ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀ ಕ್ಷೇತ್ರ ಧವರ್iಸ್ಥಳ ಗ್ರಾಮಾಭಿವೃದ್ಧಿಯೋಜನೆಯ“ ಜನಮಂಗಲ” ಕಾರ್ಯಕ್ರಮದಡಿಯಲ್ಲಿ
ವಿಶೇಷ ಚೇತನರಿಗ ವೀಲ್ಚೇರ್ ವಿತರಣೆ- ಚಂದ್ರಶೇಖರ್ಜೆ, ಜಿಲ್ಲಾ ನಿರ್ದೇಶಕರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ, ಶ್ರೀನಿವಾಸಪುರತಾಲೂಕಿನರಾಯಲ್ಪಾಡುವಲಯದಲ್ಲಿ ವಿಶೇಷ ಚೇತನರಿಗೆ ವೀಲ್ಚೇರ್, ವಾಕಿಂಗ್ ಸ್ಟಿಕ್ ಮತ್ತು ವಾಟರ್ ಬೆಡ್ ವಿತರಣಾಕಾರ್ಯಕ್ರಮವನ್ನುಉದ್ಗಾಟನೆ ಮಾಡಿದಜಿಲ್ಲಾ ನಿರ್ದೇಶಕರಾದಚಂದ್ರಶೇಖರ್ಜೆರವರು ಸಲಕರಣಿಗಳನ್ನು ವಿತರಿಸಿ ಮಾತನಾಡುತ್ತಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯುಎಲ್ಲಾ ರಂಗಗಳಲ್ಲಿಯೂ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಈ ವರ್ಷ ಬಾಹುಬಲಿಯ ಮಹಾಮಸ್ತಾಭಿಷೇಕದ ಸವಿನೆನಪಿಗಾಗಿ ಆರಂಭಿಸಿದ ಕಾರ್ಯಕ್ರಮವೇ “ಜನಮಂಗಲ” ಎಂಬ ಕಾರ್ಯಕ್ರಮವನ್ನು ಹೊಸದಾಗಿ ರೂಪಿಸಿದೆ. ವಿಶೇಷ ಚೇತನರುದುರ್ಬಲರಲ್ಲ, ದೈಹಿಕಅಂಗನ್ಯೂನತೆಯಿಂದಅವರ ಮನೋಸ್ಥೈರ್ಯಕಡಿಮೆಯಾಗಬಾರದು, ಸಮಾಜದಲ್ಲಿಎಲ್ಲರಂತೆ ಸುಖ-ಸಂತೋಷವನ್ನುಅನುಭವಿಸಬೇಕು ಹಾಗೂ ಅವಕಾಶಕ್ಕೆ ಹಂಬಲಿಸದೇತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಬೇಕು ಎಂಬ ಉದ್ದೇಶದಿಂದ ಪೂಜ್ಯ ವೀರೇಂದ್ರ ಹೆಗ್ಗಡೆಯವರುಉಚಿತವಾಗಿ ಈ ಸಲಕರಣಿಗಳನ್ನು ವಿತರಿಸುತ್ತಿದ್ದಾರೆ. ಇದನ್ನು ಸರಿಯಾದರೀತಿಯಲ್ಲಿ ಬಳಕೆ ಮಾಡಬೇಕುಇದು ಕೇವಲ ಆರಂಭ ಮಾತ್ರ, ಸರ್ಕಾರದಿಂದ ಈ ಸಲಕರಣಿಗಳು ಲಭಿಸದೇಇರುವಎಲ್ಲಾ ವಿಶೇಷ ಚೇತನರಿಗೆಅವರಅವಶ್ಯಕತೆಅನುಗುಣವಾಗಿ ವಿತರಿಸುವುದು ಹೆಗ್ಗಡೆಯವರಗುರಿಯಾಗಿದೆಎಲ್ಲರೂಇದರ ಪ್ರಯೋಜನವನ್ನು ಪಡೆಯಿರಿಎಂದು ತಿಳಿಸಿದರು.
ನಂತರ ಮಾತನಾಡಿದ ಪತ್ರಕರ್ತರಾದಂತಹ ವಿಶ್ವನಾಥಶಾಸ್ತ್ರಿ ರವರು ಮಾತನಾಡುತ್ತಾ, ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯುಎಲ್ಲಾರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ವಾರದ ಸಭೆಗೆ, ಒಕ್ಕೂಟ ಸಭೆಗೆ& ಕಾರ್ಯಕ್ರಮಗಳಿಗೆ ಹಾಜರಾಗುವ ಸದಸ್ಯರಿಗೆ ಈ ವಿಷಯ ತಿಳಿದಿದೆ. ಇನ್ನು ಕೆಲವರು ನಿರಾಶಕ್ತಿಯಿಂದಇರುವವರಿಗೆಇದರ ಬಗ್ಗೆ ಯಾವುದೇಜ್ಞಾನಇಲ್ಲ. ವೀರೇಂದ್ರ ಹೆಗ್ಗಡೆಯವರುಒಂದು ಶಕ್ತಿಯಾಗಿದ್ದು, ನಾವೆಲ್ಲರೂಅವರಿಗೆ ಕೈ ಜೋಡಿಸಬೇಕು&ಅವರ ಚಿಂತನೆಗಳನ್ನು ಗೌರವಿಸಬೇಕು ಹಾಗೂ ವಿಶೇಷ ಚೇತನರಿಗೆ ವಾಕಿಂಗ್ ಸ್ಟಿಕ್ ಮತ್ತು ವಾಟರ್ ಬೆಡ್ಗಳಂತಹ ಸಲಕರಣಿಗಳನ್ನು ನೀಡುತ್ತಿರುವುದು ಬಹಳ ಶ್ಲಾಘನೀಯಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿತಾಲೂಕಿನಯೋಜನಾಧಿಕಾರಿಯಾದ ವಿಶ್ವನಾಥ ಪೂಜಾರಿ, ವಲಯದ ಮೇಲ್ವಿಚಾರಕರಾದಯೋಗೀಶ್, ಗ್ರಾಮಪಂಚಾಯಿತಿ ಸದಸ್ಯರಾದ ಸಿಮೆಂಟ್ ನಾರಾಯಣಸ್ವಾಮಿ, ಒಕ್ಕೂಟಅಧ್ಯಕ್ಷರಾದ ಪದ್ಮಜ&ದಾಕ್ಷಾಯಣಿ, ವಲಯದಎಲ್ಲಾ ಸೇವಾಪ್ರತಿನಿಧಿಗಳು, ವಿಶೇಷ ಚೇತನರು, ಸಂಘದ ಸದಸ್ಯರು ಭಾಗವಹಸಿದರು.