉದ್ಯಾವರ. ಶಾಂತಿ ಸುವಾರಿಸ್, ಪಡುಕೋಣೆ. ಅನಿತಾ ಕ್ವಾಡ್ರಸ್, ಕಣಜಾರು. ಇವರುಗಳು ಆಯ್ಕೆಯಾಗಿದ್ದಾರೆ.