ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಸರ್ಕಾರಿ ನೌಕರ ಸಂಘದ ಹಿತ ಕಾಪಾಡಿಕೊಳ್ಳುವುದರ ಜೊತೆಗೆ ಸಂಘದ ಘನತೆ ಮತ್ತು ನೌಕರರ ರಕ್ಷಣೆಗೆ ಸದಾ ನಾನು ಸಿದ್ದ : ಎಂ.ನಾಗರಾಜ್
ಸರ್ಕಾರಿ ನೌಕರ ಸಂಘದ ಹಿತ ಕಾಪಾಡಿಕೊಳ್ಳುವುದರ ಜೊತೆಗೆ ಸಂಘದ ಘನತೆ ಮತ್ತು ನೌಕರರ ರಕ್ಷಣೆಗೆ ಸದಾ ನಾನು ಸಿದ್ದನಾಗಿರುತ್ತೇನೆಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಬಂಗವಾದಿ ಎಂ.ನಾಗರಾಜ್ ತಿಳಿಸಿದರು.
ಪಟ್ಟಣದ ಮೇರಿ ದೇವದಾಸಿಯ ಸಭಾಂಗಣದಲ್ಲಿ ನಡೆದ 2019 ರಿಂದ 2024 ನೇ ಸಾಲಿಗೆ ತಾಲ್ಲೂಕು ಸರ್ಕಾರಿ ನೌಕರ ಸಂಘಕ್ಕೆ ಆಯ್ಕೆಯಾದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಹಾಗೂ ಅಭಿನಂದಾ ಸಮಾರಂಭವನ್ನು ಉದ್ಗಾಟಿಸಿ ಮಾತನಾಡಿದ ನಾಗರಾಜ್ ನಿಮ್ಮ ಸೇವೆಗೆ ನಾನು ಸದಾ ಸಿದ್ದನಾಗಿರುತ್ತೇನೆ. ನನಗೆ ಎಲ್ಲಾ ನೌಕರರು ಒಂದೇ ನೌಕರರಿಗೆ ಯಾವುದೇ ಸಮಸ್ಯೆ ಬಂದಾಗ ನಿಮ್ಮ ಹೆಗಲಿಗೆ ನಾನು ಬೆನ್ನುಲುಬಾಗಿ ನಿಮ್ಮ ಸೇವೆ ಮಾಡಲು ಸದಾ ಸಿದ್ದನಾಗಿರುತ್ತೇನೆಂದರು.
ಸಂಘದಲ್ಲಿ ಯಾವುದೇ ಸಮಸ್ಯೆ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಹೋರಾಡೊಣ ಸಂಘದಲ್ಲಿ ಅಧಿಕಾರ ಶಾಶ್ವತ ಅಲ್ಲ ನಾವು ಅಲಂಕರಿಸಿದ ಪದಾಧಿಕಾರಿಗಳ ಹುದ್ದೆ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಈ ನಿಟ್ಟಿನಲ್ಲಿ ನಾವೆಲ್ಲರೂ ನೌಕರರ ಹಿತವನ್ನು ಕಾಪಾಡಲು ದುಡಿಯೋಣ ಯಾರು ಇಲ್ಲಿ ಮೇಳಲ್ಲ ಕೀಳಲ್ಲ ನಾವೆಲ್ಲರೂ ಸರ್ಕಾರಿ ನೌಕರರೇ ನಮ್ಮ ಜವಾಬ್ದಾರಿಯನ್ನು ಸಕ್ರಿಯವಾಗಿ ನೇರವೇರಿಸೋಣ ಎಂದರು.
ಈಗಾಗಲೇ ನಾವೆಲ್ಲಾ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೀವಿ ಪ್ರತ್ಯೇಕವಾಗಿ ನಮಗೆ ನ್ಯಾಯ ಬೆಲೆ ಅಂಗಡಿಗಳು ಕೊಡುವುದಕ್ಕೆ ನಮ್ಮ ರಾಜ್ಯಾಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಿದ್ದೇವೆ. ಶೀಘ್ರದಲ್ಲೇ ಅದು ಈಡೇರುತ್ತದೆ ನಮ್ಮ ತಾಲ್ಲೂಕಿನ ಶಿಕ್ಷಕರು ದೇವರಿದ್ದ ಹಾಗೆ ನನ್ನ ಗೆಲುವಿಗೆ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ನನ್ನನ್ನು ಮೂರನೇ ಭಾರಿಗೆ ಆಯ್ಕೆ ಮಾಡಿ ಗೆಲ್ಲಿಸಿದ್ದಕ್ಕೆ ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.
ನಾವೆಲ್ಲ ಎನ್.ಪಿ.ಎಸ್. ಬಗ್ಗೆ ಹೋರಾಡುವ ಅಗತ್ಯವಿದೆ ಸರ್ಕಾರಿ ನೌಕರರ ಮಕ್ಕಳ ಶೇಕಡ 90 ಕ್ಕಿಂತÀ ಹೆಚ್ಚು ಅಂಕಗಳು ಗಳಿಸಿದ ಮಕ್ಕಳಿಗೆ ರಾಜ್ಯ ಸಂಘದಿಂದ ಪ್ರೋತ್ಸಾಹ ಧನ ನೀಡಲಾಗುವುದು ಇದಕ್ಕೆ ಸಂಭಂದಪಟ್ಟಂತೆ ಸೋಮವಾರದಿಂದ ನಮ್ಮ ನೌಕರರ ಸಂಘದ ಕಛೇರಿಯಲ್ಲಿ ಅರ್ಜಿಗಳನ್ನು ನೀಡುತ್ತೇವೆ. ನೀವುಗಳು ಅರ್ಜಿಯನ್ನು ಪಡೆದು ಅದಕ್ಕೆ ಬೇಕಾದ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಂಘದ ಕಛೇರಿಯಲ್ಲಿ ನೀಡಿ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು
ಸರ್ಕಾರಿ ನೌಕರ ಸಂಘದ ತಾಲ್ಲೂಕು ಗೌರವಾಧ್ಯಕ್ಷರಾಗಿ ರೇಷ್ಮೆ ಇಲಾಖೆಯ ಎಂ.ಶ್ರೀನಿವಾಸಯ್ಯ ಪ್ರಧಾನ ಕಾರ್ಯದರ್ಶಿಯಾಗಿ ವಿ.ತಿಪ್ಪಣ್ಣ, ಗೌರವಾದ್ಯಕ್ಷರಾಗಿ ಕೃಷ್ಣಪ್ಪ, ನೌಕರ ಸಂಘದ ಹಿರಿಯ ಉಪಾಧ್ಯಕ್ಷರಾಗಿ (ಉಪನ್ಯಾಸಕರು) ಮಂಜುನಾಥರೆಡ್ಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಆದ ಎನ್.ರಾಮಚಂದ್ರ, ಉಪಾಧ್ಯಕ್ಷರಾಗಿ ತಾಲ್ಲೂಕು ಪಂಚಾಯ್ತಿ ಸಮಿತಿಯಿಂದ ಚಿನ್ನಪ್ಪ, ಎಂ.ಎಂ.ವೆಂಕಟೇಶ್, ಕೈಗಾರಿಕೆ ಇಲಾಖೆಯ ಅಕ್ಮಲ್, ಶಿಕ್ಷಣ ಇಲಾಖೆಯಿಂದ ಶ್ರೀನಿವಾಸ್, ಕಾಳಾಚಾರಿ, ಸಿ.ಎಂ.ವೆಂಕಟರವಣಪ್ಪ, ಇವರೆಲ್ಲರು ಉಪಾಧ್ಯಕ್ಷರಾಗಿದ್ದಾರೆ.
ಹಾಗೆಯೇ ಸಂಘಟನಾ ಕಾರ್ಯದರ್ಶಿಗಳಾಗಿ ಕೃಷಿ ಇಲಾಖೆಯ ಪ್ರಸನ್ನಕುಮಾರ್, ರವೀಂದ್ರ ಸಿಂಗ್, ಶಂಕರಪ್ಪ, ಎ.ಸಿ.ಡಿ.ಪಿ.ಒ ಮುನಿರಾಜು, ಜಂಟಿ ಕಾರ್ಯದರ್ಶಿಯಾಗಿ ಮೀನು ಗಾರಿಕೆ ಇಲಾಖೆಯ ಮುನಯ್ಯ, ಅರಣ್ಯ ಇಲಾಖೆಯ ನವೀನ್ ಕುಮಾರ್, ಪುರಸಭೆಯಿಂದ ಕೆ.ಜಿ.ರಮೇಶ್, ಆಯ್ಕೆ ಮಾಡಿರುತ್ತಾರೆ.
ಕಾನೂನು ಸಲಹೆಗಾರರಾಗಿ ಸಹಕಾರ ಇಲಾಖೆಯ ವೀರಭದ್ರಯ್ಯ, ಜಂಟಿ ಕಾರ್ಯದರ್ಶಿಯಾಗಿ ಆರೋಗ್ಯ ಇಲಾಖೆಯ ನಾಗರಾಜ್, ಲೆಕ್ಕಪರಿಶೋಧಕರಾಗಿ ಸಮಾಜ ಕಲ್ಯಾಣ ಇಲಾಖೆಯ ಕೆ.ಶ್ರೀನಿವಾಸ್, ಕಾರ್ಯಾದ್ಯಕ್ಷರಾಗಿ ಶಿಕ್ಷಣ ಇಲಾಖೆಯ ಕೃಷ್ಣಪ್ಪ, ಕ್ರೀಡಾ ಕಾರ್ಯದರ್ಶಿಯಾಗಿ ಕಂದಾಯ ಇಲಾಖೆಯ ಹೆಚ್ ನಾರಾಯಣಸ್ವಾಮಿ, ಬಿ.ಇ.ಒ ಇಲಾಖೆಯಿಂದ ಬಾಷ, ಪತ್ರಿಕಾ ಕಾರ್ಯದರ್ಶಿ ಶಿವಣ್ಣ, ಸಹ ಕಾರ್ಯದರ್ಶಿ ಹೆಚ್.ವಿ.ಅಶೋಕ್ ಕುಮಾರ್, ಆಯ್ಕೆ ಮಾಡಿರುತ್ತಾರೆ.
ಕಾರ್ಯಾಕಾರಿ ಸಮಿತಿಯ ಸದಸ್ಯರಾಗಿ ರಾಜಣ್ಣ, ಪದ್ಮನಾಭಚಾರಿ, ವೆಂಕಟರವಣ ನಾಯಕ್, ಎಲ್.ವಿ.ವೆಂಕಟಾಚಲಪತಿ, ಎನ್.ಪ್ರಸನ್ನಕುಮಾರ್, ವೆಂಕಟರೆಡ್ಡಿ ಆಯ್ಕೆಯಾಗಿದ್ದಾರೆಂದು ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಬಂಗವಾದಿ ನಾಗರಾಜ್ ತಿಳಿಸಿದರು.
ಇದೇ ಸಮಯದಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಡಾ.ಜಿ.ಶ್ರೀನಿವಾಸ್, ಖಜಾಂಚಿ ಜನಾರ್ಧನ್ ಹಾಜರಿದ್ದರು.