ಸ. ಹೀ. ಫ್ರಾ.ಶಾಲೆ ಬಸ್ರೂರು ಉರ್ದು ಶಾಲೆಯಲ್ಲಿ ಸ್ವಾತಂತ್ರತ್ಸೋವ – ಭಾರತ ಜಗತ್ತಿನ ಸುಂದರ ದೇಶ:ಜನಾಬ್ ಅಬ್ದುಲ್ ಅಜೀಜ್

JANANUDI.COM NETWORK

ಸ. ಹೀ. ಫ್ರಾ.ಶಾಲೆ ಬಸ್ರೂರು ಉರ್ದು ಶಾಲೆಯಲ್ಲಿ ಸ್ವಾತಂತ್ರತ್ಸೋವ – ಭಾರತ ಜಗತ್ತಿನ ಸುಂದರ ದೇಶ:ಜನಾಬ್ ಅಬ್ದುಲ್ ಅಜೀಜ್

ಕುಂದಾಪುರ,ಆ. ಭಾರತ ಹಲವು ಧರ್ಮಗಳಿಗೆ ಆಶ್ರಯ ಕೊಟ್ಟ ಪುಣ್ಯಭೂಮಿ,ಈ ನಾಡಿನ ಸಂಪ್ರದಾಯ,ಆಚರಣೆಗಳು ವಿಶ್ವದ ಎಲ್ಲಾ ರಾಷ್ಟ್ರಕ್ಕೆ ಮಾದರಿ.ಈ ದೇಶಕ್ಕಾಗಿ ಬಲಿದಾನ ಮಾಡಿದ ಎಲ್ಲ ಹೋರಾಟಗಾರರ ಜೀವನ ಇಂದಿನ ಮಕ್ಕಳು ಅಧ್ಯಯನ ಮಾಡಿ ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದು ಮುಖ್ಯ ಅತಿಥಿ ಯಾಗಿ ಶಾಲೆಗೆ ಕಂಪ್ಯೂಟರ್ ನೀಡಿದ ಬೀ. ಎನ್.ಅಬ್ದುಲ್ ಅಜೀಜ್ ಹೇಳಿದರು.ಇನ್ನೋರ್ವ ಅತಿಥಿ ಕಂಪ್ಯೂಟರ್ ಕೊಡುಗೆ ನೀಡಿದ ಖಿಧ್ಮ ಫೌಂಡೇಶನ್ ನ ಕಾರ್ಯದರ್ಶಿ ಜಮೀರ್ ಅಹಮ್ಮದ್ ರಶೀದಿ ಎಲ್ಲಾ ಮಕ್ಕಳಿಗೆ ಡೈರಿ ವಿತರಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿ ಗಳಾಗಿ ಶಿಕ್ಷಣ ತಜ್ಞ ಶಾಬೂ ನ ಉಸ್ತಾದ್ ಸ್ವಾತಂತ್ರ ಶುಭಾಶಯ ವಿನಿಮಯ ಮಾಡಿ,ವೇದಿಕೆಯಲ್ಲಿ ಮೊಹಮ್ಮದ್ ಹನೀಫ್ ಶೇಕ್ ಸೌದಿ ಅರೇಬಿಯಾ,ಮೊಹಮ್ಮದ್ ರಫೀಕ್ ಶೇಕ್.ಹಳೆ ವಿದ್ಯಾರ್ಥಿ ಸಂಘದ ಲಾಲಾ ಅನ್ವರ್.ಅಯ್ಯೂಬ್ ಮಸ್ಕತ್.ಫಿರೋಜ್ ಧುಬೈ.ಲಾಲ ಆಜಂ ಉಪಸ್ಥಿತರಿದ್ದರು. ಶಾಲಾ ಎಸ್. ಡೀ. ಏಮ್. ಸಿ ಅಧ್ಯಕ್ಷ ಅಜೀಜ್ ಸಾಹೇಬ್ ಸಭೆಯ ಅಧ್ಯಕ್ಷತೆ ವಹಿಸಿ ಶಾಲಾ ಬೆಳವಣಿಗೆ ಕುರಿತು ಹೆಮ್ಮೆ ವ್ಯಕ್ತಪಡಿಸಿ ಮಾತಾಡಿದರು.ಕೊನೆಯಲ್ಲಿ ಶಿಕ್ಷಕಿ ಶ್ರೀಮತಿ ಸಗೀರ್ ತರನ್ನಂ ನೇತ್ರತ್ವದಲ್ಲಿ ಮಕ್ಕಳ ಸಾಂಸ್ಕೃತಿಕ ಚಟುವಟಿಕೆ ನೆರವೇರಿತು.ಮುಖ್ಯ ಅಧ್ಯಾಪಕಿ ಶ್ರೀಮತಿ ವಿಶಾಲಾಕ್ಷಿ ಶೆಡ್ತಿ ಸರ್ವರನ್ನು ಸ್ವಾಗತಿಸಿದರು.ಅಲ್ಲದೆ ಕೊಡುಗೆ ನೀಡಿದವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.ಅಧ್ಯಾಪಕ ಮಹೇಶ್ ವಕ್ವಾಡಿ ನಿರೂಪಿಸಿದರು