ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ : ಜಿಲ್ಲೆಯ ಸರ್ಕಾರಿ ಜಮೀನುಗಳಾದ ಸ್ಮಶಾನ , ಗುಂಡುತೋಪು , ಬಂಡಿದಾರಿ , ಕೆರೆ ಜಮೀನುಗಳು ಒತ್ತುವರಿಯಾಗಿದ್ದು , ಜಿಲ್ಲೆಯಲ್ಲಿ ಒಟ್ಟು 7 ಸರ್ಕಾರಿ ಸರ್ವೆನಂಬರ್‌ಗಳಲ್ಲಿ ಒಟ್ಟು ಸುಮಾರು 6-33 ಎಕರೆ ಜಮೀನು ಒತ್ತುವರಿಯಾಗಿರುವುದನ್ನು ಜುಲೈ 20 ರಿಂದ ವರೆಗೆ . ಗುರುತಿಸಿ ತೆರವುಗೊಳಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಸಿ . ಸತ್ಯಭಾಮ ಅವರು ತಿಳಿಸಿದ್ದಾರೆ . ಜುಲೈ 25 ತೆರವುಗೊಳಿಸಿದ ಜಮೀನಿನ ವಿವರ : ಕೋಲಾರ ತಾಲ್ಲೂಕಿನ ವೇಮಗಲ್ ಹೋಬಳಿಯ ಕುರುಗಲ್ ಗ್ರಾಮದ ಬಂಡಿದಾರಿ ಸರ್ವೆ ನಂಬರ್ 194,195,143 ರಲ್ಲಿ 1-28 ಎಕರೆ .
ಮುಳಬಾಗಿಲು ತಾಲ್ಲೂಕಿನ ಆವಣಿ ಹೋಬಳಿಯ ಮೇಲಾಗಣಿ ಗ್ರಾಮದ ಸ್ಮಶಾನ ಭೂಮಿ ಸರ್ವೆ ನಂಬರ್ 138 ರಲ್ಲಿ ಚಿನ್ನಪ್ಪ ಬಿನ್ ಚಿನ್ನಪ್ಪ ಎಂಬುವರಿಂದ 0-10 ಎಕರೆ . ದುಗ್ಗಸಂದ್ರ ಹೋಬಳಿಯ ತಾವರೆಕೆರೆ ಗ್ರಾಮದ ಸ್ಮಶಾನ ಭೂಮಿ ಸರ್ವೆ ನಂಬರ್ 45 ರಲ್ಲಿ ಚಿನ್ನಕ್ಕೆ ಕೋಂ ನಾರಾಯಣಪ್ಪ ಎಂಬುವರಿಂದ 2-25 ಎಕರೆ , ಸಿ ಎಂ ಸೊಣ್ಣಪ್ಪ ಬಿನ್ ಮುನಿವೆಂಕಟಪ್ಪ ಎಂಬುವರಿಂದ 0-05 0-05 ಎಕರೆ , ಮುನಿವೆಂಕಟಮ್ಮ ಕೋಂ ಲಕ್ಷ್ಮಯ್ಯ ಎಂಬುವರಿಂದ 0-10 0-10 ಎಕರೆ , ಶ್ರೀನಿವಾಸಪುರ ತಾಲ್ಲೂಕಿನ ನೆಲವಂಕಿ ಹೋಬಳಿಯ ಗಂಗನ್ನಗಾರಿಪಲ್ಲಿ ಗ್ರಾಮದ ಸ್ಮಶಾನ ಭೂಮಿ ಸರ್ವೆ ನಂಬರ್ 1 ರಲ್ಲಿ 1-20 ಎಕರೆ , ಕಸಬಾ ಹೋಬಳಿಯ ಅಗ್ರಹಾರ ಗ್ರಾಮದ ಸ್ಮಶಾನ ಭೂಮಿ ಸರ್ವೆ ನಂಬರ್ 71 ರಲ್ಲಿ ಕೆ . ಮುನಿಶಾಮಿ ಬಿನ್ ಜಿ ಕೃಷ್ಣಪ್ಪ ಎಂಬುವರಿಂದ 0-15 ಎಕರೆ , ತೆರವು ಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಸಿ ಸತ್ಯಭಾಮ ಅವರು ತಿಳಿಸಿದ್ದಾರೆ .ವರದಿ ಶಬ್ಬೀರ್