ಶ್ರೀನಿವಾಸಪುರ ಸೆಂಟ್ರಲ್, ಎಲ್.ಐ.ಸಿ. ಉಪಗ್ರಹ ಶಾಖೆ ಮತ್ತು ಜಿ.ಇ.ಎಫ್. ನೇತ್ರದೀಪ ಕಣ್ಣಿನಆಸ್ಪತ್ರೆ, ಕೋಲಾರ ಇವರ ಸಹಯೋಗದೊಂದಿಗೆಉಚಿತಕಣ್ಣಿನತಪಾಸಣಾ ಶಿಭಿರ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ



ಶ್ರೀನಿವಾಸಪುರ ಸೆಂಟ್ರಲ್, ಎಲ್.ಐ.ಸಿ. ಉಪಗ್ರಹ ಶಾಖೆ ಮತ್ತು ಜಿ.ಇ.ಎಫ್. ನೇತ್ರದೀಪ ಕಣ್ಣಿನಆಸ್ಪತ್ರೆ, ಕೋಲಾರ ಇವರ ಸಹಯೋಗದೊಂದಿಗೆಉಚಿತಕಣ್ಣಿನತಪಾಸಣಾ ಶಿಭಿರ



ಶ್ರೀನಿವಾಸಪುರ: ಮಾನವನಿಗೆಕಣ್ಣುದೃಷ್ಟಿ ಬಹಳ ಮುಖ್ಯವಾಗಿದ್ದು, ಸುಮಾರು 45-50 ವರ್ಷಗಳಾಗುವಷ್ಟರಲ್ಲಿ ಕಣ್ಣನ್ನು ಆಗಾಗ ತಪಾಸಣೆಗೊಳಿಸುವುದು ಬಹಳ ಮುಖ್ಯವಾಗಿದ್ದು, ಇಂತಹಉಚಿತಕಣ್ಣಿನತಪಾಸಣಾ ಶಿಭಿರದ ಪ್ರಯೋಜನವನ್ನುತಾಲ್ಲೂಕಿನಜನತೆ ಉಪಯೋಗಿಸಿಕೊಳ್ಳಬೇಕೆಂದು ರೋಟರಿಶ್ರೀನಿವಾಸಪುರ ಸೆಂಟ್ರಲ್ ನ ಅಧ್ಯಕ್ಷರಾದಆರ್.ವಿ. ಕುಲಕರ್ಣಿ ತಿಳಿಸಿದರು. 
ಪಟ್ಟಣದಎಂ.ಜಿ. ರಸ್ತೆಯಲ್ಲಿರುವ ಎಲ್.ಐ.ಸಿ. ಉಪಗ್ರಹ ಶಾಖೆಯಲ್ಲಿ, ರೋಟರಿ ಶ್ರೀನಿವಾಸಪುರ ಸೆಂಟ್ರಲ್, ಎಲ್.ಐ.ಸಿ. ಉಪಗ್ರಹ ಶಾಖೆ ಮತ್ತು ಜಿ.ಇ.ಎಫ್. ನೇತ್ರದೀಪ ಕಣ್ಣಿನಆಸ್ಪತ್ರೆ, ಕೋಲಾರಇವರ ಸಹಯೋಗದೊಂದಿಗೆಉಚಿತಕಣ್ಣಿನತಪಾಸಣಾ ಶಿಭಿರವನ್ನು ಏರ್ಪಡಿಸಿ ಮಾತನಾಡಿದಕುಲಕರ್ಣಿ, ಕಣ್ಣುದೃಷ್ಟಿ ಬಹಳ ಮುಖ್ಯವಾಗಿದ್ದು, ನಾವೆಲ್ಲರೂ ಹಸಿರು ತರಕಾರಿಯನ್ನುಉಪಯೋಗಿಸುವುದುಕಡಿಮೆಯಾಗಿರುವುದರಿಂದ 45-50 ವರ್ಷಕ್ಕೆ ನಮಗೆಲ್ಲಾಕಣ್ಣಿನದೃಷ್ಟಿ ಸಮಸ್ಯೆಯಾಗುತ್ತಿದ್ದು, ಆಗಾಗ ಕಣ್ಣಿನತಪಾಸಣೆಯನ್ನು ಮಾಡಿಸಿಕೊಳ್ಳುವುದು ಒಳ್ಳೆಯದು. ತಾಲ್ಲೂಕಿನ ಸಾರ್ವಜನಿಕರುಇಂತಹಉಚಿತ ಶಿಭಿರದಲ್ಲಿ ಕಣ್ಣಿನತಪಾಸಣೆಯನ್ನು ಮಾಡಿಸಿಕೊಳ್ಳಬೇಕೆಂದು ತಿಳಿಸಿದರು. 
ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಕಾರ್ಯದರ್ಶಿ ಎನ್.ಕೃಷ್ಣಮೂರ್ತಿ ಮಾತನಾಡಿ, ಭಾರತೀಯಜೀವ ವಿಮಾ ನಿಗಮದ ಹುಟ್ಟು ಹಬ್ಬದ ಪ್ರಯುಕ್ತಎಲ್.ಐ.ಸಿ., ಶ್ರೀನಿವಾಸಪುರ ಶಾಖೆ, ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಮತ್ತುಜಿ.ಇ.ಎಫ್.ನೇತ್ರದೀಪಕಣ್ಣಿನಆಸ್ಪತ್ರೆ, ಕೋಲಾರಇವರ ಸಂಯುಕ್ತಆಶ್ರಯದಲ್ಲಿಉಚಿತಕಣ್ಣಿನತಪಾಸಣಾ ಶಿಭಿರವನ್ನು ಹಮ್ಮಿಕೊಂಡಿದ್ದು, ಈ ಶಿಭಿರದಲ್ಲಿ ಬೆಳಿಗಿನಿಂದ ಸುಮಾರು85ಪುರಶ ಮತ್ತು ಮಹಿಳೆಯರಿಗೆ ಕಣ್ಣಿನತಪಾಸಣೆಯನ್ನು ಮಾಡಿದ್ದು, ಇವರಲ್ಲಿ ಸುಮಾರು 50-55 ಜನರಿಗೆಕಣ್ಣಿನಲ್ಲಿ ಪೆÇರೆಇನ್ನಿತರೆ ತೊಂದರೆಗಳಿದ್ದು, ಇವರಿಗೆ ಶಸ್ತ್ರಚಿಕಿತ್ಸೆಅವಶ್ಯಕತೆಯಿದ್ದು, ಶಸ್ತ್ರಚಿಕಿತ್ಸೆಗಾಗಿಕೋಲಾರದಜಿ.ಇ.ಎಫ್.ನೇತ್ರದೀಪಕಣ್ಣಿನಆಸ್ಪತ್ರೆಯಲ್ಲಿಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು. ಇವರಿಗೆ ಶಸ್ತ್ರಚಿಕಿತ್ಸೆಯ ನಂತರಒಂದು ತಿಂಗಳ ಕಾಲ ಚಿಕಿತ್ಸೆಯೊಂದಿಗೆಉಚಿತವಾಗಿಔಷದಿಯನ್ನು ನೀಡಲಾಗುವುದುಎಂದರು. 
ಶಾಖಾ ವ್ಯವಸ್ಥಾಪಕರಾದ ಸತೀಶ್‍ಮಾತನಾಡಿ, ಭಾರತೀಯಜೀವ ವಿಮಾ ನಿಗಮದ ಹುಟ್ಟುಹಬ್ಬದ ಪ್ರಯುಕ್ತ ಶಾಖೆಯಲ್ಲಿ ಪ್ರತಿ ವರ್ಷವೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿಉಚಿತ ನೇತ್ರತಪಾಸಣಾ ಶಿಭಿರವನ್ನು ಹಮ್ಮಿಕೊಂಡಿದ್ದು, ಈ ಶಿಭಿರದಲ್ಲಿ ಸುಮಾರು85 ಮಂದಿ ಕಣ್ಣಿನತಪಾಸಣೆಯನ್ನು ಮಾಡಿಸಿಕೊಂಡಿದ್ದು, ಹೆಚ್ಚಿನಚಿಕಿತ್ಸೆಗಾಗಿಕೋಲಾರದ ಜಿ.ಇ.ಎಫ್.ನೇತ್ರದೀಪಕಣ್ಣಿನಆಸ್ಪತ್ರೆಯಲ್ಲಿಉಚಿತಚಿಕಿತ್ಸೆಯನ್ನು ಮಾಡಿಸಿಕೊಂಡು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಜಿ.ಇ.ಎಫ್.ನೇತ್ರದೀಪಕಣ್ಣಿನಆಸ್ಪತ್ರೆಯಡಾ: ಮಾಲಾ ಮತ್ತುತಂಡದವರು ನೇತ್ರತಪಾಸಣೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿರೋಟರಿ ಶ್ರೀನಿವಾಸಪುರ ಸೆಂಟ್ರಲ್ ನ ಕಮ್ಯೂನಿಟಿ ಸರ್ವೀಸ್ ನಿರ್ದೇಶಕರಾದಎಸ್. ಶಿವಮೂರ್ತಿ , ಶಾಖೆಯಅಧಿಕಾರಿಯಾದ ನಟೇಶ್ ಮತ್ತುಸಿಬ್ಬಂದಿ ಇನ್ನಿತರರು ಹಾಜರಿದ್ದರು.