ಸಾಮಾಜಿಕ ಧುರೀಣ ಎಮ್.ಎಮ್.ಶೆಟ್ಟಿ ನಿಧನ

JANANUDI.COM NETWORK

ಸಾಮಾಜಿಕ ಧುರೀಣ ಎಮ್.ಎಮ್.ಶೆಟ್ಟಿ ನಿಧನ

’ಮುತ್ತು ಮಾಸ್ಟ್ರು’ ಎಂದು ಖ್ಯಾತರಾದ ಹಿರಿಯ ಸಾಮಾಜಿಕ ಧುರೀಣ ನಿವ್ರತ್ತ ಮುಖ್ಯೋಪಾಧ್ಯಯ ಉಳ್ತೂರು ಶ್ರೀ ಮಹಾಲಿಂಗೆಶ್ವರ ಹಿರಿಯ ಪ್ರಾಥಮಿಕ ಶಾಲೆಯ ಸ್ಥಾಪಕ ಸಂಚಾಲಕ ಸಹಕಾರಿ ಧುರೀಣ ಮಲ್ಯಾಡಿ ಮುತ್ತಯ್ಯ ಶೆಟ್ಟಿ (87) ಅಕ್ಟೋಬರ್ 27 ರಂದು ನಿಧನರಾದರು.

     ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ್ಡಿದ್ದ ಇವರು ಕೊಟೇಶ್ವರ ವ್ಯವಸಾಯ ಸಂಘದ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಉಳ್ತೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮಲ್ಯಾಡಿ ನಂದಿಕೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೊದ್ದಾರ ಸಮಿತಿಯ ಅಧ್ಯಕ್ಷರಾಗಿಯೂ ಶ್ರಮಿಸಿ, ಉಳ್ತೂರು ಶ್ರೀ ಮಹಾಲಿಂಗೆಶ್ವರ ದೇವಸ್ಥಾನದ ಅಭಿವ್ರದ್ದಿಯಲ್ಲಿ ಪಾಲ್ಗೋಡಿದ್ದರು.

    ಸಾರಿಗೆ, ಆವೆ ಮಣ್ಣಿನ ವ್ಯವಹಾರ ನಡೆಸುತಿದ್ದ ಅವರು ತಮ್ಮ ಪತ್ನಿಯ ಹೆಸರಿನಲ್ಲಿ ದತ್ತಿ ನಿಧಿ ಮೂಲಕ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡುತಿದ್ದರು.  ಶ್ರೀ ಮಹಾಲಿಂಗೆಶ್ವರ ಹಿರಿಯ ಪ್ರಾಥಮಿಕ ಶಾಲೆಯ ಅಭಿವ್ರದ್ದಿಗಾಗಿ, ವಿದ್ಯಾರ್ಥಿಗಳಿಗಾಗಿ ಸಾರ್ವಜನಿಕರ ಸಹಾಯದಿಂದ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಿದ್ದರು. ಉತ್ತಮ ಕಲಾವಿದರಾಗಿ, ಕಲಾ ಪೋಷಕರಾಗಿಯೂ ಹೆಸರು ಗಳಿಸಿದ್ದರು.

   ಇವರು ಪುತ್ರ ವ್ಯಹವಾರೋದ್ಯಮಿ ಪ್ರಸಾದ್ ಶೆಟ್ಟಿ ಸಹಿತ ಒರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿ, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಶ್ರದ್ದಾಂಜಲಿ ಅರ್ಪಿಸಿದ್ದಾರೆ.