JANANUDI NETWORK
ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆಯಲ್ಲಿ ನೂತನ ಪ್ರಯೋಗಾಲಯ ಮತ್ತು ಗ್ರಂಥಾಲಯ ಉದ್ಘಾಟನೆ
ಕುಂದಾಪುರ,ಜು.13: ಕುಂದಾಪುರ ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆಯಲ್ಲಿ ನೂತನ ಪ್ರಯೋಗಾಲಯವನ್ನು ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು, ಶಾಲಾ ಸಂಚಾಲಕರಾದ ಅ|ವಂ|ಸ್ಟ್ಯಾನಿ ತಾವ್ರೊ ಪವಿತ್ರ ಜಲದಿಂದ ಆಶಿರ್ವದಿಸಿ ‘ಇಂತಹ ವಿಜ್ಞಾನದ ಪ್ರಯೋಗಾಲಯ ಇರುವುದರಿಂದ, ವಿದ್ಯಾರ್ಥಿಗಳಿಗೆ ಸಂಶೋಷಧನೆ ಮಾಡಲು ಆಸಕ್ತಿ ಹುಟ್ಟುತ್ತದೆ, ಅವರು ಕಲಿಯುವ ವಿಜ್ಞಾನದ ಪಾಠಗಳಿಗೆ ಬಹಳ ಸಹಕಾರಿಯಾಗುತ್ತದೆ. ಅವರ ಜ್ಞಾನ ಬೆಳೆಯುತ್ತದೆ, ವಿಜ್ಞಾನದಲ್ಲಿ ಶಿಕ್ಷರ ಜೊತೆ ವಿಮರ್ಶಿಸಿ ಸಂಶೋಧನೆಯನ್ನು ಮಾಡಿ ವಿದ್ಯಾರ್ಥಿಗಳು ಈ ಪ್ರಯೋಗಾಲಯದ ಪ್ರಯೋಜನವನ್ನು ಪಡೆದುಕೊಳ್ಳ ಬೇಕು’ ಎಂದು ಶುಭ ನುಡಿದರು. ವಿಜ್ಞಾನದ ಶಿಕ್ಷಕಿಯರಾದ ರೇಣುಕಾ ಐತಾಳ್ ಮತ್ತು ಲಕ್ಶ್ಮಿ ಇವರು ಪ್ರಯೋಗಾಲಯವನ್ನು ಉದ್ಘಾಟಿಸಿದರು.
ನೂತನ ಗ್ರಂಥಾಲಯವನ್ನು ರೋಜರಿ ಚರ್ಚಿನ ಪಾಲನಮಂಡಳಿ ಉಪಾಧ್ಯಕ್ಷರಾದ ಜೇಕಬ್ ಡಿಸೋಜಾ ಉದ್ಘಾಟಿಸಿ, ಪ್ರಾಂಶುಪಾಲ ಧರ್ಮಗುರು ವಂ| ಪ್ರವೀಣ್ ಮಾರ್ಟಿಸ್ ಆಶಿರ್ವಚಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ ‘ಗ್ರಂಥಾಲಯದ ಉಪಯುಕ್ತತೆಯನ್ನು ತಿಳಿಸಿದರು. ಗ್ರಂಥಾಲಯದ ಉಸ್ತುವಾರಿ ಶಿಕ್ಷಕಿಯರರಾದ ರಮ್ಯಾ ಹೆಗಡೆ ಮತ್ತು ಪ್ರೀತಿ ಅಂದ್ರಾದೆ ಗ್ರಂಥಾಲಯದಲ್ಲಿ ಲಭ್ಯವಿರುವ ಪುಸ್ತಕಗಳ ಮಾಹಿತಿ ನೀಡಿದರು. ಹೋಲಿ ರೋಜರಿ ಚರ್ಚಿನ ಸಮುಹದ ಇತರ ಶಾಲೆಗಳ ಮುಖ್ಯೋಪಾಧ್ಯಾರಾದ, ಅಸುಂಪ್ತಾ ಲೋಬೊ, ಡೋರಾ ಸುವಾರಿಸ್, ಶೈಲಾ ಲುವಿಸ್, ಶಾಲಾ ಅಭಿವ್ರದ್ದಿ ಸಮಿತಿಯ ಸದಸ್ಯರಾದ ವಿನೋದ್ ಕ್ರಾಸ್ತಾ, ಡಾ. ಸೋನಿ, ಆಶಾ ಕರ್ವಾಲ್ಲೊ ಮತ್ತು ಸಂತ ಜೋಸೆಫ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ವಾಯ್ಲೆಟ್ ತಾವ್ರೊ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರಾದ ಶ್ರೇಯಾ ಡಿ, ರೀಯಾ ರೋಶನಿ ಮತ್ತು ಗ್ಲ್ಯಾಡಿಸ್ ಥೊಮಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.