ಸಂತ ಜೋಸೆಫರ ಪ್ರೌಢ ಶಾಲೆ, ಕುಂದಾಪುರ – ಗಾಂಧಿ ಜಯಂತಿ ಆಚರಣೆ

JANANUDI.COM NETWORK

ಸಂತ ಜೋಸೆಫರ ಪ್ರೌಢ ಶಾಲೆ, ಕುಂದಾಪುರ – ಗಾಂಧಿ ಜಯಂತಿ ಆಚರಣೆ

ಸಂತ ಜೋಸೆಫರ ಪ್ರೌಢ ಶಾಲೆ, ಕುಂದಾಪುರ ಹಾಗೂ ರೋಟರಿ ಕ್ಲಬ್, ಕುಂದಾಪುರ ರಿವರ್ ಸೈಡ್ ಇದರ ಜಂಟಿ ಆಶ್ರಯದಲ್ಲಿ ಮಹಾತ್ಮಗಾಂಧಿಜೀಯವರ 150ನೇ ಜನ್ಮ ದಿನಾಚರಣೆಯ ಸ್ಮರಣಾರ್ಥವಾಗಿ ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿಜೇತರಿಗೆ ರೋಟರಿ ಕ್ಲಬ್‍ನ ಅಧ್ಯಕ್ಷರಾದ ರೋ.ರಾಜು ಪೂಜಾರಿ ಬಹುಮಾನ ವಿತರಿಸಿ ಗಾಂಧಿಜೀಯವರ ಮೌಲ್ಯ ಆದರ್ಶಗಳನ್ನುಅಳವಡಿಸಿಕೊಳ್ಳಬೇಕು ಎಂದರು.
ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೊರವರು ಸ್ವಾಗತಿಸಿದರು. ಶಿಕ್ಷಕ ಮೈಕಲ್ ಫುರ್ಟಾಡೊ ಪ್ರಾರ್ಥನೆ ನೆರವೇರಿಸಿದರು. ಪ್ರಭಾರ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಲ್ವಿಯಾ ವಂದಿಸಿದರು. ಶಿಕ್ಷಕ ಅಶೋಕ ದೇವಾಡಿಗ ನಿರೂಪಿಸಿದರು.