ಸ್ವಾತಂತ್ರ್ಯೋತ್ಸವದ ಧ್ವಜಾಹೋಹಣ:ಬಸ್ರೂರು ಹಿಂದೂ ಶಾಲೆ

ವರದಿ: ಚಂದ್ರಶೇಖರ ಬೀಜಾಡಿ

ಸ್ವಾತಂತ್ರ್ಯೋತ್ಸವದ ಧ್ವಜಾಹೋಹಣ:ಬಸ್ರೂರು ಹಿಂದೂ ಶಾಲೆ


ಕೋಟ:ಬಸ್ರೂರು ಹಿಂದೂ ಮಾದರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಧ್ವಜಾಹೋಹಣ ಕಾರ್ಯಕ್ರಮವನ್ನು ಮಾಜಿ ಶಾಸಕ, ಶಾಲಾ ಸಂಚಾಲಕ ಬಿ.ಅಪ್ಪಣ್ಣ ಹೆಗ್ಡೆ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಹಳೇ ವಿದ್ಯಾರ್ಥಿ ಹಾಗೂ ಮಾಜಿ ಯೋಧ ಗಣಪತಿ ಖಾರ್ವಿ ಇವರನ್ನು ಸನ್ಮಾನಿಸಲಾಯಿತು. ಹಿಂದೂಳಿದ ವರ್ಗಗಳ ವಿದ್ಯಾರ್ಥಿ ನಿಲಯದ ಮೇಲ್ವೀಚಾರಕ ನರಸಿಂಹ ಪೂಜಾರಿ,ಬಾಳೆಹಿತ್ಲು ಮಿತ ್ರಮಂಡಳಿ ಅಧ್ಯಕ್ಷ ರಾಜು ಪೂಜಾರಿ,ಎಸ್.ಡಿ.ಎಮ್.ಸಿ.ಅಧ್ಯಕ್ಷ ನಾಗರಾಜ ಪೂಜಾರಿ, ನಿವೇದಿತಾ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಸುಬ್ಬಣ ಕೋಣಿ, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಉಮೇಶ ಆಚಾರ್ಯ, ಕೋಶಾಕಾರಿ ರಾಜೇಶ ಗಾಣಿಗ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ಪುರ ಮೆರವಣಿಗೆ ನಡೆಯಿತು. ಸಹಾಯಕ ಶಿಕ್ಷಕಿ ಕು.ವಿನೂತ ಜೋಗಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಕೆ.ಎಸ್.ಮಂಜುನಾಥ ಪ್ರಾಸ್ತವಿಕ ಮಾತನಾಡಿದರು. ಸಹಾಯಕ ಶಿಕ್ಷಕಿ ಮಾಲತಿ ವಂದಿಸಿದರು. ಸಹಾಯಕ ಶಿಕ್ಷಕಿ ದೀಪ್ತಿ ಕಾರ್ಯಕ್ರಮ ನಿರೂಪಿಸಿದರು.