ಆರ್ಯ ವೈಶ್ಯ ಜನಾಂಗದವರಿಗೆ ವಿವಿಧ ಉದ್ದೇಶಗಳಿಗೆ ಜಾತಿ ಪ್ರಮಾಣ ಪತ್ರ ವಿತರಣೆ.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಆರ್ಯ ವೈಶ್ಯ ಜನಾಂಗದವರಿಗೆ ವಿವಿಧ ಉದ್ದೇಶಗಳಿಗೆ ಜಾತಿ ಪ್ರಮಾಣ ಪತ್ರ ವಿತರಣೆ.
ಕೋಲಾರ : ಆರ್ಯ ವೈಶ್ಯ ಜನಾಂಗದವರಿಗೆ ಈ ಹಿಂದೆ ಜಾತಿ ಪ್ರಮಾಣ ಪತ್ರವನ್ನು ವಿದ್ಯಾಭ್ಯಾಸದ ಸಲುವಾಗಿ 18 ವರ್ಷ ಒಳಪಟ್ಟವರಿಗೆ ಮಾತ್ರ ನೀಡಲಾಗುತ್ತಿತ್ತು. ಕರ್ನಾಟಕ ರಾಜ್ಯ ಸರ್ಕಾರವು ಇನ್ನು ಮುಂದೆ ಆರ್ಯ ವೈಶ್ಯ ಜನಾಂಗದವರಿಗೆ ಶಾಲಾ ಪ್ರವೇಶಕ್ಕೆ ಮಾತ್ರವಲ್ಲದೆ ಸರ್ಕಾರಿ ಸಂಸ್ಥೆಗಳಿಂದ ಸಾಲ, ಸಹಾಯಧನ ಮತ್ತು ತರಬೇತಿ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು“ನಮೂನೆ-ಜಿ”ಯಲ್ಲಿ ಪಡೆಯಲು ಆದೇಶಿಸಿರುತ್ತದೆ.
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಮತ್ತು ಇತರೆ ಸರ್ಕಾರಿ ಸಂಸ್ಥೆಗಳಿಂದ ಸಾಲ-ಸೌಲಭ್ಯಗಳನ್ನು ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರವು ಕಡ್ಡಾಯವಾಗಿರುತ್ತದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು“ನಮೂನೆ-ಜಿ”ಯಲ್ಲಿ ಪಡೆಯಲು ನಾಡಕಛೇರಿ ಕೇಂದ್ರ, ಬೆಂಗಳೂರು-ಒನ್, ಕರ್ನಾಟಕ-ಒನ್ ಹಾಗೂ ನಾಡಕಛೇರಿಯ ವೆಬ್‍ಸೈಟ್ www.nadakacheri.karnataka.gov.in ನಲ್ಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. 
ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ 9448451111/ ನಾಡಕಛೇರಿಯ ಸಹಾಯವಾಣಿ (ಟೋಲ್ ಪ್ರೀ) ಸಂಖ್ಯೆ: 18005990044 ಅಥವಾ ಇಮೇಲ್: support.kacdc@karnataka.gov.in  ನ್ನು ನೋಡಬಹುದಾಗಿದೆ ಎಂದು ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.