ಉಡುಪಿ ಜಿಲ್ಲಾ ಮಟ್ಟದ ಸುಗಮ್ಯ ಮಹಿಳಾ ಒಕ್ಕೂಟ ಉದ್ಘಾಟನೆ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ – ಸ್ತ್ರೀ ಸಬಲೀಕರಣದಿಂದ ಗಾಂಧಿಜೀಯ ಕನಸು ನನಸು: ಬಿಶಪ್ ಐಸಾಕ್ ಲೋಬೊ

ಉಡುಪಿ ಜಿಲ್ಲಾ ಮಟ್ಟದ ಸುಗಮ್ಯ ಮಹಿಳಾ ಒಕ್ಕೂಟ ಉದ್ಘಾಟನೆ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ – ಸ್ತ್ರೀ ಸಬಲೀಕರಣದಿಂದ ಗಾಂಧಿಜೀಯ ಕನಸು ನನಸು: ಬಿಶಪ್ ಐಸಾಕ್ ಲೋಬೊ


ಉಡುಪಿ, ಮಾ.11: ‘ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ, ಭೌವ್ತಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಶಕ್ತಿಯನ್ನು ಹೊಂದಿ ಮಹಿಳೆ ಉತ್ತಮ ಸ್ಥಾನ ಹೊಂದುವುದಾದರೆ, ಅದು ನೀಜವಾದ ಮಹಿಳಾ ಸಬಲೀಕರಣ. ಇಂತಹ ಬದಲಾವಣೆ ತರುವಲ್ಲಿ ಸ್ವಸಹಾಯ ಗುಂಪುಗಳ ಮಹತ್ವ ಮುಖ್ಯವಾಗಿದೆ. ಗ್ರಾಮಗಳ ಉದ್ದಾರವೆ ದೇಶದ ಉದ್ದಾರ ಎಂದು ಹೇಳಿದ ಗಾಂಧಿಜಿಯ ಕನಸನ್ನು ಸ್ತ್ರೀಯರು ಸ್ವಸಹಾಯ ಗುಂಪುಗಳಿಂದ ನನಸನ್ನಾಗಿ ಮಾಡಬೇಕು’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಸಂದೇಶ ನೀಡಿದರು.
ಅವರು ಉಡುಪಿಯ ಮಥುರ ಕಲಾಭವನದಲ್ಲಿ ನೆಡೆದ ಜಿಲ್ಲಾ ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭ ಉಡುಪಿ ಜಿಲ್ಲಾ ಮಟ್ಟದ ಸುಗಮ್ಯ ಮಹಿಳಾ ಒಕ್ಕೂಟವನ್ನು ಕಳಸಿಗೆಯಲ್ಲಿ ಅಕ್ಕಿ ತುಂಬಿ ತೆಂಗಿನ ಕೊನೆಯ ಹೂವನ್ನು ಅರಳಿಸಿ ಉದ್ಘಾಟಿಸಿ ಮಾತನಾಡಿದರು ‘ಸ್ವಸಹಾಯ ಗುಂಪುಗಳಾಗಲಿ, ತಾಲೂಕು ಒಕ್ಕೂಟವಾಗಲಿ ಅಥವ ಜಿಲ್ಲಾ ಒಕ್ಕೂಟವಾಗಲಿ ಇದರ ಉದ್ದೇಶ ಬಡತನವನ್ನು ನಿರ್ಮುಲನೆ ಮಾಡಿ, ಅದರಲ್ಲೂ ಹಳ್ಳಿ ಪ್ರದೇಶದಲ್ಲಿರುವ ಹಿಂದುಳಿದ ವರ್ಗದವರನ್ನು ಸಬಲೀಕರಣ ಗೊಳಿಸುವುದು, ಗ್ರಾಮೀಣ ಮಹಿಳೆಯರಲ್ಲಿ ನಾಯಕತ್ವದ ಹುನರನ್ನು ಬೆಳೆಸಿ ಪೋಷಿಸುವುದು, ಪರ್ಸ್ಪರ   ಸಹಕಾರ ಹಸ್ತವನ್ನ್ತು ಚಾಚುವುದು, ಒಟ್ಟಾರೆ ಇನ್ನೊಬ್ಬರ ಬಾಳಿಗೆ ನೆರವಾಗುವುದು. ವ್ಯಕ್ತಿಯ ವ್ಯಕ್ತಿತ್ವವನ್ನು ಅರಳಿಸಿ ಅವರ ಬಾಳನ್ನು ಬೆಳಗಿಸುವುದು’ ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲಾ ಮಟ್ಟದ ಸ್ತ್ರೀ ಆಯೋಗದ ನಿರ್ದೇಶಕಿ ವಂ|ಭಗಿನಿ ಜಾನೆಟ್ ಫೆರ್ನಾಂಡಿಸ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಉಡುಪಿ ವಲಯ ಪ್ರಧಾನ ಅ|ವಂ| ವಾಲೇರಿಯನ್ ಮೆಂಡೊನ್ಸಾ, ಆಶಿರ್ವಚನವನ್ನು ನೇರವೆರಿಸಿದರು. ಉಪನಿರ್ದೇಶಕಿ ಮಹಿಳಾ ಮತ್ತು ಮಕ್ಕಳ ಅಭಿವ್ರದ್ದಿ ಇಲಾಖೆ ಉಡುಪಿ ಜಿಲ್ಲೆ ಗ್ರೇಸಿ ಗೊನ್ಸಾಲ್ವಿಸ್ ಇವರು ಮಹಿಳೆಯರ ಮಹತ್ವವನ್ನು ತಿಳಿಸಿ, ಮಹಿಳೆ ಅಂತರಾಷ್ಟ್ರೀಯ ಹಕ್ಕುಗಳನ್ನು ಇತೀಚೆಗಷ್ಟೆ ಪಡೆದೊಕೊಂಡಿದ್ದು, ಮಹಿಳೆಯ ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದ್ದಾರೆ, ಇನ್ನೂ ಕೂಡ ಅಭಿವ್ರದ್ದಿ ಸಬಲೀಕರಣ ಆಗ ಬೇಕೆಂದರು’ ವಂ|ಭಗಿನಿ ಜೀಟಾ ಡಿಸೋಜಾ, ರಾಜ್ಯ ಸಂಯೋಜಕಿ ಮಹಿಳಾ ಸಬಲಿಕರಣ ಯೋಜನೆ ‘ಕ್ರೋಸ್’ ಬೆಂಗಳೂರು ಇವರು ‘ಮಹಿಳೆಯರು ಜಿಲ್ಲಾ ಮಟ್ಟದ ಒಕ್ಕೂಟ ಆಗಿದೆಯೆಂದು ಸಮಾಧನ ಪಟ್ಟು ಸಮ್ಮನಿರಲು ಸಾಧ್ಯವಿಲ್ಲಾ, ಇನ್ನೂ ರಾಜ್ಯ ಮಟ್ಟದ ಒಕ್ಕೂಟದ ರಚನೆಯಾಗಬೇಕು, ಹಾಗೆ ಕೆಲವು ಕಡೆ ಈಗಾಗಲೇ ಇರುವಂತೆ ಮಹಿಳಾ ಸ್ವಸಹಾಯ ಬ್ಯಾಂಕ್ ಸ್ಥಾಪನೆ ಮಾಡುವಲ್ಲಿ ಶ್ರಮಿಸ ಬೇಕು’ ಹೇಳಿದರು. ಅನುಪಮಾ ಮಹಿಳಾ ಮಾಸಿಕ ಪ್ರಧಾನ ಸಂಪಾದಕಿ ಶಹನಾಜ್ ಎಮ್. ಇವರು ‘ಮಹಿಳೆಗೆ ಇನ್ನೂ ಸಂಪೂರ್ಣ ನ್ಯಾಯ ಸಿಗಲಿಲ್ಲಾ, ಹೆಣ್ಣು ಭ್ರೂಣ ಹತ್ಯೆ, ಕೊಲೆ ಅತ್ಯಾಚಾರ ನೆಡೆದೆ ಇದೆ, ಗಾಂಧೀಜಿ ಹೇಳಿದಂತೆ ನಡು ರಾತ್ರಿಯಲ್ಲಿ ಒರ್ವ ಮಹಿಳೆ ಸುರಕ್ಷಿತವಾಗಿ ಮನೆಗೆ ತಲಪುವ ಸ್ಥಿತಿ ಬಂದಲ್ಲಿ ಮಾತ್ರ ನೀಜವಾದ ಸಬಲೀಕರಣವಾಗುತ್ತದೆ’ ಎಂದರು
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕೇಂದ್ರ ಸ್ತ್ರೀ ಸಂಘಟನೇಯ ಮಾಜಿ ಅಧ್ಯಕ್ಷೆಯರಾದ, ಲೀನಾ ರೋಚ್, ಬ್ರಹ್ಮಾವರ, ವೈಲೆಟ್ ಕಾಸ್ತೆಲೀನೊ ಪಾಂಬುರು, ಜೆನಿಫರ್ ಮಿನೇಜೆಸ್ ಬ್ರಹ್ಮಾವರ, ಸ್ಮಿತಾ ರೇಂಜರ್ ಮಿಯಾರ್, ಐರಿನ್ ಪಿರೇರಾ ಉದ್ಯಾವರ, ಜೂಡಿತ್ ಫೆರ್ನಾಂಡಿಸ್ ಉದ್ಯಾವರ, ಹಾಗೇ ಪ್ರಸ್ತೂತ ತಾಲೂಕು ಒಕ್ಕೂಟಗಳ ಅಧ್ಯಕ್ಷೆಯರಾದ ವಲೇರಿಯಾ ಕುಟಿನ್ಹಾ, ಕಾರ್ಕಳದ ಅರ್ಪಣ ಒಕ್ಕೂಟ, ಪ್ರಮೀಳಾ ಡೆಸಾ ಕುಂದಾಪುರ-ಬೈಂದೂರಿನ ಭಾವನ ಒಕ್ಕೂಟ, ಜ್ಯೋತಿ ಲುವಿಸ್ ಬ್ರಹ್ಮಾವರದ ಉಜ್ವಲಾ ಒಕ್ಕೂಟ, ಟ್ರೀಜಾ ಮಾಚಾದೊ ಕಾಪುವಿನ ಇಂಚರ ಒಕ್ಕೂಟ ಹಾಗೂ ಹೆಜೆಲ್ ಡಿಲೀಮಾ ಉಡುಪಿಯ ಶರಧಿ ಒಕ್ಕೂಟ ಇವರನ್ನು ಸನ್ಮಾನಿಸಲಾಯಿತು.
ಈ ಒಕ್ಕೂಟಗಳನ್ನು ರಚಿಸಲು ಶ್ರಮಿಸಿದ ಸಂಪದ ಉಡುಪಿ ಇದರ ಆಳಿತ ನಿರ್ದೇಶಕ ವಂ|ಧರ್ಮಗುರು ರೆಜಿನಾಲ್ಡ್ ಪಿಂಟೊ ತಾಲೂಕು ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಒಕ್ಕೂಟ ರಚಿಸಲು ಹೊಣೆ ಕೊಟ್ಟ ಬಿಶಪ್ ಜೆರಾಲ್ಡ್ ಐಸಾಕ್ ಲೋಬೊರವರಿಗೆ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳಿಗೆ ಮತ್ತು ಆಡಳಿತ ವರ್ಗದವರಿಗೆ, ಹಾಗೆಯೇ ಜಿಲ್ಲೆಯ ಒಕ್ಕೂಟದಲ್ಲಿ ಭಾಗಿಯಾದ ಸುಮಾರು 8 ಸಾವಿರ ಮಹಿಳೆಯರ ಸಹಕಾರಕ್ಕಾಗಿ ಕ್ರತ್ಞತೆಯನ್ನು ಸಲ್ಲಿಸಿದರು. ಈ ಕಾರ್ಯಕ್ರದಲ್ಲಿ ಕೆಥೊಲಿಕ್ ಸ್ವಸಹಾಯ ಸಂಘಗಳಲ್ಲದೆ, ಮುಸ್ಲಿಮ್ ಮತ್ತು ಹಿಂದೂ ಸ್ವಸಹಾಯ ಸಂಘಗಳ ಮಹಿಳೆಯರು ಭಾಗವಹಿಸಿದ್ದರು ಕೇಂದ್ರಿಯ ಸ್ತ್ರೀ ಸಂಘಟನೆ ಅಧ್ಯಕ್ಷೆ ಜೆನೆಟ್ ಬಾರ್ಬೊಜಾ ಸ್ವಾಗತಿಸಿದರು, ಕಾರ್ಯದರ್ಶಿ ಕ್ಲೋಟಿಲ್ಡಾ ಡಿಸೋಜಾ ವಂದಿಸಿದರು. ವಿನಯಾ ಡಿಕೋಸ್ತಾ ಕುಂದಾಪುರ ಮತ್ತು ಸ್ಟ್ಯಾನ್ಲಿ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು,