ಹೋಲಿ ರೋಜರಿ ಚರ್ಚಗೆ ದಾನಿಗಳಿಂದ ನೂತನ ಜನರೇಟರ್ ಕೊಡುಗೆ

JANANUDI.COM NETWORK

 

 

ಹೋಲಿ ರೋಜರಿ ಚರ್ಚಗೆ ದಾನಿಗಳಿಂದ ನೂತನ ಜನರೇಟರ್ ಕೊಡುಗೆ 

 

ಕುಂದಾಪುರ, ಮಾ.7: ಈ ವರ್ಷ ಕುಂದಾಪುರ ಹೋಲಿ ರೋಜರಿ ಚರ್ಚ್ ತನ್ನ 450 ನೇ ಸಂಭ್ರಮಾಚರಣೆ ಆಚರಿಸುವ ಪ್ರಯುಕ್ತ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಒಂದಾಂದ ಯೋಜನೆ, ನೂತನ ಆಧುನಿಕ ಶೈಲಿಯ ಜನರೇಟರ್ ಅಳವಡಿಸುವುದಾಗಿತ್ತು. ಈ ಯೋಜನೆಯಂತೆ ಸುಮಾರು ನಾಲ್ಕು ಲಕ್ಷ ಬೆಲೆಬಾಳುವ ನೂತನ ಜನರೇಟರನ್ನು ದಾನಿಗಳು ಕೊಡುಗೆ ರೂಪದಲ್ಲಿ ನೀಡಿದ್ದರು.
ಇದರ ಉದ್ಘಾಟನೆಯನ್ನು ಭಾನುವಾರ ಬೆಳಗ್ಗಿನ ಬಲಿದಾನದ ಬಳಿಕ ಪ್ರಾಥನೆ ಮತ್ತು ಆಶಿರ್ವಚನದ ಮೂಲಕ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ನೇರವೆರಿಸಿದರು. ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಪ್ರಾಂಶುಪಾಲ ವಂ| ಪ್ರವೀಣ್ ಅಮ್ರತ್ ಮಾರ್ಟಿಸ್, ಪಾಲನ ಮಂಡಳಿ ಉಪಾಧ್ಯಕ್ಷ ಲುವಿಸ್ ಜೆ. ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, 18 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಧರ್ಮಭಗಿನಿಯರು, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಹಾಜರಿದ್ದರು.