ಸಂಗಮ್ ಜಂಕ್ಷನ್‍ನಲ್ಲಿ ಅಪಘಾತ ಸ್ಥಳಿಯ ಹಣ್ಣುಹಂಪಲು ಮಾರುವ ಪ್ರತೀಮಳಿಗೆ (ಕುಂಟಿ) ಕಾರು ಡಿಕ್ಕಿ- ಮಣಿಪಾಲ ಅಸ್ಪತ್ರೆಯಲ್ಲಿ ಜೀವನ್ಮರಣದ ಹಾಸಿಗೆಯಲ್ಲಿ

JANANUDI NETWORK

ಸಂಗಮ್ ಜಂಕ್ಷನ್‍ನಲ್ಲಿ ಅಪಘಾತ ಸ್ಥಳಿಯ ಹಣ್ಣುಹಂಪಲು ಮಾರುವ ಪ್ರತೀಮಳಿಗೆ (ಕುಂಟಿ) ಕಾರು ಡಿಕ್ಕಿ- ಮಣಿಪಾಲ ಅಸ್ಪತ್ರೆಯಲ್ಲಿ ಜೀವನ್ಮರಣದ ಹಾಸಿಗೆಯಲ್ಲಿ


ಕುಂದಾಪುರ, ಜೂ. 30: ಕುಂದಾಪುರ ರಾಷ್ಟೀಯ ಹೆದ್ದಾರಿ ಮತ್ತು ಚಿಕ್ಕನಸಾಲು ರಸ್ತೆಗಳು ಕ್ರಾಸ್ ಆಗುವ ಸಂಗಮ್ ಜಂಕ್ಷನ್‍ನಲ್ಲಿ, ಸ್ಥಳಿಯ ನಿವಾಸಿ ಮಹಾದೇವ ಅವರ ಪತ್ನಿ ಕುಂದಾಪುರ ಮೀನು ಪೇಟೆಯಲ್ಲಿ ಹಣ್ಣು ಹಂಪಲು ಮಾರಾಟ ಮಾಡುವ ಪ್ರತೀಮ (50) ಅಡ್ಡ ಹೆಸರು (ಕುಂಟಿ) ಇವರು ಸಂಜೆ 7.45 ರ ಹೊತ್ತಿಗೆ ತನ್ನ ವ್ಯಾಪರ ಮುಗಿಸಿ ಪಶ್ಚಿಮದ ಚಿಕ್ಕನಸಾಲು ರಸ್ತೆ ದಾಟಿ ಪೂರ್ವದ ಚಿಕ್ಕನಸಾಲು ರಸ್ತೆ ದಾಟಿ ತನ್ನ ಮನೆಗೆ ತೆರಳುವಾಗ ಹೇರಿಕುದ್ರುವಿನ ವಾಹನ ಮಾರುತಿ ಎಕೋ ಬಹಳ ವೆಗವಾಗಿ ಬಂದು ಪ್ರತೀಮಳಿಗೆ ಡಿಕ್ಕಿ ಹೊಡೆದಿದೆ, ಕಾರು ಡಿಕ್ಕಿ ಹೊಡೆದು ಪ್ರತೀಮಳನ್ನು ಸುಮಾರು 30 ಅಡಿ ದೂರಕ್ಕೆ ಎಳೆದೊಯ್ದಿದೆ ಎಂದು ಪ್ರತ್ಯಕ್ಷದರ್ಶಿಗಳಿಂದ ತಿಳಿದು ಬಂದಿದೆ.
ತೀವ್ರವಾಗಿ ಘಾಯಳಾದ ಪ್ರತೀಮಳನ್ನು ಕಾರು ಮಾಲೀಕರೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ, ಪ್ರತೀಮಳ ತಲೆಗೆ ಎಟು ಬಿದ್ದು ಕಿವಿ ಮೂಗಿನಲ್ಲಿ ರಕ್ತಸ್ರಾವವಾಗಿ ತೀವ್ರ ನಿಗಾ ಘಟಕದಲ್ಲಿ ಚಿಕ್ಸಿತೆ ಪಡೆಯುತಿದ್ದು, ಜೀವನ ಮರಣದ ಹೋರಾಟದಲ್ಲಿದ್ದಾಳೆ. ಕಡು ಬಡತನದಲ್ಲಿ ದಿನ ದೂಡುತಲಿದ್ದ ಪ್ರತೀಮಳು ಈಗ ಅಪಘಾತಕ್ಕಿಡಾಗಿ ಅವಳ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಸ್ವಲ್ಪ ದಿವಸದ ಮುಂಚೆ ಸಂಗಮ್ ಜಂಕ್ಷನಲ್ಲಿ ಅಪಘಾತ ಆಗಿ ಪ್ರಾಣ ಹಾನಿಯಾಗುವುದರಲ್ಲಿ ಅನುಮಾನವಿಲ್ಲವೆಂದು ಜನನುಡಿ ಡಾಟ್ ಕಾಮ್ ಲೇಖನ ಬರೆದಿತ್ತು. ಸಂಗಮ್ ಜಂಕ್ಷನ್ ಹೆದ್ದಾರಿ ದಾಟಿ ಚಿಕ್ಕನಸಾಲು ರಸ್ತೆಗೆ ಹೋಗುವುದು ಅಪಾಯ ಎಂದು ಬರೆದಿತ್ತು, ರಾಷ್ಟ್ರೀಯ ಹೆದ್ದಾರಿ ಆಧುನಿಕವಾಗಿ ವಿಸ್ತರಿಸುವ ಭರದಲ್ಲಿ ಯಾವುದೊಂದು ಸಮರ್ಪಕ ಯೋಜನೆಗಳನ್ನು ತಯಾರಿ ಮಾಡದೆ, ಸಂಗಮ್ ಜಂಕ್ಷನ್‍ನಲ್ಲಿ ಅಸಮರ್ಪಕ ಕ್ರಾಸಿಂಗ್ ಕೊಟ್ಟು ಅಪಾಯಕ್ಕೆ ಎಡೆ ಮಾಡಿ ಕೊಟ್ಟಿದೆ. ಇದೇ ರೀತಿ ಇಲ್ಲಿ ಕ್ರಾಸಿಂಗ್ ಇದ್ದಲ್ಲಿ ಇಂತಹ ಅಪಘಾತಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ನೆಡೆಯುವುದು ಖಂಡಿತ. ಹೆದ್ದಾರಿ ಇಲಾಖೆ ಎಚ್ಚೆತ್ತುಕೊಳ್ಳ ಬೇಕು. ಹಗಲಿಗೆನೇ ಇಲ್ಲಿ ಎಲ್ಲಿ ಕ್ರಾಸ್ ಮಾಡಿದರೆ ಎಲ್ಲಿ ಹೋಗುತ್ತಿದ್ದೆವೆ ಎಂದು ಅರಿಯಲು ಕಷ್ಟವಾಗುತ್ತದೆ, ಅದರಲ್ಲಿ ಸಂಜೆ ಹೊತ್ತು ಕತ್ತಲಲ್ಲಿ ಇಲ್ಲಿ ಕ್ರಾಸ್ ಮಾಡುವುದು, ಸಾವಿಗಾಗಿ ಹೆಜ್ಜೆ ಇಟ್ಟಂತ್ತೆ ಅನ್ನುವುದರಲ್ಲಿ ಅನುಮಾನವಿಲ್ಲಾ, ಆದಸ್ಟು ಬೇಗನೆ ಈ ಜಂಕ್ಷನಲ್ಲಿ ವ್ರತ್ತ ಸ್ಥಾಪಿಸಿ ಸಮರ್ಪಕವಾದ ಕ್ರಾಸಿಂಗ್ ಕೊಡಿಸಿ. ಹಾಗೇನೆ ಆದಸ್ಟು ಬೇಗನೆ ಸಂಜೆ ರಾತ್ರಿಯಲ್ಲಿ ಎಲ್ಲರಿಗೂ ಸ್ಪಷ್ಟವಾಗಿ ಕಾಣುವಂತೆ ಪ್ರಕಾಶ ಭರಿತ ದೀಪವನ್ನು ಆಳವಡಿಸ ಬೇಕು