ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ,ಜು.13: ಶೀಥಲಗೊಂಡಿರುವ ಅಂಗನವಾಡಿ ಕೇಂದ್ರಗಳನ್ನು ಅಬಿವೃಧ್ಧಿಪಡಿಸಿ ಮಕ್ಕಳ ಆಹಾರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಜೊತೆಗೆ ನಕಲಿ ಬಿಲ್‍ಗಳನ್ನು ಸೃಷ್ಠಿಮಾಡುವ ಟೆಂಡರ್‍ದಾರರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಿನಾಂಕ; 21-07-2020ರ ಮಂಗಳವಾರ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು
ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಒಂದು ಕಡೆ ಕೋರೋನಾ ವೈರಸ್ ಹಾವಳಿ ಮತ್ತೊಂದು ಕಡೆ ಮಕ್ಕಳ ಆಹಾರ ಕಾಳಸಂತೆಯಲ್ಲಿ ಮಾರಾಟ, ದೇಶಕ್ಕೆ ಸ್ವಾತಂತ್ರ್ಯಾ ಬಂದು 10 ದಶಕಗಳು ಕಳೆದರು ಇನ್ನೂ ದೇಶದ ಆಪೌಷ್ಠಿಕತೆ ಹಾಗೂ ಶಿಕ್ಷಣದ ಗುಣಮಟ್ಟ ಸರಿಪಡಿಸುವಲ್ಲಿ ಸರ್ಕಾರಗಳು ವಿಪಲವಾಗಿವೆ. ಮತ್ತೊಂದೆಡೆ ಶ್ರೀಮಂತವಾಗುತ್ತಿರುವ ಶಿಕ್ಷಣ ಇಂದು ಕಾರ್ಪೋರೇಟ್ ಕಂಪನಿಗಳ ಪಾಲಾಗಿ ಖಾಸಗಿ ಶಾಲೆಗಳು ಮಕ್ಕಳ ಪ್ರಥಮ ºಂತದ ಕಲಿಕೆಗೆ ಲಕ್ಷಾಂತರ ಹಣ ದೋಚುವ ಖಾಸಗಿ ಶಾಲೆಗಳ ಹಗಲು ದರೋಡೆಯಿಂದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಇದನ್ನು ಸರಿಪಡಿಸಲು ಬಡವರ ಮಕ್ಕಳಿಗೆ ಅನುಕೂಲವಾಗಲೆಂದು ಹಾಗೂ ಅಪೌಷ್ಠಿಕತೆಯಿಂದ ನರಳುತ್ತಿದ್ದ ಗ್ರಾಮೀಣ ಪ್ರದೇಶದ ಗರ್ಬಿಣಿ ಹೆಣ್ಣುಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲು ಅನುಕೂಲವಾಗಲೆಂದು ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ತೆರೆದು ಅವುಗಳಿಗೆ ಗುಣಮಟ್ಟದ ಆಹಾರ ಬಡವರಿಗೆ ತಲುಪಿಸಲು ಸಾವಿರಾರು ಕೋಟಿ ಖರ್ಚು ಮಾಡುತ್ತಿದ್ದರೆ, ಆ ಆಹಾರ ಅಧಿಕಾರಿಗಳ ಮತ್ತು ಟೆಂಡರ್‍ದಾರರ ಹಣದಾಹಕ್ಕೆ ಸಮರ್ಪಕವಾಗಿ ಶಾಲೆಗೆ ತಲುಪದೆ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಜೊತೆಗೆ ನಕಲಿ ಬಿಲ್ಲುಗಳನ್ನು ಸೃಷ್ಠಿ ಮಾಡಿ ಜಿಲ್ಲಾದ್ಯಾಂತ ಕೋಟ್ಯಾಂತರ ರೂಪಾಯಿ ಬಡವರ ಆಹಾರದ ವಿತರಣೆಯಲ್ಲಿ ವಂಚನೆ ಮಾಡುವ ದಂದೆಗೆ ಅಂಗನವಾಡಿ ಅಧಿಕಾರಿಗಳು ನಕಲಿ ಸುಳ್ಳು ಮಕ್ಕಳ ಹಾಜರಾತಿಯನ್ನು ಸೃಷ್ಠಿಮಾಡಿ ಟೆಂಡರ್‍ದಾರರ ಜೊತೆ ಶಾಮೀಲಾಗಿ, ಬಡವರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದರು
ಮಹಿಳಾ ಜಿಲ್ಲಾದ್ಯಕ್ಷೆ ಎ,ನಳಿನಿ ಮಾತನಾಡಿ ಅಂಗನವಾಡಿ ಕೇಂದ್ರಗಳ ಅಭಿವೃದ್ದಿಗೆ ಬರುವ ಹಣ ಯಾರ ಜೇಬು ಸೇರುತ್ತದೆ, ಇಲ್ಲವೇ ಸರ್ಕಾರದಿಂದ ಹಣವೇ ಬಿಡುಗಡೆಯಾಗುತ್ತಿಲ್ಲವೇ , ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.ಸರ್ಕಾರದ ಸಂಬಳ ಪಡೆದು ಸರ್ಕಾರಿ ಅಂಗನಾಡಿ ಕೇಂದ್ರಗಳನ್ನು ಉಳಿಸಬೇಕಾದ ಅಧಿಕಾರಿಗಳು ಜವಬ್ದಾರಿ ಇಲ್ಲವಾಗಿದೆ. ಜಿಲ್ಲಾದ್ಯಾಂತ ಶೀಥಲಗೊಂಡಿರುವ ಅಂಗನವಾಡಿ ಕೇಂದ್ರಗಳನ್ನು ಅಂಕಿ ಅಂಶಗಳ ಪ್ರಕಾರ ಎಲ್ಲಾ ಶೀಥಲಗೊಂಡಿರುವ ಶಾಲೆಗಳ ಸಂಪೂರ್ಣ ಮಾಹಿತಿಯೊಂದಿಗೆ ¸ರ್ಕಾರಕ್ಕೆ ಒತ್ತಡ ಹಾಕಿ ಅನುದಾನವನ್ನು ಬಿಡುಗಡೆ ಮಾಡಿಸಿ ಶಾಲೆಗಳನ್ನು ಅಭಿವೃದ್ದಿಪಡಿಸಬೇಕು, ಮಕ್ಕಳ ಹಾಗೂ ಗರ್ಭಿಣಿ ಸ್ರ್ತೀಯರ ಆಹಾರವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಟೆಂಡರ್‍ದಾರರ ವಿರುದ್ದ ಕ್ರಮ ಕೈಗೊಂಡು ಪರವಾನಗಿಯನ್ನು ರದ್ದು ಮಾಡಬೇಕು ಹಾಗೂ ಟೆಂಡರ್‍ದಾರರ ಜೊತೆ ಶಾಮೀಲಗಿ ನಕಲಿ ಮಕ್ಕಳ ದಾಖಲೆಗಳನ್ನು ಸೃಷ್ಠಿ ಮಾಡಿರುವ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿ ಬಡವರ ಆರೋಗ್ಯ ಆಪೌಷ್ಠಿಕತೆಯನ್ನು ಕಾಪಾಡಬೇಕೆಂದು ಒತ್ತಾಯಿಸಿ ದಿನಾಂಕ 21-07-2020ರ ಮಂಗಳವಾರ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ನಿರ್ದರಿಸಲಾಗಿದೆಂದರು
ಸಭೆಯಲ್ಲಿ ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಈಕಂಬಳ್ಳಿ ಮಂಜುನಾಥ್, ಹುಲ್ಕೂರ್ ಹರಿಕುಮಾರ್,ವಕ್ಕಲೇರಿ ಹನುಮಯ್ಯ, ಐತಾಂಡಹಳ್ಳಿ ಮಂಜುನಾಥ್, ಅನುಶ್ರೀ, ಮಹಾಲಕ್ಷೀ, ನಳಿನಿ,ವಿ,ಕಾವ್ಯಾಂಜಲಿ, ಸುಧಾಕರ್, ಸುಪ್ರೀಂಚಲ ಮುಂತಾದವರಿದ್ದರು.