ಸಾರ್ವಜನಿಕರ ಜೀವ ಉಳಿಸುವುದೇ ನಮ್ಮ ಗುರಿ – ಡಾ. ರಮ್ಯಾ ದೀಪಿಕಾ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

ಸಾರ್ವಜನಿಕರ ಜೀವ ಉಳಿಸುವುದೇ ನಮ್ಮ ಗುರಿ – ಡಾ. ರಮ್ಯಾ ದೀಪಿಕಾ

 

 

ಕೋಲಾರ ಜುಲೈ 1. ಸಾರ್ವಜನಿಕರ ಅಮೂಲ್ಯ ಜೀವನ ಉಳಿಸಿಕೊಳ್ಳುವುದಕ್ಕೆ ತಮ್ಮ ಜೀವನ ಮುಡುಪಾಗಿಟ್ಟು ಶ್ರಮಿಸುವುದು ನಮ್ಮ ಗುರಿಯಾಗಿದೆ ಎಂದು ತಾಲೂಕು ಕುಟುಂಬ ಕಲ್ಯಾಣಾಧಿಕಾರಿ ಡಾ . ವೈ ಆರ್. ರಮ್ಯ ದೀಪಿಕಾ ತಿಳಿಸಿದರು
ನಗರದ ಎಸ್ಎನ್ಆರ್ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಏರ್ಪಡಿಸಿದ್ದ ವಿಶ್ವ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ವೈದ್ಯೋ ನಾರಾಯಣ ಹರಿ ಎಂಬ ಮಾತು ಕೊರೋನಾ ಕಾಲಘಟ್ಟದಲ್ಲಿ ಅಕ್ಷರಶಃ ಸಾಬೀತಾಗಿದೆ ಕಿಲ್ಲರ್ ಕೊರೊನಾದಿಂದ ದೇಶವಾಸಿಗಳ ಅಮೂಲ್ಯ ಜೀವ ರಕ್ಷಿಸಲು ವೈದ್ಯಲೋಕ ಟೊಂಕಕಟ್ಟಿ ನಿಂತಿದೆ ಎಂದು ತಿಳಿಸಿದರು.
ರೋಗದ ಆತಂಕದ ನಡುವೆಯೂ ಮುಂಚೂಣಿ ವಾರಿಯರ್ ಗಳಾಗಿ ವೈದ್ಯರು ಸೇವೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ವಾದರೂ ಈ ಸಮಯದಲ್ಲಿ ವೈದ್ಯಲೋಕದ ಪರಿಶ್ರಮ ಅಪಾರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದರು.
ಪ್ರತಿಯೊಬ್ಬ ರೋಗಿಯನ್ನು ವಿಶ್ವಾಸದಿಂದ ಕಂಡು ನಂಬಿಕೆ ಪ್ರೀತಿ ಆತ್ಮಸ್ಥೈರ್ಯ ತುಂಬಿ ರೋಗಿಯನ್ನು ರೋಗದಿಂದ ಪಾರುಮಾಡಿ ಮನೆಗೆ ಕಳಿಸಿದ್ದಾರೆ ಮನಸ್ಸಿನಲ್ಲಿ ಸಂತೋಷ ಆಗುತ್ತದೆ ಎಂದು ತಿಳಿಸಿದರು.
ಶಸ್ತ್ರಚಿಕಿತ್ಸಕ ಬಿ ನಟರಾಜ್ ಮಾತನಾಡಿ ರೋಗಿಯನ್ನು ಗುಣಮುಖ ರನ್ನಾಗಿ ಮಾಡುವಲ್ಲಿ ವೈದ್ಯರು ಸೇವೆ ಸಲ್ಲಿಸುತ್ತಿದ್ದು ಆಕಸ್ಮಿಕ ಸಂದರ್ಭದಲ್ಲಿ ಅವರನ್ನು ಸಾರ್ವಜನಿಕರು ಟೀಕಿಸುವುದು ವಿμÁದನೀಯ ಇದನ್ನು ಅರ್ಥ ಮಾಡಿಕೊಳ್ಳಬೇಕು . ವೈದ್ಯರು ಮಾಹಿತಿಯನ್ನು ಅಪಾರವಾಗಿ ಪ್ರೀತಿಸುವುದರಿಂದ ಸಾರ್ವಜನಿಕರ ಸೇವೆಗೆ ತಮ್ಮನ್ನೇ ತಾವು ಅರ್ಪಿಸಿಕೊಳ್ಳುತ್ತಾರೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಚೇರ್ಮೆನ್ ಎನ್. ಗೋಪಾಲಕೃಷ್ಣ ಗೌಡ ಮಾತನಾಡಿ ದೇಶ ಕಂಡ ಅತ್ಯುತ್ತಮ ವೈದ್ಯ ರಾಯ್ ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ವೈದ್ಯರ ದಿನವಾಗಿ ಆಚರಿಸಲಾಗುತ್ತಿದೆ , ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆ ಜೊತೆಗೆ ತನ್ನದೇ ರೀತಿಯಲ್ಲಿ ಸಮಾಜ ಸೇವೆಯನ್ನು ಸಲ್ಲಿಸುವ ವೈದ್ಯರನ್ನು ಗುರುತಿಸಿ ಈ ಸಂದರ್ಭದಲ್ಲಿ ಸನ್ಮಾನಿಸುತ್ತಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ನಂದೀಶ್ ಮಾತನಾಡಿ ವೈದ್ಯರು ಎಂದರೆ ಪ್ರತ್ಯಕ್ಷ ದೇವರಿದ್ದಂತೆ, ಸಂಕಷ್ಟದ ಸಮಯದಲ್ಲಿ ತಕ್ಷಣ ನೆನಪಾಗುವ ಅವರಲ್ಲಿ ವೈದ್ಯರು ಅಗ್ರಗಣ್ಯರು, ಇಂತಹ ವೈದ್ಯರಿಗೆ ನಾವು ಎಷ್ಟು ಕೃತಜ್ಞರಾಗಿದ್ದಾರೆ ಸಾಲದು ಹೀಗಾಗಿ ಕಣ್ಣಿಗೆ ಕಾಣುವ ದೇವರಿಗೆ ಧನ್ಯವಾದ ಹೇಳಲು ಮೀಸಲಾಗಿರುವ ದಿನವೇ ವೈದ್ಯರ ದಿನ ಎಂದು ವೈದ್ಯಕೀಯ ಸೇವೆಯನ್ನು ಬಳಸಿದರು ಬಣ್ಣಿಸಿದರು
ನಿವಾಸಿ ವೈದ್ಯಾಧಿಕಾರಿ ಡಾ ಎಸ್ ವಿ ನಾರಾಯಣಸ್ವಾಮಿ, ರಕ್ತ ನಿಧಿ ಅಧಿಕಾರಿ ಡಾ, ವಿ.ರೇವತಿ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಮ್ಯ ದೀಪಿಕಾ, ಶಸ್ತ್ರಚಿಕಿತ್ಸಕ ಡಾ. ಬಿ ನಟರಾಜ್ ರವರನ್ನು ಸನ್ಮಾನಿಸಿದ ಇದೇ ಸಂದರ್ಭದಲ್ಲಿ ಪೌಷ್ಟಿಕಾಂಶ ಭರಿತ ಪಾನೀಯ ಗಳನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಚೇರ್ಮನ್ ಗೋಪಾಲಕೃಷ್ಣ ಗೌಡರು ತಾಲ್ಲೂಕಿನಲ್ಲಿ ಅಗತ್ಯವಿರುವ ಸಂತ್ರಸ್ತರಿಗೆ ನೀಡಲು ಮನವಿ ಮಾಡಿ ಪಾನೀಯಗಳನ್ನು ಹಸ್ತಾಂತರಿಸಿದರು.
ಜಿಲ್ಲಾ ಭಾರತೀಯ ರೆಡ್ಕ್ರಾಸ್ ಸಮಿತಿ ಕೋಶಾಧ್ಯಕ್ಷ ಜಿ.ಶ್ರೀನಿವಾಸ್, ಕಾರ್ಯದರ್ಶಿ ವಿ.ಪಿ. ಸೋಮಶೇಖರ್, ಕೋಲಾರ ಕೌಶಲ್ಯ ತರಬೇತಿ ಕೇಂದ್ರದ ಅಧ್ಯಕ್ಷ ಎಂ.ವಿ. ನಾರಾಯಣಸ್ವಾಮಿ, ಮುಖಂಡರುಗಳಾದ ಶ್ರೀರಾಮರೆಡ್ಡಿ, ಡಾ. ಚಿದಾನಂದ, ಎಸ್ಸಿ. ವೆಂಕಟಕೃಷ್ಣಪ್ಪ, ಜೀ ಸೀನಪ್ಪ ಬಶೀರ್ ಅಹ್ಮದ್, ಸಾಯಿ ಪ್ರಶಾಂತ್, ನಾಗೇಶ್, ಶೋಭಾ,ಪ್ರಭಾವತಿ ಮತ್ತಿತರರು ಉಪಸ್ಥಿತರಿದ್ದರು.