ವರದಿ: ಶಬ್ಬೀರ್ ಅಹ್ಮದ್
ಅಗ್ನಿಶಾಮಕ ಸೇವಾ ಸಪ್ತಾಹ 2019: ಸಮಾರೋಪ ಸಮಾರಂಭ
ಕೋಲಾರ ಏ.21 : ಮಾನವ ಜನ್ಮವನ್ನು ಪಡೆದು ಹಿಂದಿನ ಕರ್ಮವನ್ನು ತೀರಿಸಿಕೊಳ್ಳಬಹುದು, ಮಾನವ ಜನ್ಮ ಶ್ರೇಷ್ಠವಾದುದು. ರಸ್ತೆ ಅಡೆತಡೆಯಿಲ್ಲದೆ ರಸ್ತೆ ಸರಾಗವಾಗಿ ಮತ್ತು ನೀರಿನ ಪೂರೈಕೆ ಸರಿಯಾದ ಪ್ರಮಾಣದಲ್ಲಿ ಸಿಗುವ ವ್ಯವಸ್ಥೆ ಇದ್ದರೆ ಅಗ್ನಿ ದುರಂತವನ್ನು ಸುಲಭವಾಗಿ ಮತ್ತು ಶೀಘ್ರವಾಗಿ ತಡೆಯಬಹುದು ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಂ.ಆರ್. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳ ಸಹಕಾರವಿದ್ದಾಗ ಏನನ್ನಾದರೂ ಸಾಧಿಸಬಹುದು ಎಂದರು. ವಾಸವಿ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳು ಕೋಲಾರ ಆಯೋಜಿಸಿದ್ದ ಅಗ್ನಿಶಾಮಕ ಸೇವಾ ಸಪ್ತಾಹ ಸಮಾರೋಪವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೆಡ್‍ಕ್ರಾಸ್ ಸಂಸ್ಥೆಯ ಛೇರ್ಮನ್ ಗೋಪಾಲಕೃಷ್ಣ ಗೌಡ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯು ಸದೃಢ ಮತ್ತು ಶಕ್ತಿಯುತವಾಗಿ ಬಾಳಲು ಸರ್ಕಾರದಲ್ಲಿ ಸೌಲಭ್ಯಗಳಿದ್ದು, ಯಾವುದೇ ಸಂದರ್ಭದಲ್ಲಿ ಎದೆಗುಂದದೆ ತಮ್ಮ ಜೀವನದ ಜೊತೆಗೆ ಇನ್ನೊಬ್ಬರಿಗೆ ಸೇವೆ ಸಲ್ಲಿಸಲು ಸಿದ್ಧರಾಗಬೇಕೆಂದು ಪ್ರತಿಯೊಬ್ಬ ವ್ಯಕ್ತಿಯು ಪ್ರಥಮ ಶಿಕಿತ್ಸಾ ತರಬೇತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ರೋಟರಿ ಅಧ್ಯಕ್ಷ ಶಂಕರೇಗೌಡ ಮಾತನಾಡಿ ಸಮಾಜದಮುಖಿಯಾಗಿ ಎಲ್ಲರೂ ಶ್ರಮಪಡಬೇಕು. ಯಾವುದೇ ಸಂದರ್ಭದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಶಿಕ್ಷಣಕ್ಕೆ ವಂಚಿತರಾಗಬಾರದು. ರೋಟರಿ ಸಂಸ್ಥೆಯ ಸಂಸ್ಥೆಯ ಸೇವಾ ಸೌಲಭ್ಯಗಳನ್ನು ಬಳಸಿಕೊಳ್ಳಬೇಕೆಂದರು.
ಥಿಯಾಸಫಿಕಲ್ ಸೊಸೈಟಿ ಸೇವಾ ವಿಭಾಗದ ಅಧ್ಯಕ್ಷ ವಿ.ಪಿ.ಸೋಮಶೇಕರ್ ಮಾತನಾಡಿ ಬೆಂಕಿ ಆಕಸ್ಮಿಕದ ಬಗ್ಗೆ ಎಲ್ಲರೂ ಮುನ್ನೇಚ್ಚರಿಕೆ ತರಬೇತಿ ಪಡೆದು ಅಗ್ನಿಶಾಮಕ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಸಾರ್ವಜನಿಕ ಆಸ್ತಿ ಅಲ್ಲದೆ ಸ್ವಂತ ಆಸ್ತಿಯನ್ನು ಕಾಪಾಡಲು ತರಬೇತಿ ಅಗತ್ಯ ಕೌಶಲ್ಯವನ್ನು ಪಡೆಬಯಬೇಕೆಂದು ಸಲಹೆ ನೀಡಿದರು
ಇದೇ ಸಂದರ್ಭದಲ್ಲಿ ಕೋಲಾರ ಜಿಲ್ಲಾ ವ್ಯಾಪ್ತಿಯ ಅಗ್ನಿ ಶಾಮಕ ಸಿಬ್ಬಂದಿ ಮುಳಬಾಗಿಲು ಠಾಣೆ ಶ್ರೀ ಭೀಮ್‍ಸಿಂಗ್, ಮತ್ತು ಕೆ.ವಿ. ಚೇತನ್ ಕುಮಾರ್, ಕೆಜಿಎಫ್ ಠಾಣೆಯ ವಿ.ಸುಬ್ರಮಣಿ, ಬಂಗಾರಪೇಟೆ ಠಾಣೆಯ ವಿ.ಮಂಜುನಾಥ್, ಶ್ರೀನಿವಾಸಪುರ ಠಾಣೆ ಹೆಚ್.ಶಶಿಧರ್, ಮಾಲೂರು ಠಾಣೆ ಎ.ವಿ. ಬಲರಾಮ್‍ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ಎಲ್. ಮಾದೇಶ್ ವಹಿಸಿದ್ದು, ವಾಸವಿ ಕ್ಲಬ್‍ನ ಅಧ್ಯಕ್ಷ ಅಮರನಾಥ್, ವಿ.ಎಸ್.ಬಿಂಧು ಉಪಸ್ಥಿತರಿದ್ದು, ವಾಸವಿ ಕ್ಲಬ್‍ನ ಕಾರ್ಯದರ್ಶಿ ಓಂಪ್ರಕಾಶ್ ವಂದನಾರ್ಪಣೆ ನಡೆಸಿಕೊಟ್ಟರು.