ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಸಾರ್ವಜನಿಕರು ಲಾಕ್ ಡೌನ್ ಅವಧಿಯಲ್ಲಿ ಕಡ್ಡಾಯವಾಗಿ ಮನೆಗಳಲ್ಲಿ ಉಳಿಯಬೇಕು: ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್.
ಶ್ರೀನಿವಾಸಪುರ: ಸಾರ್ವಜನಿಕರು ಲಾಕ್ ಡೌನ್ ಅವಧಿಯಲ್ಲಿ ಕಡ್ಡಾಯವಾಗಿ ಮನೆಗಳಲ್ಲಿ ಉಳಿಯಬೇಕು ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಪುರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಮುಖ ಗವಸು ವಿತರಿಸಿ ಮಾತನಾಡಿ, ಪ್ರಪಂಚದಲ್ಲಿ ಸುಮಾರು 10 ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಿದೆ. 75 ಸಾವಿರ ಮಂದಿ ಈ ಮಾರಿಗೆ ಬಲಿಯಾಗಿದ್ದಾರೆ. ಆದರೆ ಇದಕ್ಕೆ ಯಾವುದೇ ಔಷಧ ಇಲ್ಲ. ನೈಸರ್ಗಿಕ ವಿಧಾನದಲ್ಲಿ ಮಾತ್ರ ತಡೆಯಲು ತಡೆಗಟ್ಟಬೇಕು ಎಂದು ಹೇಳಿದರು.
ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ನಿಯಮಿತವಾಗಿ ಸಾಬಾನು ಬಳಸಿ ಕೈತೊಳೆಯಬೇಕು. ಖರೀದಿ ಮಾಡುವ ಮಾಸ್ಕ್‌ಗಿಂತ ಬಟ್ಟೆಯಲ್ಲಿ ಹೊಲೆದ ಮಾಸ್ಕ್ ಹೆಚ್ಚು ಪರಿಣಾಮಕಾರಿ. ಪ್ರತಿಯೊಬ್ಬರೂ ಮೂರು ಮಾಸ್ಕ್‌ಗಳನ್ನು ಇಟ್ಟುಕೊಂಡು ಒಗೆದು ಮರುಬಳಕೆ ಮಾಡಬಹುದಾಗಿದೆ. ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಈವರೆಗೆ 1 ಲಕ್ಷ ಮಾಸ್ಕ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಜಯರಾಮರೆಡ್ಡಿ, ಎಂ.ಲಕ್ಷ್ಮಣಗೌಡ, ಎಲ್.ಅಶೋಕರೆಡ್ಡಿ, ವೆಂಕಟೇಗೌಡ, ಶಿವಶಂಕರ್, ರೆಡ್ಡಪ್ಪ, ನಾಗರಾಜ್, ಸುರೇಶ್ ಕುಮಾರ್, ರಾಮಾಂಜಿ, ಗಿರೀಶ್ ಇದ್ದರು.