ಸ್ವಾತಂತ್ರ್ಯದ ಅಮ್ರತ ಮಹೋತ್ಸವ:ಒಂದಾಗಿ ಬಾಳಿದರೆ ಅದುವೇ ನೀಜವಾದ ಸ್ವಾತಂತ್ರ್ಯ-ಫಾ|ಸ್ಟ್ಯಾನಿ ತಾವ್ರೊ

ಕುಂದಾಪುರ,ಅ.15: ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿ, ಸಮುದಾಯ ಕುಂದಾಪುರ, ರೋಜರಿ ಕ್ರೆಡಿಟ್ ಕೊ-ಅಪರೇಟವ್‌ ಸೊಸೈಟಿ, ಕುಂದಾಪುರ, ಇವರ ಸ೦ಯುಕ್ತ ಅಶ್ರಯದಲ್ಲಿ ಸ್ವಾತಂತ್ರ್ಯ ಅಮ್ರತ ಮಹೋತ್ಸ್ವವದ ಪ್ರಯುಕ್ತ ಸಂತ ಮೇರಿ ಪ.ಪೂ.ಕಾಲೇಜ್ ಸಭಾಂಗಣದಲ್ಲಿ ಎರಡು ದಿನಗಳ ಮಹೋತ್ಸವ ಕಾರ್ಯಕ್ರಮ ನಡೆಯಿತು.

    ಅ.14 ರಂದು ಕುಂದಾಪುರ ಮತ್ತು ಬೈಂದೂರು ವಲಯಗಳ ವಿದ್ಯಾರ್ಥಿಗಳಿಗಾಗಿ ದೇಶ ಭಕ್ತಿ ಗೀತೆ, ಹಾಡು ಭಾಷಣ ಸ್ಪರ್ಧೆಗಳು ನಡೆದವು.ಅ.15 ರಂದು ಸಭಾಕಾರ್ಯಕ್ರಮ ನಡೆಯಿತು.  ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕರು  ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅತಿ ವಂ|ಸ್ಟ್ಯಾನಿ ತಾವ್ರೊ “ನಮ್ಮ ದೇಶ 350 ವರ್ಷಗಳಿಂದ ಪರಕೀಯರ ಕೈಯಲ್ಲಿ ಇದ್ದು ನಾವು ಅವರ ಗುಲಾಮಗಿರಿಯಲ್ಲಿ ಇದ್ದೆವು. ನಮ್ಮ ದೇಶದ ಹಿರಿಯರು, ದೇಶ ಭಕ್ತರು, ನಮಗೆ ಸ್ವಾತಂತ್ರ್ಯ ಸಿಗಲು ತಮ್ಮ ಜೀವವನ್ನೆ ಪಣಕ್ಕಿಟ್ಟು, ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ ಪರಿಣಾಮ ಇಂದು ಅದರ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಇವತ್ತು ನಮ್ಮ ದೇಶ ಪ್ರಗತಿಯನ್ನು ಕಂಡರು ಅದಕ್ಕೆ ನಾವೇ ಕಾರಣ, ಪ್ರಗತಿಯನ್ನು ಕಾಣದಿದ್ದರೂ, ಅದಕ್ಕೆ ನಾವೇ ಕಾರಣ, ಇದರಲ್ಲಿ ಪರಕೀಯರ ಪಾತ್ರವಿಲ್ಲ, ನಮ್ಮ ದೇಶ ವಿವಿಧೆತೆಯಲ್ಲಿ ಎಕತೆಯಾಗಿರುವ ದೇಶ, ಹಾಗಾಗಿ ನಾವೆಲ್ಲ ಒಂದಾಗಿ ಬಾಳಿದರೆ, ಅದುವೇ ನೀಜವಾದ ಸ್ವಾಂತ್ರಯ” ಎಂದು ಸಂದೇಶ ನೀಡಿದರು.

    ಈ ಸಂದರ್ಭದಲ್ಲಿ ಬ್ರಿಟನ್ ನಲ್ಲಿ ನಡೆದ ಕಾಮನ್ ವೆಲ್ತ್ 22 ರ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ಪಡೆದ ಕುಂದಾಪುರ- ವಂಡ್ಸೆಯ ಗುರುರಾಜ್‌ ಪೂಜಾರಿ, ಅಂತರಷ್ಟ್ರೀಯ ಪವರ್ ಲಿಪ್ಟರ್ ಸತೀಶ್ ಖಾರ್ವಿ, ಪೌರ ಕಾರ್ಮಿಕಳಾದ ಸುಶೀಲಾ ಕುಂದಾಪುರ, ಕುಂದಾಪುರ ಸರಕಾರಿ ಆಸ್ಪತ್ರೆಯ ಅಟೆಂಡರ್‌ ರಾಮ ಎಚ್‌ ಇವರನ್ನು ಸನ್ಮಾನಿಸಲಾಯಿತು. ಡಾ|ಸೋನಿ ಡಿಕೋಸ್ತಾ, ಮೇಬಲ್ ಡಿಸೋಜಾ ಮತ್ತಿತರು ಸನ್ಮಾತಿರನ್ನು ಪರಿಚಯಿಸಿದರು.

ಕಥೊಲಿಕ್ ಸಭಾ ಸಮಿತಿ ಉಡುಪಿ ಪ್ರದೇಶ ಸಮಿತಿಯ ಅಧ್ಯಕ್ಷೆ ಮೇರಿ ಡಿಸೋಜಾ, ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಯ ಅಧ್ಯಕ್ಷೆ ಶಾಂತಿ ಪಿರೇರಾ ಮಾತುಗಳನ್ನಾಡಿದರು. ಸಮೂಹ ತಂಡ ದೇಶ ಭಕ್ತಿ ಕಾರ್ಯಕ್ರಮ ನೀಡಿತು, ಹೋಲಿ ರೋಜರಿ ಆಂಗ್ಲ ಮಾ.ಶಾಲೆ ಮತ್ತು ಸಂತ ಜೋಸೆಫ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ದೇಶ ಭಕ್ತಿ ನ್ರತ್ಯಗಳು ಪ್ರದರ್ಶನಗೊಂಡವು..ಮಂದಾರ ತಂಡದಿಂದ ಕಯ್ಯೂರಿನ ವೀರರು ಎಂಬ ನಾಟಕ ಪ್ರದರ್ಶನ ನಡೆಯಿತು. ಸ್ಪರ್ಧಾ ವಿಜೇತರಿಗೆ ಅತಿಥಿಗಳು ಬಹುಮಾನವನ್ನು ಹಂಚಿದರು.

   ಸಮೂದಾಯ ಸಂಸ್ಥೆಯ ಅಧಕ್ಷರಾದ ಉದಯ್ ಗಾಂವ್ಕರ್ ಸ್ವಾಗತಿಸಿದರು, ರೋಜರಿ ಕ್ರೆಡಿಟ್ ಕೊ-ಅಪರೇಟವ್‌ ಸೊಸೈಟಿಯ ನಿರ್ದೇಶಕ ವಿನೋದ್ ಕ್ರಾಸ್ಟೊ ಅತಿಥಿಗಳಿಗೆ ಪುಷ್ಪಗಳನ್ನು ನೀಡಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ರಮೇಶ್ ಗುಲ್ವಾಡಿ ನಡೆಸಿಕೊಟ್ಟರು. ಕಾರ್ಯಕ್ರಮದ ಸಂಚಾಲಕ ಅಲ್ಡ್ರಿನ್ ಡಿಸೋಜಾ ಧನ್ಯವಾದಗಳನ್ನು ಅರ್ಪಿಸಿದರು.

.

: