ಶ್ರೀನಿವಾಸಪುರ ವಿದೇಶ ಹಾಲನ್ನು ಆಮದು ಮಾಡಿಕೊಳ್ಳುವ ಕೇಂದ್ರದ ಸರ್ಕಾರದ ವಿರುದ್ದ ಸೀಮೆ ಹಸುವಿನೊಂದಿಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ವಿನೂತನ ಪ್ರತಿಭಟನೆ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರ ವಿದೇಶ ಹಾಲನ್ನು ಆಮದು ಮಾಡಿಕೊಳ್ಳುವ ಕೇಂದ್ರದ ಸರ್ಕಾರದ ವಿರುದ್ದ ಸೀಮೆ ಹಸುವಿನೊಂದಿಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ವಿನೂತನ ಪ್ರತಿಭಟನೆ

ಶ್ರೀನಿವಾಸಪುರ ವಿದೇಶ ಹಾಲನ್ನು ಆಮದು ಮಾಡಿಕೊಳ್ಳುವ ಕೇಂದ್ರದ ಸರ್ಕಾರದ ವಿರುದ್ದ ವಿನೂತನವಾಗಿ ಸೀಮೆ ಹಸುವಿನೊಂದಿಗೆ ತಾಲ್ಲೂಕು ಕಛೇರಿ ಮುಂದೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ತಾಲ್ಲೂಕು ಕಛೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುಬ್ರಮಣಿ ಮಾತನಾಡಿ ಕೋಲಾರ ಚಿಕ್ಕಬಳ್ಳಾಪುರ ಹೈನು ಉದ್ಯಮಕ್ಕೆ ಹೆಸರನ್ನು ಪಡೆದಿದ್ದು, ದೇಶದಲ್ಲೆ ಗುಜರಾತ್ ಮೊದಲನೇ ಸ್ಥಾನ, ಕರ್ನಾಟ ಎರಡನೇ ಸ್ಥಾನ, ಅದರಲ್ಲಿ ವಿಷೇಶವಾಗಿ ನಮ್ಮ ಕೋಲಾರ ಜಿಲ್ಲೆ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನಗಳಿಸಿದೆ. ಇಂತಹ ಸಂದರ್ಭದಲ್ಲಿ ಹೈನುಗಾರಿಕೆಯನ್ನು ನಂಬಿಕೊಂಡಿರುವ ರೈತರಿಗೆ ಹೆಚ್ಚಿನ ನೆರವು ಕಲ್ಪಿಸಿಕೊಡಬೇಕಾದ ಕೇಂದ್ರ ಸರ್ಕಾರ ವಿದೇಶದಿಂದ ಹಾಲು ಆಮದು ಮಾಡಿಕೊಳ್ಳಲು ಹೊರಟಿದ್ದು ಇದರಿಂದ ನಮ್ಮ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿವಂತಾಗಿದೆ ಎಂದರು.
ಈ ಕೋಲಾರ ಜಿಲ್ಲೆಯೂ ಮಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿದಿರುವ ಸಂದರ್ಭದಲ್ಲಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಲ್ಲಿ ರೈತರು ಅಪಾರ ಶ್ರಮ ಜೀವಿಗಳು ಕೇಂದ್ರ ಸರ್ಕಾರ ವಿದೇಶದಿಂದ ಹಾಲು ಆಮದು ಮಾಡಿಕೊಳ್ಳುವ ನಿರ್ದಾರವನ್ನು ಶೀಘ್ರವೇ ಕೈ ಬಿಡಬೇಕು. ಕೈ ಬಿಡದ ಪಕ್ಷದಲ್ಲಿ ನಮ್ಮ ಸಂಘಟನೆಯು ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದರು.
ಇದೇ ಸಂದರ್ಭದಲ್ಲಿ ಪ್ರಭಾರ ತಹಶೀಲ್ದಾರ್ ಸುಜಾತ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಇದೇ ಸಮಯದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ತಾಲ್ಲೂಕು ಅಧ್ಯಕ್ಷ ಕೆ.ವೆಂಕಟೇಶ್ ಬಾಬು, ಪದಾದಿಕಾರಿಗಳಾದ ಮಹೇಶ್, ವಿನೋದ್, ಶ್ರೀನಾಥ್, ವೆಂಕಟೇಶ್ ಬಾಬು, ವಿಜಿತ್, ನಾಗೇಂದ್ರಬಾಬು, ಸೋನಿ, ರಾಮಣ್ಣ, ನವೀನ್, ಅನಿಲ್, ಗಂಗಾಧರ್, ಗಿರೀಶ್, ಇನ್ನಿತರರು ಹಾಜರಿದ್ದರು.