ಸರ್ಕಾರದಿಂದ ಬರುವ ಪಿಂಚಣಿ ಮತ್ತು ಮಾಸಾಶನ ಹಣವನ್ನು ಕೂಡಲೇ ಬಿಡುಗಡೆ ಮಾಡಿ: ರೈತಸಂಘ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

ಸರ್ಕಾರದಿಂದ ಬರುವ ಪಿಂಚಣಿ ಮತ್ತು ಮಾಸಾಶನ ಹಣವನ್ನು ಕೂಡಲೇ ಬಿಡುಗಡೆ ಮಾಡಿ: ರೈತಸಂಘ

 

 

 

ಕೋಲಾರ, ಮೇ.19: ಸರ್ಕಾರದಿಂದ ಬರುವ ಪಿಂಚಣಿ ಮತ್ತು ಮಾಸಾಶನ ಹಣವನ್ನು ಕೂಡಲೇ ಬಿಡುಗಡೆ ಮಾಡಿ ಸಂಕಷ್ಠದಲ್ಲಿರುವ ಬಡವರ ರಕ್ಷಣೆಗೆ ಸ್ಪಂದಿಸಬೇಕೆಂದು ರೈತಸಂಘದಿಂದ ಗ್ರೇಡ್.2 ತಹಶೀಲ್ದಾರ್ ಸುಜಾತರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಮನವಿ ನೀಡಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಒಂದು ಕಡೆ ಕಿತ್ತು ತಿನ್ನುವ ಬಡತನ ಮತ್ತೊಂದು ಕಡೆ ಕಣ್ಣಿಗೆ ಕಾಣದ ವೈರಸ್ ಹಾವಳಿಯಿಂದ ಕೆಲಸವಿಲ್ಲದೆ ಜೀವನ ನಿರ್ವಹಣೆ ದಿನೇ ದಿನೇ ಕಷ್ಠಕರ ಪರಿಸ್ಥಿತಿಯಲ್ಲಿರುವಾಗ ಸರ್ಕಾರದಿಂದ ಬಡವರಿಗೆ, ವಿದವೆಯರಿಗೆ, ವೃದ್ದರಿಗೆ, ಅಂಗವಿಕಲರಿಗೆ ಬರುತ್ತಿದ್ದ ಮಾಸಾಶನ ಒಂದು ವರ್ಷದಿಂದ ಸಂಪೂರ್ಣವಾಗಿ ಸ್ಥಗಿತವಾಗಿರುವುದರಿಂದ ಅದನ್ನೇ ನಂಬಿದ್ದ ಲಕ್ಷಾಂತರ ಬಡವರು ಚಿಕ್ಕ ಪುಟ್ಟ ಕಾಯಿಲೆಗಳು, ಮಾತ್ರೆಗಳಿಗೆ ಹಣವಿಲ್ಲದೆ ಪರದಾಡುವ ಜೊತೆಗೆ ಅಂಗವಿಕಲರ ಸಂಕಷ್ಠ ಕಣ್ಣಿಂದ ನೋಡಲು ಆಗದ ಪರಿಸ್ಥಿತಿ ಇದೆ. ಇದರ ಜೊತೆಗೆ ಸಂಬಂಧಪಟ್ಟ ಪೋಸ್ಟ್‍ಮೆನ್‍ಗಳನ್ನು ವಿಚಾರಿಸಿದರೆ ಅವರು ಅಂಚೆ ಕಚೇರಿ ಮತ್ತು ತಾಲ್ಲೂಕು ಕಚೇರಿಗೆ ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಾರೆ. ಇನ್ನೂ ಸರ್ಕಾರದ ಆದೇಶದಂತೆ 60 ವರ್ಷ ಮೇಲ್ಪಟ್ಟವರು ಸಾರ್ವಜನಿಕವಾಗಿ ಒಡಾಡುವಂತಿಲ್ಲ ಆದರೂ ಕಷ್ಟದ ಪರಿಸ್ಥತಿಯಲ್ಲಿ ನೆರವಾಗುವ 600 ಮತ್ತು 1000 ಹಣಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ಬಂದರೆ ಅಲ್ಲಿಯೂ ಸಹ ಲಂಚವಿಲ್ಲದೆ ಕೆಲಸ ಆಗುತ್ತಿಲ್ಲವೆಂದು ನೊಂದ ಮಾಸಾಶನ ಪಲಾನುಭವಿಗಳು ಕಣ್ಣೀರಿಗೆ ಬೆಲೆ ಇಲ್ಲದಂತಾಗಿದೆಂದು ಅಸಮಾಧಾನ ವ್ಯಕ್ತಪಡಿಸಿದರು

ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಬಡವರ ಹೆಸರಿನಲ್ಲಿ ಸರ್ಕಾರಗಳು ನಾನಾ ಯೋಜನೆಗಳನ್ನು ಸಾವಿರಾರು ಕೋಟಿ ಬಿಡುಗಡೆ ಮಾಡುತ್ತಿದೆ. ಆದರೆ ಇರುವ ಭ್ರಷ್ಟವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ತಲುಪಲು ನೂರಾರು ಸಮಸ್ಯೆಗಳು ಅದನ್ನು ಪಡೆಯುವ ಸಮಯಕ್ಕೆ ಪಲಾನುಭವಿಯೇ ಇರುವುದಿಲ್ಲ ಅಷ್ಟರ ಮಟ್ಟಿಗೆ ವ್ಯವಸ್ಥೆ ಹದಗೆಟ್ಟಿದೆ. ಇನ್ನೂ ಸರ್ಕಾರ ನೀಡುತ್ತಿರುವ ಮಾಸಾಶನ ಹಣಕ್ಕಾಗಿ ಗ್ರಾಮೀಣ ಪ್ರದೇಶದ ಬಡವರಿಗೆ ಪ್ರತಿ ತಿಂಗಳು ಮಾಸಾಶನ ತಲುಪಿ 6 ತಿಂಗಳು ಕಳೆದರೂ ಇದರ ಬಗ್ಗೆ ಯಾವುದೇ ಅಧಿಕಾರಿಗಳು ತಲೆಕೆಡಿಸಿಕೊಳ್ಳದೆ ಮೌನವಾಗಿರುವುದಕ್ಕೆ ಬಡವರು ಸಂಬಂಧಪಟ್ಟ ಅಧಿಕಾರಿಗಳ ಮತ್ತು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಮಾನ್ಯ ಉಪ ವಿಭಾಗಧಿಕಾರಿಗಳು ಬಡತನದ ಜೊತೆಗೆ ವೈರಸ್ ಹಾವಳಯಿಂದ ತತ್ತರಿಸಿರುವ ಬಡವರ ನೆರವಿಗೆ ಬರಲು ಸಂಬಂಧಪಟ್ಟ ಅಧಿಕಾರಿಗಳನ್ನು ಸಭೆ ಕರೆದು ಮಾಸಾಶನ ಅವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದು ಕೂಡಲೇ ಹಣ ಬಿಡುಗಡೆ ಮಾಡಿ ಸಂಕಷ್ಟದಲ್ಲಿರುವ ಬಡವರ ರಕ್ಷಣೆಗೆ ನಿಲ್ಲಬೇಕೆಂದು ಒತ್ತಾಯಿಸದರು.
ಮನವಿ ಸ್ವೀಕರಿಸಿ ಮಾತನಾಡಿದ ಗ್ರೇಡ್.2 ತಹಶೀಲ್ದಾರ್ ಸುಜಾತರವರು ಮಾಸಾಶನದ ಅವ್ಯವಸ್ಥೆಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ , ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತಂದು ಬಡವರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ಮಂಗಸಂದ್ರ ತಿಮ್ಮಣ್ಣ , ವೆಂಕಟೇಶಪ್ಪ ಹಾಜರಿದ್ದರು