JANANUDI.COM NETWORK
ಹೊಳೆಗೆ ಹಾರಿದ ಚಿಕ್ಕನಸಾಲು ರಸ್ತೆ ನಿವಾಸಿ ಉದ್ಯಮಿಗಾಗಿ ತಡರಾತ್ರಿಯ ತನಕ ಹುಡುಕಾಟ
ಕುಂದಾಪುರ : ಮುಂಬೈಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಕುಂದಾಪುರದ ಚಿಕ್ಕನಸಾಲು ರಸ್ತೆ ನಿವಾಸಿ ಉದ್ಯಮಿಯೋರ್ವರು ಕುಂದಾಪುರ ಹೇರಿಕುದ್ರು ಸೇತುವೆಯ ಮೇಲಿನಿಂದ ಪಂಚಗಂಗಾವಳಿ ಹೊಳೆಗೆ ಹಾರಿದ್ದು, ತಡ ರಾತ್ರಿಯ ತನಕವೂ ಅವರಿಗಾಗಿ ಅಗ್ನಿ ಶಾಮಕ ಳ ಸತತ ಹುಡುಕಾಟ ನಡೆಸಿದ್ದರೂ ಅವರ ಸುಳಿವು ದೊರಕಿರಲಿಲ್ಲಾ.
ಸ್ಥಳಿಯ ಚಿಕ್ಕನಸಾಲು ರಸ್ತೆಯ ನಿವಾಸಿ ಕೆ.ಜಿ. ಗಣೇಶ್(49) ಎಂಬವರೇ ಹೊಳೆಗೆ ಹಾರಿದವರೆಂದು ಗುರ್ತಿಸಲಾಗಿದೆ. ನಿನ್ನೆ ಸಂಜೆ ಸುಮಾರಿಗೆ ರಿಕ್ಷಾದಲ್ಲಿ ಬಂದೆ ಅವರು ಸೇತುವೆ ಮೇಲೆ ಇಳಿದಿದ್ದರು. ತನ್ನ ಆಧಾರ್ ಕಾರ್ಡ್ ಮತ್ತು ಪರ್ಸನ್ನು ಸೇತುವೆ ದಂಡೆ ಮೇಲಿರಿಸಿ ಏಕಾಏಕಿ ನದಿಗೆ ಧುಮುಕ್ಕಿದ್ದರು. ಇದನ್ನು ಕಂಡ ಸಾರ್ವಜನಿಕರ್ಯಾರೋ ಬೊಬ್ಬಿರಿದಿದ್ದು, ಕೂಡಲೇ ಸೇರಿದ ಸಾರ್ವಜನಿಕರು ಅವರ ಹುಡುಕಾಟಕ್ಕೆ ತೊಡಗಿದ್ದರು. ಮಾಹಿತಿ ಪಡೆದು ಆಗಮಿಸಿದ ಅಗ್ನಿಶಾಮಕ ದಳದವರೂ ಸಹಾ ಹೊಳೆಯಲ್ಲಿ ಹಲವು ಸುತ್ತಿನ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಹಲವು ವರ್ಷಗಳ ಹಿಂದ ಮುಂಬೈ ಸೇರಿಕೊಂಡಿದ್ದ ಅವರು ಹಂತ ಹಂತವಾಗಿ ಬೆಳೆದು ಯಶಸ್ವಿ ಹೊಟೇಲ್ ಉದ್ಯಮಿಯಾಗಿ ಗುರ್ತಿಸಿಕೊಂಡಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಖನ್ನತೆ ಒಳಗಾಗಿದ್ದ ಅವರು ಊರಿನಲ್ಲಿ ನೆಲೆಸಿದ್ದರು. ಪತ್ನಿ ಎರಡು ಮಕ್ಕಳ ಸುಖಿ ಸಂಸಾರವನ್ನು ಹೊಂದಿದ್ದ ಗಣೇಶ್ ನಿನ್ನೆ ಏಕಾಏಕಿ ಹೊಳೆಗೆ ಹಾರಿರುವುದು ನಿಗೂಢವಾಗಿದೆ.