ಶ್ರೀನಿವಾಸಪುರ:  ಮಾ.31ರೊಳಗೆ ಸಾಲ ಮರುಪಾವತಿ ಮಾಡಿದಲ್ಲಿ ಬಡ್ಡಿ ಮತ್ತು ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌ ಹೇಳಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ:  ಮಾ.31ರೊಳಗೆ ಸಾಲ ಮರುಪಾವತಿ ಮಾಡಿದಲ್ಲಿ ಬಡ್ಡಿ ಮತ್ತು ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌ ಹೇಳಿದರು.
  ಪಟ್ಟಣದ ಪಿಎಲ್‌ಡಿ ಬ್ಯಾಂಕ್‌ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ನಿರ್ದೇಶಕರ ಸಭೆಯ ಅಧ್ಯಕ್ಷತೆ ವಹಿಸಿ ಮಾನಾಡಿ, ಬ್ಯಾಂಕ್‌ ರೈತರಿಗೆ ರೂ. 280.68ಲಕ್ಷ ಸಾಲ ನೀಡಿದೆ. ಅದಕ್ಕೆ ರೂ. 308.62 ಲಕ್ಷ ಬಡ್ಡಿ ಬರಬೇಕಾಗಿದೆ. ಅಸಲು ಮತ್ತು ಬಡ್ಡಿ ಸೇರಿ ರೂ. 589.30 ಸಾಲ ಮರುಪಾವತಿ ಆಗಬೇಕಾಗಿದೆ. ಇದರಿಂದ ಬ್ಯಾಂಕ್ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ಹೇಳಿದರು.
    ಸಾಲ ಮರುಪಾವತಿ ಮಾಡುವ ರೈತರಿಗೆ ಕುರಿ ಸಾಕಾಣಿಕೆ ಮಾಡಲು, ಟ್ರ್ಯಾಕ್ಟರ್‌ ಖರೀದಿಸಲು ಹಾಗೂ ಹುಳು ಮನೆ ನಿರ್ಮಿಸಲು ಮರುಸಾಲ ನೀಡಲಾಗುವುದು. ಸಾಲ ತೀರಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಬ್ಯಾಂಕ್‌ ಉಳಿಯಲು ಹಾಗೂ ಮರುಸಾಲ ಪಡೆಯಲು, ಸಾಲ ಮರು ಪಾವತಿ ಅತ್ಯಗತ್ಯ ಎಂದು ಹೇಳಿದರು.
  ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಸುಬ್ಬರೆಡ್ಡಿ, ನಿರ್ದೇಶಕರಾದ ಎಲ್‌.ಗೋಪಾಲಕೃಷ್ಣ, ನಾರಾಯಣಸ್ವಾಮಿ, ಮಂಜುನಾಥರೆಡ್ಡಿ, ಅಯ್ಯಪ್ಪ, ಕೃಷ್ಣಾರೆಡ್ಡಿ, ನಾರಾಯಣಸ್ವಾಮಿ ಇದ್ದರು.