ಉಡುಪಿ ಜಿಲ್ಲಾ ಪಂಚಾಯತ್ ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ,ರೋಟರಿ ಕ್ಲಬ್ ಕುಂದಾಪುರ ಸೌತ್ ಇವರಿಂದ ಆಶಾ ಸನ್ಮಾನ

JANANUDI.COM NETWORK

 

ಉಡುಪಿ ಜಿಲ್ಲಾ ಪಂಚಾಯತ್ ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ,ರೋಟರಿ ಕ್ಲಬ್ ಕುಂದಾಪುರ ಸೌತ್ ಇವರಿಂದ ಆಶಾ ಸನ್ಮಾನ 

 

 

ಕುಂದಾಪುರ, ಫೆ.26: ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಉಡುಪಿ ಹಾಗೂ ರೋಟರಿ ಕ್ಲಬ್ ಕುಂದಾಪುರ ಸೌತ್ ಇವರಿಂದ ಆಶಾ ಕಾರ್ಯಕರ್ತೆಯವರಿಗೆ ಆಶಾ ಸನ್ಮಾನ ಕಾರ್ಯಕ್ರಮವನ್ನು ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿಯವರ ಕಚೇರಿಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ|ನಾಗ ಭೂಷಣ ಉಡುಪ ಆಶಾ ಕಾರ್ಯಕರ್ತೆಯರಿಂದ ರೋಗಿಗಳಿಗೆ, ಘಾಯಳುಗಳಿಗೆ ತ್ವರಿತ ರೀರಿಯಲ್ಲಿ ಸೇವೆ ದೊರಕುತ್ತದೆ. ಆರೋಗ್ಯಕ್ಕೆ ಸಭಂದ್ದ ಪಟ್ಟ ಮಾಹಿತಿಗಳನ್ನು ಜನರಿಗೆ ತಲುಪಿಸುವ ಧನಾತ್ಮಕವಾದ ಚಿಂತನೆಯಿಂದ ಸಮಾಜ ಆರೋಗ್ಯಕರವಾಗಾವುವ ಶಕ್ತಿ ನಿವಾಗಿದ್ದಿರಿ’ ಎಂದು ಸ್ವಾಗತಿಸುತ್ತಾ ಪ್ರಸ್ತಾವಿಕ ನುದಿಗಳನ್ನಾಡಿದರು. ಕುಂದಾಪುರ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ರಾಮ ಕಿಷನ್ ಹೆಗ್ಡೆ ‘ಆಶಾ ಕಾರ್ಯಕರ್ತೆಯರ ಸೇವೆ ಅಮುಲ್ಯವಾದುದು, ತಾವು ಹಳ್ಳಿಗಳಲ್ಲಿ ಹೋಗಿ ಏನು ತಿಳಿಯದ ಜನರಿಗೆ ಸಮರ್ಪಕವಾದ ಮಾಹಿತಿ ನೀಡಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ನಿಮ್ಮ ಶ್ರಮ ದೊಡ್ಡದು’ ಎಂದು ಹೆಳಿದರು.
ರೋಟರಿ ಜೋನ್ 3182 ರ ಅಸಿಸ್ಟೆಂಟ್ ಗವರ್ನರ್ ರವಿರಾಜ್ ಶೆಟ್ಟಿ ಮಾತಾಡಿ ”ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯವಾಗಿದೆ, ಇವತ್ತು ನಮ್ಮ ಭಾರತ ಪೆÇೀಲಿಯ ಮುಕ್ತವಾಗಲು ಆಶಾ ಕಾರ್ಯಕರ್ತೆಯರ ಪಾಲು ಬಹಳಸ್ಟು ಇದೆ’ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ರೋಟರಿ ಕ್ಲಬ್ ಕುಂದಾಪುರ ಸೌತ್ ಇದರ ಅಧ್ಯಕ್ಷ ದೇವರಾಜ್ ಕೆ. ಮಾತಾಡಿ ‘ಆಶಾ ಕಾರ್ಯಕರ್ತೆಯರ ಸೇವೆ ಸಮಾಜಕ್ಕೆ ಬಹಳಸ್ಟು ಸಿಗುತ್ತದೆ, ನಮ್ಮ ರೋಟರಿಯಿಂದ ನಡೆಯುವ ಆರೋಗ್ಯದ ಯೋಜನೆಗಳು ಯಶಸ್ವಿಯಾಗಲು ನಿಮ್ಮ ಸಹಕಾರ ಅಪೂರ್ವವಾದದ್ದು’ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ನಿಯಗಳಂತ್ತೆ ಆಶಾ ಕಾರ್ಯಕರ್ತೆಯರನ್ನು ಆರಿಸಿ ಅತ್ಯುತ್ತಮರೆಂದು ಆರಿಸಿ ಬಂದ ಮೂವರು ಆಶಾ ಕಾರ್ಯಕರ್ತೆಯರನ್ನು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು, ಸರೋಜ ಶೆಟ್ಟಿ, ಸಿದ್ದಾಪುರ ಪ್ರಥಮ ಸ್ಥಾನ, ಸುಜಾತ, ಕೂರ್ಗಿ ದ್ವೀತಿಯ ಸ್ಥಾನ, ಜ್ಯೋತಿ ಬೆಳ್ವೆ ತ್ರತೀಯ ಸ್ಥಾನಿಕರಾಗಿ ಕ್ರಮವಾಗಿ ರೂ. 2500, 1500, 1000 ಮೊತ್ತವನ್ನು ಅವರು ಪಡೆದುಕೊಂಡರು. ಸುಶೀಲ ಇವರು ಲಕ್ಕಿ ಡ್ರಾ ನಲ್ಲಿ ಚಿನ್ನದ ಅಭರಣವನ್ನು ಪಡೆದುಕೊಂಡರು. ಕುಂದಾಪುರ ಸಹಾಯಕ ಕ್ರಷಿ ನಿರ್ದೇಶಕರಾದ ಸಂಜೀವ ನಾಯಕ್, ಆಶಾ ಕಾರ್ಯಕರ್ತೆಯವರಿಗೆ ಮಲ್ಲಿಗೆ ಗೀಡಗಳನ್ನು ವಿತರಿಸಿದರು. ಅವಿಭಜಿತ ಕುಂದಾಪುರ ಬೈಂದೂರು ತಾಲೂಕಿನ 370 ಕಾರ್ತಕರ್ತೆಯರಿಗೆ ಸಮವಸ್ತ್ರದ ಸೀರೆಗಳನ್ನು ಹಂಚಲಾಯಿತು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಆಶಾ ಮೆಂಟರ್ ರೀಟಾ ಕುಂದಾಪುರ ತಾಲೂಕು ಆಶಾ ಮೆಂಟರ್ ಅನಿತಾ ಉಪಸ್ಥಿತರಿದ್ದರು. ಹಿರಿಯ ಆರೋಗ್ಯ ಸಹಾಯಕರು ಟಿ.ಎನ್.ಒ. ಕಚೇರಿ ರಮೇಶ್ ಶೆಟ್ಟಿ ನಿರೂಪಿಸಿ ಧನ್ಯವಾದಗಳನ್ನು ಅರ್ಪಿಸಿದರು.