ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಅರಿವು ವಿದ್ಯಾಭ್ಯಾಸ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಅಹ್ವಾನ
ಕೋಲಾರ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕೋಲಾರ ಇವರ ವತಿಯಿಂದ 2019-20 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಭೌದ್ಧ, ಸಿಖ್, ಪಾರ್ಸಿ ಹಾಗೂ ಅಂಗ್ಲೋ ಇಂಡಿಯನ್ ಜನಾಂಗದವರಿಗೆ “ಅರಿವು”ವಿದ್ಯಾಭ್ಯಾಸ ಯೋಜನೆಯಡಿಯಲ್ಲಿ ನಿಗಮದಿಂದ ವಿವಿಧ ಕೋರ್ಸಗಳಿಗೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ಅರಿವು ಯೋಜನೆ (ವಿದ್ಯಾಭ್ಯಾಸ ಸಾಲ) : ಈ ಯೋಜನೆಯಡಿಯಲ್ಲಿ (ಪ್ರೆಶ್ ಮತ್ತು ರಿನ್ಯೂವಲ್) ತಾಂತ್ರಿಕ ವೃತ್ತಿಪರ ಹಾಗೂ ಪದವಿ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನಿಗಮದಿಂದ ಬಿ.ಇ, ಎಂ.ಬಿ.ಬಿಎಸ್, ಎಂ.ಬಿ.ಎ, ಎಂ.ಸಿ.ಎ, ಎಂ.ಟೆಕ್, ಎಂ.ಡಿ, ಬಿ.ಫಾರ್ಮ, ಡಿ.ಎಡ್, ಐ.ಟಿ.ಐ, ಡಿಪ್ಲೋಮಾ, ಬಿ.ಎಸ್‍ಸಿ-ನರ್ಸಿಂಗ್, ಬಿ.ಡಿ.ಎಸ್, ಬಿ.ಬಿ.ಎಂ, ಬಿಎಡ್, ಎಂ.ಎ, ಪಿಹೆಚ್.ಡಿ, ಎಂ.ಕಾಂ, ಎಂ.ಎಸ್.ಸಿ, ಎಂ.ಫಾರ್ಮಾ, ಎಲ್.ಎಲ್.ಬಿ, ಹಾಗೂ ಇತರೆ ವೃತ್ತಿಪರ ಕೋರ್ಸ್‍ಗಳ ವ್ಯಾಸಂಗಕ್ಕೆ ಅನುಗುಣವಾಗಿ ಸಾಲ ಸೌಲಭ್ಯವನ್ನು ಕಲ್ಪಿಸಿ ಸಾಲಕ್ಕೆ ಶೇ. 2% ರಂತೆ ಸೇವಾ ಶುಲ್ಕ ಪಡೆಯಲಾಗುವುದು.
ಅರ್ಜಿದಾರರ ವಾರ್ಷಿಕ ಆದಾಯ 6.00 ಲಕ್ಷ ರೂ.ಗಳ ಒಳಗಿರಬೇಕು. ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಇಚ್ಛಿಸುವ ವಿದ್ಯಾರ್ಥಿಗಳು ಸೆಪ್ಟೆಂಬರ್ 30 ರೊಳಗಾಗಿ ತಿತಿತಿ.ಞmಜಛಿ.ಞಚಿಡಿ.ಟಿiಛಿ.iಟಿ/
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 08152-224786 ಅಥವಾ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಶ್ರೀ ಅಂಜಿನೇಯಸ್ವಾಮಿ ದೇವಸ್ಥಾನದ ಹಿಂಭಾಗ ಅಮ್ಮವಾರಪೇಟೆ, ಕೋಲಾರ ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.