JANANUDI.COM NETWORK
ಇಂಜಿನಿಯರಿಂಗ್ ಮತ್ತು ಎಂಬಿಎ ಆಕಾಂಕ್ಷಿಗಳಿಗೆ ಐ ಎಂ ಜೆ ಫೌಂಡೇಶನ್ (ರಿ.) ಸಹಾಯಧನ – ಪಡೆದವರಿಂದ ಪ್ರೇರಣೆಯ ಮಾತುಗಳು
ಮಾಜಿ ಸಂಸದ ಮತ್ತು ಸಮಾಜ ಸೇವಕ ದಿ ಐ ಎಂ ಜಯರಾಮ ಶೆಟ್ಟಿ ಸ್ಮರಣಾರ್ಥ ಸ್ಥಾಪಿಸಲ್ಪಟ್ಟ ಐ ಎಂ ಜೆ ಫೌಂಡೇಶನ್ ವತಿಯಿಂದ, ಎಂ ಐ ಟಿ ಕುಂದಾಪುರ ಕಾಲೇಜಿಗೆ ಪ್ರವೇಶ ಪಡೆಯುವ ಪ್ರತಿಭಾನ್ವಿತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ರೂ. 20000 ದಿಂದ ರೂ. 65000 ವರೆಗೆ ಸ್ಕಾಲರ್ಷಿಪ್ ದೊರೆಯಲಿದೆ.
ಈ ಸೌಲಭ್ಯವನ್ನ ಪಡೆಯಲು 6364220118 ಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು ಐ ಎಂ ಜೆ ಫೌಂಡೇಶನ್ ನಡೆಸುವ ಕೌನ್ಸೆಲಿಂಗ್ ನಲ್ಲಿ ಭಾಗವಹಿಸ ಬೇಕಾಗುತ್ತದೆ. ಕೌನ್ಸೆಲಿಂಗ್ ನ ಸಂದರ್ಶನದಲ್ಲಿ ಅರ್ಹತೆ ಮತ್ತು ಆದಾಯದ ದಾಖಲೆ ಪರಿಗಣಿಸಿ ಸ್ಕಾಲರ್ಷಿಪ್ ಹಣವನ್ನ ಅಂತಿಮಗೊಳಿಸಲಾಗುವುದು. ಲಾಕ್ ಡೌನ್ ಸಮಯದಲ್ಲಿ ನಷ್ಟ ಅನುಭವಿಸಿದ ಹೆಚ್ಚಿನ ಪೋಷಕರಿಗೆ ಮಕ್ಕಳ ಫೀಸು ಕಟ್ಟಲು ಫೌಂಡೇಶನ್ ಕೊಡುತ್ತಿರುವ ಈ ಸೌಲಭ್ಯ ಬಹಳಷ್ಟು ಸಹಕಾರಿಯಾಗಲಿದೆ.
ಕೌನ್ಸೆಲಿಂಗ್ ಹಾಜರಾಗುವುದರಿಂದ ಸ್ಕಾಲರ್ಷಿಪ್ ಜೊತೆಯಲ್ಲಿ ಶಿಕ್ಷಣ ಸಾಲ, ಸರ್ಕಾರದಿಂದ ಸಿಗುವ ಸವಲತ್ತುಗಳು, ಪ್ಲೇಸ್ಮೆಂಟ್, ಮತ್ತು ಉನ್ನತ ವ್ಯಾಸಂಗ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಜ್ಞರ ಮೂಲಕಕೊಡಲಾಗುವುದು.
“ಐ ಎಂ ಜೆ ಫೌಂಡೇಶನ್ ಸ್ಕಾಲರ್ಷಿಪ್ ಇಂದ ನನ್ನ ಇಂಜಿನಿಯರ್ ಆಗುವ ಕನಸು ನನಸಾಯ್ತು. ಕಾಲೇಜಿನ ಪ್ರಾಧ್ಯಾಪಕರ ಪ್ರೋತ್ಸಹ ಮತ್ತು ಉತ್ತಮ ಶಿಕ್ಷಣ ದಿಂದ ಕ್ಯಾಂಪಸ್ ನಲ್ಲೆ ಉದ್ಯೋಗ ಲಭಿಸುವಂತಾಯ್ತು.”
ಗುರುಚರಣ್ ಬೈಂದೂರು, ಸಾಫ್ಟ್ ವೆರ್ ಇಂಜಿನಿಯರ್, ತಂತ್ರಜ್ಞಾನ ಕಂಪನಿ, ಬೆಂಗಳೂರು.
“ನಾನು ಐ ಎಂ ಜೆ ಫೌಂಡೇಶನ್ ಕೌನ್ಸೆಲಿಂಗ್ ನಲ್ಲಿ ಭಾಗಿಯಾಗಿದೆ.
ಅಲ್ಲಿ ನನಗೆ ತಜ್ಞರಿಂದ ಉತ್ತಮ ಮಾರ್ಗದರ್ಶನ ದೊರೆಯಿತು.
ಹಾಗೆಯೆ ನನ್ನ ಸಂಪೂರ್ಣ ಶುಲ್ಕವನ್ನ ಫೌಂಡೇಶನ್ ಕಡೆಯಿಂದ ಭರಿಸಲಾಯಿತು”.
ರಶ್ಮಿತಾ ಪೂಜಾರಿ,
ಡಿಸೈನ್ ಇಂಜಿನಿಯರ್,
ಆರ್. ಜಿ. ಬಿ. ಎಸ್. ಐ. ಬೆಂಗಳೂರು.