ಶ್ರೀನಿವಾಸಪುರ: ಸಾರ್ವಜನಿಕರು ಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಕೈಲಾದ ನೆರವು ನೀಡಬೇಕು : ಜಿಲ್ಲಾ ಪಂಚಾಯಿತಿ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವಿ.ಶ್ರೀನಿವಾಸ್‌ 

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಸಾರ್ವಜನಿಕರು ಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಕೈಲಾದ ನೆರವು ನೀಡಬೇಕು : ಜಿಲ್ಲಾ ಪಂಚಾಯಿತಿ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವಿ.ಶ್ರೀನಿವಾಸ್‌ 
ಶ್ರೀನಿವಾಸಪುರ: ಸಾರ್ವಜನಿಕರು ಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಕೈಲಾದ ನೆರವು ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವಿ.ಶ್ರೀನಿವಾಸ್‌ ಹೇಳಿದರು
  ಪಟ್ಟಣದಲ್ಲಿ  ಬಡವರಿಗೆ ಆಹಾರ ಪದಾರ್ಥ ಹಾಗೂ ಮಾಸ್ಕ್‌ ವಿತರಿಸಿ ಮಾತನಾಡಿ, ಕೊರೊನಾ ವೈರಾಣು ಮಾರಣಾಂತಿಕವಾಗಿದ್ದು, ಅದನ್ನು ತಡೆಯಲು ಸಾಂಘಿಕ ಪ್ರಯತ್ನ ಮಾಡಬೇಕು. ತಪ್ಪದೆ ಮಾಸ್ಕ್ ಧರಿಸಬೇಕು ಮತ್ತು ಮನೆಯಲ್ಲಿಯೇ ಉಳಿಯಬೇಕು ಎಂದು ಹೇಳಿದರು.
  ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ ಮಾತನಾಡಿ, ಆರೋಗ್ಯ ಇಲಾಖೆಯಿಂದ ಕೊರೊನಾ ತಡೆಗೆ ಪೂರಕವಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಸ್ವಚ್ಛತೆ ಪಾಲನೆಗೆ ಪೂರ್ಣ ಗಮನ ಹರಿಸಲಾಗಿದೆ ಎಂದು ಹೇಳಿದರು.
  ಆಸ್ಪತ್ರೆ ಆಡಳಿತಾಧಿಕಾರಿ ಡಾ. ಜಿ.ಎಸ್‌.ಶ್ರೀನಿವಾಸ್‌ ಮಾತನಾಡಿ, ಈವರೆಗೆ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಕೊರೊನಾ ಜಾಗೃತಿ ಕುರಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
  ಈ ಸಂದರ್ಭದಲ್ಲಿ 150 ಕುಟುಂಬಗಳಿಗೆ ಆಹಾರ ಪದಾರ್ಥ ಹಾಗೂ ಆರೋಗ್ಯ ಇಲಾಖೆ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರಿಗೆ 5 ಸಾವಿರ  ಮುಖ ಗವಸು ವತರಿಸಲಾಯಿತು.
  ಪುರಸಭೆ ಸದಸ್ಯರಾದ ಅಪ್ಪೂರು ರಾಜು, ಜಗದೀಶ್‌, ನಾಗರಾಜ್‌, ಮಹಮದ್ ಅಲಿ, ಶ್ರೀನಿವಾಸ್‌ ಇದ್ದರು.