ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ಪ್ರತಿಯೊಬ್ಬರು ಗ್ರಾಮಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಬೇಕೆಂದು ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ತಿಳಿಸಿದರು.
ತಾಲ್ಲೂಕಿನ ನೆಲವಂಕಿ ಗ್ರಾಮ ಪಂಚಾಯಿತಿಯ ನವೀಕೃತ ಕಟ್ಟಡದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದಿಂಬಾಲ ಅಶೋಕ್, ಚುನಾವಣೆಗಳಲ್ಲಿ ಗೆಲ್ಲುವ ಮುಂಚೆ ನಾನು ಆ ಪಕ್ಷ, ಈ ಪಕ್ಷ ಎಂದು ಇರಬೇಕು, ಚುನಾವಣೆಯಲ್ಲಿ ಗೆದ್ದ ನಂತರ ಎಲ್ಲಾ ಪಕ್ಷದ ಎಲ್ಲಾ ಸದಸ್ಯರು ಒಗ್ಗಾಟ್ಟಾಗಿ ಗ್ರಾಮಗಳ ಅಭಿವೃದ್ದಿಗೆ ಹೆಚ್ಚು ಆಧ್ಯತೆ ನೀಡಿ ಗ್ರಾಮಗಳ ಅಭಿವೃದ್ದಿಗೆ ಪಣತೊಡಿ ಎಂದ ಇವರು, ಈ ಪಂಚಾಯಿತಿಯನ್ನು ಒಂದು ಮಾದರಿ ಪಂಚಾಯಿತಿಯನ್ನಾಗಿ ಮಾಡಿ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ. ಮಂಜುನಾಥ್ ಮಾತನಾಡಿ, ಸರ್ಕಾರದ ಅನುದಾನಗಳು ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮವನ್ನು ಅಭಿವೃದ್ದಿ ಪಡಿಸುವುದರ ಜೊತೆಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ನೀವು ಮಾಡಿ, ಗ್ರಾಮದಲ್ಲಿ ಯಾವುದೆ ಸಮಸ್ಯೆ ಇದ್ದರೂ ಅಲ್ಲೇ ಚರ್ಚೆ ಮಾಡಿ ಪರಿಹರಿಸಿಕೊಳ್ಳಿ. ಸರ್ಕಾರ ನರೇಗಯೋಜನೆಯಡಿಯಲ್ಲಿ ಲಕ್ಷಾಂತರ ರೂಗಳ ಅನುದಾನ ಬರುತ್ತದೆ. ಇದನ್ನು ಸದುಪಯೋಗಪಡಿಸಿಕೊಂಡು ಕಾಮಗಾರಿಗಳನ್ನು ಕೈಗೊಂಡು ಗ್ರಾಮಗಳ ಅಭಿವೃದ್ದಿ ಸಹಕರಿಸಿ ಎಂದು ತಿಳಿಸುತ್ತಾ, ಗ್ರಾಮಗಳಿಗೆ ಬೇಕಾದ ಮೂಲ ಭೂತ ಸೌಲಭ್ಯಗಳನ್ನು ಯಾವುದೆ ಬೇದಬಾವ ವಿಲ್ಲದೆ ಒದಗಿಸಿ ಗ್ರಾಮವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಕೆಲಸ ನೀವು ಮಾಡಿ ಎಂದರು.
ಈ ಸಂದರ್ಭದಲ್ಲಿ ಭೂ ಮಂಜೂರಾತಿ ಮಾಜಿ ಸದಸ್ಯ ದೊಡ್ಡ ಬಂದಾರ್ಲಹಳ್ಳಿ ಮುನಿಯಪ್ಪ , ವಕೀಲ ಮುನಿರಾಜು, ಯುವ ಮುಖಂಡ ಉಪೇಂದ್ರ, ನೆಲವೆಂಕಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷಣಿ ಪ್ರಮೀಳ ಶಿವಣ್ಣ, ಜೆ.ಸಿ.ಬಿ. ಶಂಕರ್, ರವಣಪ್ಪ, ರೆಡ್ಡೆಪ್ಪ, ಕೊಂಡಪ್ಪ, ನಾಗರಾಜ್, ರಘು, ಗೋವಿಂದಪ್ಪ, ಮುನಿವೆಂಕಟಪ್ಪ, ಕಲ್ಲೂರು ರತ್ನಪ್ಪ, ಕೊಪ್ಪುವಾರಿಪಲ್ಲಿ ಲಕ್ಷ್ಮೀಪತಿ, ಪೈಂಟರ್ ಆಂಜಿ ಇನ್ನಿತರರು ಉಪಸ್ಥಿತರಿದ್ದರು.