JANANUDI.COM NETWORK

ಕುಂದಾಪುರ, ಒ.14: ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾಗಿರುವ ಆಶಾ ಕರ್ವಾಲ್ಲೊ ಇವರನ್ನು, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ಗೀತಾ ವಾಗ್ಲೆಯವರು ಬೈಂದೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಗೆ ಮುಂದಿನ ಒಂದು ವರ್ಷದ ಅವಧಿಗೆ ವೀಕ್ಷಕರನ್ನಾಗಿ ಆರಿಸಿ ಆದೇಶಿದ್ದಾರೆಎಲ್ಲಾ ಎಲ್ಲಾ ಬ್ಲಾಕ್ ಸಮಿತಿ ಪುನಾರಚನೆ ಹಾಗೂ ಸಮಿತಿಗಳನ್ನು ರಚಿಸ ಬೇಕೆಂಬ ಮಹಿಳಾ ಕಾಂಗ್ರೆಸ್ ರಾಜ್ಯಧ್ಯಕ್ಷೆ ಡಾ|ಪುಸ್ಪ ಅಮರನಾಥ್ ಅವರ ಯೋಜನೆಯಂತ್ತೆ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ತಮ್ಮನ್ನು ಬೈಂದೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವೀಕ್ಷಕರಾಗಿ ನೇಮಿಸಲಾಗಿದೆ, ಈ ಹೊಣೆಯನ್ನು ನೀವು ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಚರ್ಚಿಸಿ ಮಾರ್ಗದರ್ಶನ ನೀಡಿ ಅಲ್ಲಿ ಸಮಿತಿ ರಚನೆ ಮತ್ತು ಕಾಲ ಕಾಲಕ್ಕೆ ಸೂಕ್ತವಾದ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವ ಜವಾಬ್ದಾರಿಯನ್ನು ನೀಡಲಾಗಿದೆಯೆಂದು’ ಗೀತಾ ವಾಗ್ಲೆಯವರು ತಿಳಿಸಿದ್ದಾರೆ