ಸಂತ ಮೇರೀಸ್ ಹಿ. ಪ್ರಾ. ಶಾಲಾ ಗೈಡ್ ದಳದವರಿಂದ ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಸ್ಥಾಪಕ ಸರ್ ಬೇಡನ್ ಪೋವೆಲ್ ಅವರ ಜನ್ಮ ದಿನಾಚರಣೆ

JANANUDI.COM NETWORK

 

ಸಂತ ಮೇರೀಸ್ ಹಿ. ಪ್ರಾ. ಶಾಲಾ ಗೈಡ್ ದಳದವರಿಂದ ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಸ್ಥಾಪಕ ಸರ್ ಬೇಡನ್ ಪೋವೆಲ್ ಅವರ ಜನ್ಮ ದಿನಾಚರಣೆ

 

 

ಕುಂದಾಪುರ, ಫೆ.26:  ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಸ್ಥಾಪಕ ಸರ್ ಬೇಡನ್ ಪೋವೆಲ್ ಅವರ ಜನ್ಮ ದಿನಾಚರಣೆಯನ್ನು ಕುಂದಾಪುರ ಸಂತ ಮೇರೀಸ್ ಹಿ. ಪ್ರಾ. ಶಾಲಾ ಗೈಡ್ ದಳದವರಿಂದ ಆಚರಿಸಲಾಯಿತು.

   ಶಾಲಾ ಮುಖ್ಯೋಪಾಧ್ಯಾಯಿನಿ ಡೋರತಿ ಸುವಾರಿಸ್ ಅವರು ವಿದ್ಯಾರ್ಥಿಗಳಿಗೆ ಗೈಡ್ ನಿಯಮಗಳ ಪಾಲನೆ ಹಾಗೂ ವಿದ್ಯಾರ್ಥಿಗಳು ಬಾಲ್ಯದಿಂದಲೆ ತಮ್ಮಲ್ಲಿ ದೇಶಪ್ರೇಮ ವನ್ನು ಬೆಳೆಸುವಂತೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಬೆಂಕಿ ರಹಿತ ಅಡುಗೆ ತಯಾರಿ ಸ್ಪರ್ಧೆ ನಡೆಯಿತು.ಗೈಡ್ ಶಿಕ್ಷಕಿ ಶಾಂತಿ ರಾಣಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಶಿಕ್ಷಕಿಯರಾದ ಆನ್ನಿ ಕ್ರಾಸ್ತ, ಗೀತಾ ರೆಬೆಲ್ಲೊ,  ಜ್ಯೋತಿ ಲೋರಿನ್, ಸಿಂತಿಯಾ ರೋಡ್ರಿಗಸ್, ಪ್ರೀತಿ ಮತ್ತು ರೇಖಾ ಉಪಸ್ತಿತರಿದ್ದರು.