ಸಪ್ತಗಿರಿ ವಿವಿದೋದ್ಧೇಶ ಸೌಹಾರ್ದ ಸಹಕಾರಿ ನಿ. ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ

JANANUDI.COM NETWORK 

ಸಪ್ತಗಿರಿ ವಿವಿದೋದ್ಧೇಶ ಸೌಹಾರ್ದ ಸಹಕಾರಿ ನಿ. ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ


ಕುಂದಾಪುರ, ಆ. 31: ಸಪ್ತಗಿರಿ ವಿವಿದೋದ್ಧೇಶ ಸೌಹಾರ್ದ ಸಹಕಾರಿ ನಿ. ಇದರ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಯ ಚುನಾವಣೆಗೆ 13 ಜನ ಸದಸ್ಯರ ಪೈಕಿ 12 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಸದಸ್ಯರು ಇಲ್ಲದ ಪ್ರಯುಕ್ತ ಒಂದು ಸ್ಥಾನವು ಖಾಲಿಯಾಗಿರುತ್ತದೆ.
ಸಪ್ತಗಿರಿ ವಿವಿದೋದ್ಧೇಶ ಸೌಹಾರ್ದ ಸಹಕಾರಿಯು 2014ರಲ್ಲಿ ನೋಂದಾವಣೆ ಗೊಂಡಿದ್ದು ಕುಂದಾಪುರದ ಜೆಎಲ್‍ಬಿ ರಸ್ತೆಯ ಸದ್ಗುರು ಟವರ್‍ನ ಮೊದಲ ಮಹಡಿಯಲ್ಲಿ ಆಡಳಿತ ಕಛೇರಿಯನ್ನು ಹೊಂದಿರುತ್ತದೆ. ದಿನಾಂಕ 28-07-2019 ಚುನಾವಣಾ ದಿನಾಂಕವಾಗಿದ್ದು 12 ಜನ ಸದಸ್ಯರು ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ ಎಲ್ಲಾ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆಂದು ಚುನಾವಣಾಧಿಕಾರಿಗಳೂ, ಸಹಕಾರ ಅಭಿವೃದ್ಧಿ ಅಧಿಕಾರಿಗಳು (ಕಾರ್ಕಳ) ಆದ ಶ್ರೀ ಅರುಣ್ ಕುಮಾರ್ ಎಸ್.ವಿ. ಘೋಷಣೆ ಮಾಡಿರುತ್ತಾರೆ. ಆಯ್ಕೆಯಾದ ನಿರ್ದೇಶಕ ಮಂಡಳಿಯ ಸದಸ್ಯರುಗಳು : ಸಾಮಾನ್ಯ ಕ್ಷೇತ್ರದಿಂದ ಶ್ರೀ ಚಂದ್ರಶೇಖರ, ಶ್ರೀ ಅಭಿಲಾಷ್, ಶ್ರೀ ಜಗದೀಶ್ ಪೂಜಾರಿ, ಶ್ರೀ ಎಚ್.ವಿ. ಮಧುಸೂದನ, ಶ್ರೀ ಅರುಣ, ಶ್ರೀ ಸುರೇಶ ಅರ್ ಪೂಜಾರಿ, ಶ್ರೀ ಉಮೇಶ್, ಮಹಿಳಾ ಕ್ಷೇತ್ರದಿಂದ ಶ್ರೀಮತಿ ಸುಜಾತ ಎ. ಪೂಜಾರಿ, ಶ್ರೀಮತಿ ಲೋನಾ ಲೂವಿಸ್, ಹಿಂದುಳಿದ ವರ್ಗ ಮೀಸಲು ಕ್ಷೇತ್ರದಿಂದ ಶ್ರೀ ಎಚ್ ಜನಾರ್ಧನ ಮತ್ತು ಶ್ರೀಮತಿ ಶಾರದ ಎಸ್. ಪೂಜಾರಿ ಹಾಗೂ ಪ.ಪಂಗಡ ಮೀಸಲು ಸ್ಥಾನದಿಂದ ಶ್ರೀ ಮಂಜುನಾಥ ನಾಯ್ಕ್.
ಈ ಭಾಗದ ಜನರಿಗೆ ಆರ್ಥಿಕ ನೆರವನ್ನು ನೀಡುತ್ತಿದೆ. ಪ್ರಸಕ್ತ ಸಾಲಿನಲ್ಲಿ ಲಾಭ ಗಳಿಸಿರುವ ಈ ಸಂಸ್ಥೆಯು ಹತ್ತು ಹಲವು ಯೋಜನೆಗಳನ್ನು ಮುಂದಿನ ಸಾಲಿಗೆ ರೂಪಿಸಿದ್ದು ಮುಖ್ಯವಾಗಿ ಸ್ವಸಹಾಯ ಗುಂಪುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಬಗ್ಗೆ ಉತ್ಸುಕವಾಗಿದ್ದು ಹೊಸ ಆಡಳಿತ ಮಂಡಳಿಯು ಜನರ ಪ್ರೋತ್ಸಾಹ, ಸಹಕಾರವನ್ನು ಬಯಸುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ದಿನಾಂಕ 05-08-2019 ರಲ್ಲು ಜರುಗಿದ ಸಹಕಾರಿಯ ಪ್ರಥಮ ಚುನಾಯಿತ ಸದಸ್ಯರ ಆಡಳಿತ ಸಭೆಯಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲೂ ಶ್ರೀ ಚಂದ್ರಶೇಖರರು ಅಧ್ಯಕ್ಷರಾಗಿಯೂ, ಶ್ರೀಮತಿ ಲೋನಾ ಲೂವಿಸ್‍ರವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಚುನಾವಣಾಧಿಕಾರಿಯವರಾದ ಶ್ರೀ ಅರುಣ ಎಸ್. ವಿ. ರವರು ಘೋಷಣೆ ಮಾಡಿರುತ್ತಾರೆ. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀಮತಿ ಸುಮತಿ ಯವರು ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರುಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.