ಶ್ರೀನಿವಾಸಪುರ: ಸ್ಥಳೀಯ ಪುರಸಭೆಯ 23 ವಾರ್ಡುಗಳಿಗೆ ಒಟ್ಟು 108 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ವರದಿ: ಶಬ್ಬೀರ್ ಅಹ್ಮದ್

ಶ್ರೀನಿವಾಸಪುರ: ಸ್ಥಳೀಯ ಪುರಸಭೆಯ 23 ವಾರ್ಡುಗಳಿಗೆ ಒಟ್ಟು 108 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ


ಶ್ರೀನಿವಾಸಪುರ: ಸ್ಥಳೀಯ ಪುರಸಭೆಯ 23 ವಾರ್ಡುಗಳಿಗೆ ಒಟ್ಟು 108 ಮಂದಿ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿರುತ್ತಾರೆ. ನಾಮಪತ್ರ ಸಲ್ಲಿಸಲುಕೊನೆಯದಿನವಾಗಿದ್ದರಿಂದ 89 ಮಂದಿ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷ, ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆಯವರಿವಿಗೂ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಸರದಿ ಸಾಲಿನಲ್ಲಿ ನಿಂತು ನಿಯಮಾನುಸಾರ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ನಾಮಪತ್ರವನ್ನು ಪಡೆಯಲು ಚುನಾವಣಾಧಿಕಾರಿಗಳು 2 ಪ್ರತ್ಯೇಕಕೌಂಟರ್‍ಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. 1-12 ವಾರ್ಡುಗಳಲ್ಲಿ ವಾರ್ಡುಗಳ ಅಭ್ಯರ್ಥಿಗಳಿಂದ ಬಂದ ನಾಮಪತ್ರಗಳನ್ನು ಆರ್.ಒ. ಚಂದ್ರಶೇಕರ್ ಮತ್ತುಎ.ಆರ್.ಒ. ರೋಸಲಿನ್ ಸತ್ಯ ಹಾಗೂ 13-23 ವಾರ್ಡುಗಳ ಅಭ್ಯರ್ಥಿಗಳಿಂದ ಬಂದ ನಾಮಪತ್ರಗಳನ್ನು ಆರ್.ಒ. ಶ್ರೀನಿವಾಸಮೂರ್ತಿ ಮತ್ತುಎ.ಆರ್.ಒ. ಬಿ.ಆರ್.ಸಿ. ಅಮರನಾಥ್ ಮತ್ತು ಸಿಬ್ಬಂದಿ ಪಡೆದಿರುತ್ತಾರೆಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.