ಸೌರಚಾಲಿತ ಹಾಗೂ ವಿದ್ಯುತ್ ಚಾಲಿತ ಸೈಕಲ್‍ನ್ನು ತಯಾರಿಸಿ ಆರ್.ಎನ್.ಶೆಟ್ಟಿ ಪ. ಕಾಲೇಜು ಪಿಯು ವಿದ್ಯಾರ್ಥಿ ಶ್ರೀಶ ಎಸ್. ಶೆಟ್ಟಿಯ ದೊಡ್ಡ ಸಾಧನೆ

JANANUDI.COM NETWORK

 

ಸೌರಚಾಲಿತ ಹಾಗೂ ವಿದ್ಯುತ್ ಚಾಲಿತ ಸೈಕಲ್‍ನ್ನು ತಯಾರಿಸಿ ಆರ್.ಎನ್.ಶೆಟ್ಟಿ ಪ. ಕಾಲೇಜು ಪಿಯು ವಿದ್ಯಾರ್ಥಿ ಶ್ರೀಶ ಎಸ್. ಶೆಟ್ಟಿಯ ದೊಡ್ಡ ಸಾಧನೆ 

 

 

ಕುಂದಾಪುರ: ಆರ್.ಎನ್.ಶೆಟ್ಟಿ ಪದವಿಪೂರ್ವ ಕಾಲೇಜು ಕುಂದಾಪುರದ ಪ್ರಥಮ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿ ಶ್ರೀಶ ಎಸ್. ಶೆಟ್ಟಿ ಸೌರಚಾಲಿತ ಮತ್ತು ವಿದ್ಯುತ್ ಚಾಲಿತ ಸೈಕಲ್ ನ್ನು ತಯಾರಿಸಿ ದೊಡ್ಡ ಸಾಧನೆÀಯನ್ನು ಮಾಡಿದ್ದಾನೆ.
ಗ್ರಾಮೀಣ ಪ್ರದೇಶದ ಊರು ವಂಡ್ಸೆಯ ಶ್ರೀಧರ ಶೆಟ್ಟಿ ಹಾಗೂ ಶ್ಯಾಮಲ ಶೆಟ್ಟಿಯವರ ಪುತ್ರನಾದ ಈತ ಹೈಸ್ಕೂಲಿನಲ್ಲಿ ವ್ಯಾಸಂಗಮಾಡುತ್ತಿದ್ದಾಗಲೇ ವಿಜ್ಞಾನ ಮಾಡೆಲ್ ತಯಾರಿಕೆÀಯಲ್ಲಿ ಆಸಕ್ತಿ ತೋರಿ ಪ್ರಶಸ್ತಿಗಳನ್ನು ಗಳಿಸಿದ್ದಾನೆ.
30 ಸೆಪ್ಟೆಂಬರ್ 2019ರಂದು ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಭಟ್ಕಳದಲ್ಲಿ ನಡೆದ ಮಾಡೆಲ್ ಎಕ್ಸಪೋದಲ್ಲಿ ಪ್ರಥಮ ಪ್ರಶಸ್ತಿಗಳಿಸಿ ಎಲ್ಲರ ಪ್ರಶಂಸಗೆ ಒಳಗಾಗಿದ್ದಾನೆ.
ಸೈಹಾದ್ರಿ ಇಂಜಿನಿಯರಿಂಗ್ ಕಾಲೇಜು ಮಂಗಳೂರುನವರು ನಡೆಸಿದ ಸೈಹಾದ್ರಿ ಸಾಯನ್ಸ್ ಟ್ಯಾಲೆಂಟ್ ಹಂಟ್ 2019 ನವೆಂಬರ್ 16ರಂದು ನಡೆದಿದ್ದು ಈತ ಅದರಲ್ಲಿ ಪಾಲುಗೊಂಡು ತನ್ನ ಸೌರಚಾಲಿತ ಮತ್ತು ವಿದ್ಯುತ್ ಚಾಲಿತ ಸೈಕಲ್ ನ್ನು ಮಾಡಿ 400 ವಿಜ್ಞಾನ ಮಾಡೆಲ್‍ಗಳಲ್ಲಿ ಟಾಪ್ 5ರಲ್ಲಿ ಆಯ್ಕೆಗೊಂಡು ಮುಂದಿನ ಸಂಶೋಧನೆಗೆ ಸೈಹಾದ್ರಿ ಕಾಲೇಜಿನಿಂದ ನೆರವಿನ ಭರವಸೆಯನ್ನು ಪಡೆದುಕೊಂಡಿದ್ದಾನೆ.
ತನ್ಮದ್ಯೆ ಈತ ಇದೇ ವಿಜ್ಞಾನ ಮಾದರಿಯನ್ನು ಮಂಗಳೂರಿನ ಅಲೋಶಿಯಸ್ ಕಾಲೇಜು, ಬಂಟಕಲ್ ಮಧ್ವ ಇಂಜಿನಿಯರಿಂಗ್ ಕಾಲೇಜು, ಧರ್ಮಸ್ಥಳ ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಡಿ ಎಲ್ಲರ ಪ್ರಶಂಸಗೆ ಪಾತ್ರನಾಗಿದ್ದಾನೆ.
ಆರ್.ಎನ್.ಶೆಟ್ಟಿ ಪಿಯು ಕಾಲೇಜಿನಲ್ಲಿ ನಡೆದ ಸಾಯನ್ಸ್ ಮಾಡೆಲ್ ಮೇಕಿಂಗ್ ಕಾಂಪಿಟೇಶನ್‍ನಲ್ಲೂ ಪ್ರಥಮ ಸ್ಥಾನ ಗಳಿಸಿರುತ್ತಾನೆ. ಈ ಎಲ್ಲಾ ಸಾಧನೆಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಬೈಂದೂರು ಶಾಸಕರಾದ ಶ್ರೀ. ಬಿ.ಎಂ. ಸುಕುಮಾರ ಶೆಟ್ಟಿಯವರು, ಆಡಳಿತ ಮಂಡಳಿಯ ಇತರ ಪದಾದಿಕಾರಿಗಳು, ಹಾಗೂ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಈತನ ಭವಿಷ್ಯಕ್ಕೆ ಶುಭಕೋರಿದ್ದಾರೆ.