JANANUDI.COM NETWORK
ಅಬಕಾಸ್ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಕ್ರಿಸ್ಟನ್ ಪಿಂಟೊಗೆ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ
ಕುಂದಾಪುರ, ಜ.13. ರಾಷ್ಟ್ರ ಮಟ್ಟದಲ್ಲಿ ಚೆನೈನಲ್ಲಿ ನೆಡೆದ ಅಬಕಾಸ್ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಕ್ರಿಸ್ಟನ್ ಪಿಂಟೊ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಗೆದ್ದು ಪ್ರಥಮ ಸ್ಥಾನ ಪಡೆದಿದ್ದಾನೆ.ಇವನು ಗಂಗೊಳ್ಳಿಯ ಕಿರಣ್ ಮತ್ತು ರೀನಾ ಪಿಂಟೊ ದಂಪತಿಯ ಪುತ್ರನಾಗಿದ್ದು, ಸಂತಾನ್ ಮತ್ತು ಕಾರ್ಮಿನ್ ಪಿಂಟೊ ಇವರ ಮೊಮ್ಮಗನಾಗಿದ್ದು. ಈತ ಗಂಗೊಳ್ಳಿಯ ಸ್ಟೇಲ್ಲಾ ಮಾರೀಸ್ ಆಂಗ್ಲ ಮಾಧ್ಯಮದ 5 ನೆ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.
ಇತನಿಗೆ ಐಡ್ಯಲ್ ಪ್ಲೆ ಅಬಾಕಸ್ ಇಂಡಿಯಾ ಲಿಮಿಟೆಡ್ ಇದರ ಕುಂದಾಪುರ ಬ್ರಾಂಚಿನ ನಿರ್ದೇಶಕರಾದ ಪ್ರಸನ್ನ ಮತ್ತು ಇತರ ತರಬೇತಿದಾರರು ಅಬಾಕಾಸ್ ತರಬೇತಿ ನೀಡಿದ್ದರು.