ಸಂತ ಮೇರಿಸ್ ಪಿ.ಯು ಕಾಲೇಜ್ ವಾರ್ಷಿಕೋತ್ಸವ : ನಿಮ್ಮ ಮಕ್ಕಳಲ್ಲಿ ಎನು ಪ್ರತಿಭೆ ಇದೆ ಅದನ್ನು ಗುರುತಿಸಿ ಪ್ರೊತ್ಸಾಹಿಸಿ – ರೇಖಾ ಬನ್ನಾಡಿ

JANANUDI.COM NETWORK

 

 

ಸಂತ ಮೇರಿಸ್ ಪಿ.ಯು ಕಾಲೇಜ್ ವಾರ್ಷಿಕೋತ್ಸವ : ನಿಮ್ಮ ಮಕ್ಕಳಲ್ಲಿ ಎನು ಪ್ರತಿಭೆ ಇದೆ ಅದನ್ನು ಗುರುತಿಸಿ ಪ್ರೊತ್ಸಾಹಿಸಿ – ರೇಖಾ ಬನ್ನಾಡಿ

 

ಕುಂದಾಪುರ ನ.೩೦: ‘ಹೆತ್ತವರಲ್ಲಿ ಒಂದು ವಿನಂತಿ ನಿಮ್ಮ ಮಕ್ಕಳಲ್ಲಿ ಎನು ಪ್ರತಿಭೆ ಇದೆ ಅದನ್ನು ಗುರುತಿಸಿ, ಅದನ್ನು ಪ್ರೊತ್ಸಾಹಿಸಿ ಅವರನ್ನು ಬೆಳೆಸುವ ಗುಣವನ್ನು ಬೆಳೆಸಿಕೊಳ್ಳಿ. ಮಕ್ಕಳಿಗೆ ಪರಿಶ್ರಮವನ್ನು ಕಲಿಸಿ ನಮಗೆ ದೀಪ ಹಚ್ಚುವರು ಮಾತ್ರವಲ್ಲಾ, ವತ್ತಿ ಹೊಸೆಯುವರು ಬೇಕು, ದೀಪಕ್ಕೆ ಎಣ್ಣೆ ಹಾಕುವರು ಬೇಕು, ದೀಪ ಆರದಂತೆ ಗಾಳಿಗೆ ಅಡ್ಡ ನಿಲ್ಲುವರು ಬೇಕು, ಅದೇ ರೀತಿ ನಮಗೆ ಪ್ರತಿ ಮಗು ವಿದ್ಯಾರ್ಥಿ ಮುಖ್ಯ. ಅಧ್ಯಾಪಕರು ಕೂಡ ಇದನ್ನು ಅರಿತು ತಿಳಿದುಕೊಳ್ಳಬೇಕು’ ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜಿನ ನ.೨೯ ರಂದು ನಡೆದ ವಾರ್ಷಿಕೋತ್ಸವದ ಸಂದರ್ಭ ಮುಖ್ಯ ಅತಿಥಿಯಾಗಿ ಆಗಮಿಸಿದ ಭಂಡಾರ್‌ಕಾರ್ಸ್ ಕಾಲೇಜಿನ ಪ್ರೊಫೆಸರ್ ರೇಖಾ ಬನ್ನಾಡಿ ಹೇಳಿದರು
‘ಅಧ್ಯಾಪಕರೂ ಕೂಡ ತಿಳಿದುಕೊಳ್ಳಬೇಕು ‘ತಾನು ಬೆಳಗದ ದೀಪ, ಇನ್ನೊಂದು ದೀಪವನ್ನು ಹಚ್ಚಲಾರದು, ಅದಕ್ಕಾಗಿ ವಿದ್ಯಾರ್ಥಿಗಳಿಗೆ ಜ್ನಾನ ನೀಡುವ ಅಧ್ಯಾಪಕರ ಮೊದಲ ಗುಣ ನಿರಂತರ ಅಧ್ಯಯನ ಪ್ರವುತ್ತಿ ಹೊಸ ಹೊಸ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಹೇಳಿ ಕೊಟ್ಟರೆ ಅಧ್ಯಯನದದಲ್ಲಿ ದಡ್ಡರೆನ್ನುವರು ಬುದ್ದಿವಂತರಾಗುತ್ತಾರೆ’ ಎಂದು ಅಧ್ಯಾಪಕರಿಗೂ ಕಿವಿ ಅವರು ಕಿವಿ ಮಾತು ಹೇಳಿದರು.
ಇನ್ನೊರ್ವ ಅತಿಥಿ ಕುಂದಾಪುರ ಕನ್ನಡದ ರಾಯಭಾರಿ ಮನು ಹಂದಾಡಿ ಮಾತಾಡಿ ‘ವಿದ್ಯಾರ್ಥಿಗಳಿಗೆ ಅಂಕವೇ ಪ್ರಾಮುಖ್ಯ ಅಲ್ಲಾ, ಮೌಲ್ಯಗಳು ಮುಖ್ಯ, ವಾಟ್ಸಪ್‌ನಲ್ಲಿ ಬರುವಂತಹ ಸುದ್ದಿಗಳಿಗೆ ನೀವು ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲಾ, ನೀವು ಕಾಲೇಜಿನ ಚಟುವಟಿಕೆಗಳಲ್ಲಿ, ಆಟ ಪಾಠಗಳಲ್ಲಿ ಕಾಲೇಜು ಫಿಸುಗಳ ಬಗ್ಗೆ ತಲೆ ಕೆಡಿಸಿಕೊಳ್ಳಿ, ವಿದ್ಯಾ ಸಂಸ್ಥೆಗಳಿಗೆ ಸಾಮಾಜಿಕ ಋಣವಿದೆ, ಅವರು ವಿದ್ಯಾರ್ಥಿಗಳಿಗೆ ವಿಧ್ಯೆ ನೀಡಿ ಋಣವನ್ನು ತೀರಿಸುತ್ತಾರೆ, ನೀವು ವಿದ್ಯಾರ್ಥಿಗಳು ಇಲ್ಲಿ ಚೆನ್ನಾಗಿ ಕಲಿತು, ಶಿಕ್ಷಣದಲ್ಲಿ ಇನ್ನೊಬ್ಬರಿಗೆ ಒಳಿತಾಗಲು ಸಹಕರಿಸಿ, ಆವಾಗ ನೀವು ಕಲಿತ ಶಿಕ್ಷಣ ಸಂಸ್ಥೆಯ ಋಣ ಸಂದಾಯವಾಗುತ್ತೆ’ ಎಂದು ನುಡಿದರು.
ಸ೦ತ ಮೇರಿಸ್ ಸಮೂಹ ವಿಧ್ಯಾ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ವಂ| ಸ್ಟಾ÷್ಯನಿ ತಾವ್ರೊ ಅಧ್ಯಕ್ಷತೆಯನ್ನು ವಹಿಸಿ ‘ಈ ಕಾಲೇಜಿನಲ್ಲಿ ಅಂಕ ಕಡಿಮೆ ಇದ್ದವರಿಗೂ ಸ್ವಾಗತ ನೀಡುತ್ತೇವೆ, ಇಲ್ಲಿ ಎಲ್ಲಾ ಥರಹದ ವಿದ್ಯಾರ್ಥಿಗಳಿಗೆ ಸ್ವಾಗತವಿದೆ. ಇದೊಂದು ವಿದ್ಯಾ ದೇಗುಲವಾಗಿದೆ. ವಿದೇಶದಲ್ಲಿ ಮಕ್ಕಳು ತಾವು ಸಣ್ಣವರಿರುವಾಗಲೇ ಸ್ವತ ದೊಡ್ಡರಾಗುವಾಗ ಎನಾಗಬೇಕೆಂದು ನಿರ್ಧರಿಸಿ ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಾರೆ, ಹಾಗೆ ನಮ್ಮ ಮಕ್ಕಳು ಕೂಡ ಸಣ್ಣವರಿದ್ದಾಗಲೇ ನಾವು ಎನಾಗಬೇಕೆಂದು ತಾವೆ ನಿರ್ಧರಿಸಿ ಛಲ ಬಿಡದೆ ಪ್ರಯತ್ನಿಸಿ ಸಫಲರಾಗಬೇಕು’ ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲಾರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್ ಕಾಲೇಜಿನ ಸಾಧನೆಯ ಬಗ್ಗೆ ವರದಿಯನ್ನು ವಾಚಿಸಿದರು. ಕುಂದಾಪುರ ಚರ್ಚ್ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಗಳ ಎಲ್ಲಾ ಮುಖ್ಯೋಪಾಧ್ಯರು ಉಪಸ್ಥಿತರಿದ್ದು ಬಹುಮಾನಗಳನ್ನು ನೀಡಿದರು. ಸಾಂಸ್ಕçತಿಕ ಕಾರ್ಯಕ್ರಮವಾಗಿ ಹಾಡು, ನ್ರತ್ಯ, ನಾಟಕ ಮತ್ತು ರೂಪಕಗಳು ಪ್ರದರ್ಶನದ ಗೊಂಡವು. ಉಪಪ್ರಾಂಶುಪಾಲೆ ಮಂಜುಳಾ ನಾಯರ್ ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿಗಳು ಪ್ರಾಧ್ಯಪಕರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು, ಕಾಲೇಜು ಸಂಸತ್ತಿನ ನಾಯಕಿ ರೈನಾ ಡಿಆಲ್ಮೇಡಾ ವಂದಿಸಿದರು.