ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಅಂಬೇಡ್ಕರ್ ಆಶಯಗಳನ್ನು ತಲೆಯಲ್ಲಿ ಇಟ್ಟುಕೊಳ್ಳದೆ ಎದೆಯೊಳಗೆ ಹಾಕಿಕೊಳ್ಳಿ
ಕೋಲಾರ : ಸುಸ್ಥಿರ ಅಭಿವೃದ್ಧಿಯಾಗಬೇಕಾದರೆ ಅಂಬೇಡ್ಕರ್ ಚಿಂತನೆಯಿಂದ ಸಾದ್ಯ ಎಂದು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಯಾದ ಬಾಲಾಜಿ ಅಭಿಪ್ರಾಯಪಟ್ಟರು. ಯುವ ಜಾಗೃತಿ ದಳ ಮತ್ತು ಪಾರಮಿತ ಅಧ್ಯಯನ ಕೇಂದ್ರದ ವತಿಯಿಂದ ಕೋಲಾರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ಯುವಜನತೆ ಆಶಯದೊಂದಿಗೆ ತಾಲ್ಲೂಕು ಮಟ್ಟದ ಅದ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಜನತೆ ವಿಚಾರ ವಿನಿಮಯ ಅಗಬೇಕಾದರೆ ಇಂತಹ ಅದ್ಯಯನ ಶಿಬಿರ ಅವಶ್ಯಕತೆ ಇದೆ.
ಬಾಬಾ ಸಾಹೇಬ ಅಂಬೇಡ್ಕರ್ ರವರು ದೇಶ ಕಂಡ ಪ್ರಬುದ್ದ ನಾಯಕರು, ಅವರ ಆಶಯಗಳನ್ನು ತಲೆಯಲ್ಲಿ ಇಟ್ಟು ಕೊಳ್ಳದೆ ಎದೆಯೊಳಗೆ ಹಾಕಿಕೊಂಡು ಹೊದಾಗ ಮಾತ್ರ ಸಾಹೇಬರ ಆಶಯಗಳನ್ನು ಈಡೇರಿಸಲು ಸಾಧ್ಯ ಅದರಿಂದ ಯುವಕ, ಯುವತಿಯರು ಸಾಮಾಜಿಕ, ಆರ್ಥಿಕ ವಾಗಿ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಸುಸ್ಥಿರ ಅಭಿವೃದ್ಧಿ ಪೂರಕವಾಗಿ ಬೆಳೆಯಬೇಕೆಂದು ತಿಳಿಸಿದರು.
ಯುವಕರು ಮತ್ತು ನೌಕರರು ಈ ದೇಶದ ಎರಡು ಕಣ್ಣುಗಳು ಈ ಸಮುದಾಯ ಮನಸ್ಸು ಮಾಡಿ ಸಮುದಾಯದ ಸುಸ್ಥಿರ ಅಭಿವೃದ್ಧಿಗಾಗಿ ದುಡಿಯಬೇಕು ಅಗ ಮಾತ್ರ ಅಂಬೇಡ್ಕರ್ ಕನಸು ಈಡೇರಿಯುಲು ಸಾಧ್ಯ ಎಂದು ಶಿಬಿರ ಯುವಕರನ್ನು ಕುರಿತು ತಿಳಿಸಿದರು. ಕೃಷ್ಣಯ್ಯ ಬೌದ್ದ್ ಮಾತಾನಾಡಿ ಅಂಬೇಡ್ಕರ್ ರವರನ್ನು ಅರ್ಥ ಮಾಡಿಕೊಂಡಾಗ ಬುದ್ದನನ್ನು ಅರ್ಥ ವಾಗುತ್ತದೆಂದು ತಿಳಿಸತ್ತಾ ಸಮಸಮಾಜ ಕನಸು ಕಂಡ ಮಹಾನ್ ನಾಯಕರ ಆಆಯಗಳು
ಈಡೇರಿಯಲು ಯುವಕರು ಮತ್ತು ನೌಕರರು ಮುಖ್ಯ ಪಾತ್ರವಹಿಸಬೇಕು ,ಯುವಜನರು ಆಗ ಮಾತ್ರ ನಿಜವಾದ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆಂದು ತಿಳಿಸಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ A ಮಾಜಿ ಅಧ್ಯಕ್ಷರು ಪತ್ರಕರ್ತರಾದ ಕೆ.ಎಸ್.ಗಣೇಶ್ ಮಾತಾನಾಡಿ ಸಮುದಾಯಗಳ ಸುಸ್ಥಿರ ಅಭಿವೃದ್ದಿಗೆ ಯುವಜನರು ಮುಖ್ಯ ಪಾತ್ರವಹಿಸಬೇಕೆಂದು ತಿಳಿಸುತ್ತಾ ಈಗೀನ ಕಾಲಘಟ್ಟದಲ್ಲಿ ಯುವ ಸಮುದಾಯ ದಾರಿ ತಪ್ಪುತ್ತಿದ್ದಾರೆ ಇದಕ್ಕೆ ಕಾರಣ ಮೂಢನಂಬಿಕೆ, ಮೌಡ್ಯತೆಗೆ ಒಳಗಾಗಿದ್ದಾರೆ ಇದರಿಂದ ಹೋರಬರಬೇಕೆಂದರೆ ಇಂತಹ ಯುವ ಜಾಗೃತಿ ದಳದ ಶಿಬಿರಗಳಲ್ಲಿ ತೊಡಗಿಸಿಕೊಳ್ಳಬೇಕು ಇದರಿಂದ ಅಂಬೇಡ್ಕರ್ ರವರನ್ನು ಓದಿಕೊಳ್ಳಬೇಕು ಎದೆಯೊಳಗೆ ಹಾಕಿಕೊಂಡು ಗ್ರಾಮ ಮಟ್ಟದ ಕಾರ್ಯಕರ್ತರನ್ನು ತಯಾರಿಯಾಗಬೇಕು ಅಗ ಮಾತ್ರ ಸುಸ್ಥಿರ ಅಭಿವೃದ್ಧಿ ಸಾದ್ಯೆಂದು ತಿಳಿಸಿದರು. ಈ ಶಿಬಿರದಲ್ಲಿ ಕರ್ನಾಟಕ ಬಹುಜನ ಸಂಘದ ರಾಜ್ಯಾಧ್ಯಕ್ಷರಾದ ಹೂಹಳ್ಳಿ ನಾಗರಾಜ್, ತಾಲ್ಲೂಕು ಅಧ್ಯಕ್ಷರಾದ ಅಮ್ಮೇರಹಳ್ಳಿ ಮಂಜುನಾಥ್ ಭಾಗಿವಹಿದರು, ಪ್ರಾಸ್ತಾವಿಕ ಮಾತು ಜಿ.ಪ್ರ.ಕಾರ್ಯದರ್ಶಿ ಯಾದ ಪಟ್ನ ಮೂಕಾಂಬಿಕಾ ಮಾತಾನಾಡಿದರು.