JANANUDI.COM NETWORK
“ ಹಮ್ ಲೇ ಕೆ ರಹೇಂಗೆ ಆಝಾದಿ”
ಕುಂದಾಪುರದಲ್ಲಿ ಪೌರತ್ವ ಕಾಯಿದೆ ವಿರುದ್ಧ ಮೊಳಗಿದ ಪ್ರತಿತಿಭಟನೆ
ಕುಂದಾಪುರ : “ ಇದು ಕೇವಲ ಮುಸಲ್ಮಾನರನ್ನು ಮಾತ್ರ ಅಲ್ಲಾ ಹಿಂದುಳಿದವರು, ದಲಿತರು, ಆದಿವಾಸಿಗಳು ,ಶೂದ್ರರು ಸೇರಿದಂತೆ ಇನ್ನಿತರ ದುರ್ಬಲ ಭಾರತೀಯರನ್ನು ಹಣಿಯಲು ಕೇಂದ್ರ ಸರ್ಕಾರ ಜ್ಯಾರಿ ಮಾಡಲು ಯತ್ನಿಸುತ್ತಿರುವ ಮಾರಕ ಕಾಯಿದೆ, ರೂಪಾಯಿ ಅಪಮೌಲ್ಯದಿಂದ ಜೀವನ ಮಟ್ಟ ಕುಸಿದು ಹೋಗಿ ಜಿಡಿಪಿ ಅನ್ನುವುದು ಪಾತಾಳಕ್ಕೆ ತಲುಪಿರುವಾಗ ಮೋಶಾ ಬಣ ಅನ್ನುವುದು ದೇಶದಲ್ಲಿ ಪೌರತ್ವ ಕಾಯಿದೆಯನ್ನು ಜಾರಿ ಮಾಡಿ ಭಾರತೀಯರನ್ನು ಒಡೆದು ಆಳುವ ಬ್ರಿಟಿಷರ ನೀತಿಯನ್ನು ಅನುಸರಿಸುತ್ತಿರುವ ಬಗ್ಗೆ ನಾವೆಲ್ಲರು ಒಂದಾಗಿ ಪ್ರತಿಭಟಿಸಬೇಕಿದೆ. ಇದು ಮತ್ತೊಂದು ರೀತಿಯ ಸ್ವಾತಂತ್ರ್ಯ ಸಂಗ್ರಾಮ ಇಲ್ಲಿ ನಮ್ಮನ್ನು ಆಳುವ ನಮ್ಮವರ ಕುಟಿಲತೆಯ ವಿರುದ್ದವೇ ಹೋರಾಡುವ ಸಮಯ ಬಂದಾಗಿದೆ, ಜಾತಿ ಮತ ಮರೆತು ಎಲ್ಲರೂ ಒಂದಾಗಿ ಹೋರಾಡಲು ಕಟಿಬದ್ಧರಾಗೋಣ ” ಎಂದು ಖ್ಯಾತ ವಾಗ್ಮಿ, ಲೇಖಕ ಚಳವಳಿಗಾರ ಶಿವ ಸುಂದರ್ ಅವರು ಹೇಳಿದರು. ಅವರು ನಿನ್ನೆ ಮದ್ಯಾಹ್ನ ಕೇಂದ್ರ ಸರ್ಕಾರದ ಪೌರತ್ವ ಕಾಯಿದೆ ವಿರುದ್ಧ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಕರೆ ನೀಡಿದರು.
ನಮ್ಮನ್ನು ಮೊದಲು ಬಲಿ ಪಡೆಯಲಿ
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖ ಭಾಷಣಕಾರ, ಭಜರಂಗದಳ ದ ಮಾಜಿ ಪ್ರಮುಖ ಹೇಂದ್ರ ಕುಮಾರ್, ಆರೆಸ್ಸೆಸ್‍ನ ವಿಷನೀತಿಯನ್ನು ನನ್ನಷ್ಟು ಚೆನ್ನಾಗಿ ಅಥರ್À ಮಾಡಿಕೊಂಡವರು ಇತರರು ಇರಲಿಕ್ಕಿಲ್ಲಾ ಅಂತಹ ಬೀಷಣ ರಣ ಕೋಟೆಯಿಂದ ಹೊರಬಂದವನು ನಾನು, ದೇಶವನ್ನು ಛಿದ್ರ ಮಾಡಲು ಹೊರಟಿರುವ ಮೋದಿ ಶಾ ರ ಪೌರತ್ವ ಕಾಯಿದೆಗೆ ಯಾರೇ ಮುಸಲ್ಮಾನರಾಗಲಿ, ದಲಿತರಾಗಲಿ, ಹಿಂದುಳಿದ ವರ್ಗಗಳ ಹಿಂದುಗಳಾಗಲಿ, ಹೆದರುವ ಅವಶ್ಯಕತೆ ಇಲ್ಲಾ ಹಾಗೊಂದು ವೇಳೆ ಈ ನಿಮ್ಮನ್ನು ಈ ಕಾಯಿದೆ ಬಲಿ ತೆಗೆದು ಕೊಳ್ಳುವ ಮೊದಲು ನಮ್ಮನ್ನು ಅದು ಬಲಿ ಪಡೆಯಲಿ ಸ್ವತಂತ್ರ ಭಾರತದ ಪ್ರಜೆಗಳಾಗಿ ನಾವೆಲ್ಲಾ ಭಾರತ ಮಾತೆಯ ಮಕ್ಕಳು ನಮ್ಮನ್ನು ವಿಭಜಿಸಲು ಯಾರಿಂದಲೂ ಸಾಧ್ಯವಿಲ್ಲಾ ಎಂಬ ಸಂದೇಶವನ್ನು ಸಾರಿ ಕೇಂದ್ರ ಸರ್ಕಾರದ ಮಾರಕ ಕಾಯಿದೆಗೆ ಸಡ್ಡು ಹೊಡೆಯೋಣ, ನಿಮ್ಮ ಜತೆ ನಾವೀದ್ದೆವೆ. ಎಂದು ಪ್ರಖರವಾಗಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಮದ್ಯಾಹ್ನ ಶುರುವಿಟ್ಟುಕೊಂಡ ಪ್ರತಿಭಟನ ಸಭೆಯು ಸಂಜೆ ತನಕ ನಡೆದರೂ ಸಹಸ್ರಾರು ಸಂಖ್ಯೆಯಲ್ಲಿ ನೆರದಿದ್ದ ಸಭಿಕರು ಸಭೆಯ ನಡು ನಡುವೆ ಹಂ ಲೇಖೆ ರಹೇಂಗೆ ಅಝಾದಿ ಎಂಬ ಘೋಷಣೆಗಳನ್ನು ಆಗ್ಗಾಗ್ಗೆ ಮೊಳಗಿಸುತ್ತಾ ಪ್ರತಿಭಟನೆಯ ಕಾವನ್ನು ಹೆಚ್ಚಿಸಿದರು. ಇಂತಹ ಪ್ರತಿಭಟನಾ ಸಭೆಗಳಲ್ಲಿ ತಮ್ಮನ್ನು ಯಾವತ್ತೂ ತೊಡಗಿಸಿಕೊಳ್ಳದ ಮುಸ್ಲಿಮ್ ಮಹಿಳೆಯರು ಈ ಸಭೆಯಲ್ಲಿ ತಂಡೋಪ ತಂಡವಾಗಿ ಕಂಡು ಬಂದು ಕಾರ್ಯಕ್ರಮ ಅಂತ್ಯದ ತನಕವೂ ಉಪಸ್ಥಿತರಿದ್ದದ್ದು ವಿಶೇಷವಾಗಿತ್ತು.
ವೇದಿಕೆಯಲ್ಲಿ ದಲಿತ ಮುಖಂಡ ಸುಂದರ್ ಮಾಸ್ತರ್, ಪೌರತ್ವ ವಿರೋಧಿ ಸಮಿತಿ ಪ್ರಮುಖ ಬಾಲಕೃಷ್ಣ ಶೆಟ್ಟಿ, ಢಾ. ಅಬ್ದುಲ್ ರಶೀದ್ ಸಕಾಫಿ, ಎ.ಕೆ. ಅಶ್ರಫ್ ಸೇರಿದಂತೆ ಕಾರ್ಯಕ್ರಮದ ರೂವಾರಿ ಶಶಿಧರ ಹೆಮ್ಮಾಡಿ ಉಪಸ್ಥಿತರಿದ್ದರು.
ನರಬಲಿಯನ್ನು ಪಡೆಯುವಂತೆ ಯಡ್ಡಿಗೆ ಮಾಂತ್ರಿಕನ ಆದೇಶ-ಸುಧೀರ್ ಕುಮಾರ್ ಮರೋಳಿ
ತನ್ನ ಮಾತುಗಳಿಂದ ಇಡೀ ಸಭೆಯಲ್ಲಿ ಹೋರಾಟದ ಅದ್ಭುತ ಸಂಚಲನೆಯನ್ನು ತಂದ ಸುಧೀರ್ ಕುಮಾರ್ ಮರೋಳಿ ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆಯಲ್ಲಿ ಮಂಗಳೂರು ಪೊಲೀಸ್ ಗುಂಡಿಗೆ ಬಲಿಯಾದ ಅಮಾಯಕ ಯುವಕರ ಪ್ರಸ್ತಾವಿಸುತ್ತ ಇದಕ್ಕೆ ಯಡಿಯೂರಪ್ಪನವರ ಕುಟುಂಬ ಮಾಂತ್ರಿಕನ ಸಲಹೆಯೇ ಕಾರಣ ಇರಬೇಕು ಯಾಕೇಂದರೆ ಅವರು ಮುಖ್ಯ ಮಂತ್ರಿ ಯಾಗುತ್ತಲೇ ನರಬಲಿ ಪಡೆಯುತ್ತಾರೆ, ಅಂದು ಮುಖ್ಯ ಮಂತ್ರಿಯಾಗುತ್ತಲೇ ಹಾವೇರಿಯಲ್ಲಿ ಇಬ್ಬರು ರೈತರ ಬಲಿ ಪಡೆದಿದ್ದರೆ, ಈ ಬಾರಿ ಮಂಗಳೂರು ಯುವಕರ ಬಲಿ ಪಡೆದಿದ್ದಾರೆ. ಎಂದು ಸುಧೀರ್ ಕುಮಾರ್ ಮರೋಳಿ ಕಟುಕಿದರು.