ಶ್ರೀನಿವಾಸಪುರ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ  ಮಾವು ವಹಿವಾಟು ನಡೆಸಲು ಅವಕಾಶ ನೀಡಬೇಕು : ರೈತರು

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ  ಮಾವು ವಹಿವಾಟು ನಡೆಸಲು ಅವಕಾಶ ನೀಡಬೇಕು : ರೈತರು
ಶ್ರೀನಿವಾಸಪುರ:  ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ  ಮಾವು ವಹಿವಾಟು ನಡೆಸಲು ಅವಕಾಶ ನೀಡಬೇಕು ಎಂದು ಕೋರಿ ರೈತರು ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅವರಿಗೆ ಮನವಿ ಪತ್ರ ನೀಡಿದರು.
 ನೆರೆಯ ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳು ನಾಡಿನಲ್ಲಿ ಎಪಿಎಂಸಿ ಮೂಲಕ ಹಣ್ಣು ಹಾಗೂ ತರಕಾರಿ ವಹಿವಾಟು ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಮಾತ್ರ ರೈತರ ಉತ್ಪನ್ನಕ್ಕೆ ಸ್ಪರ್ಧಾತ್ಮಕ ಬೆಲೆ ಸಿಗಲು ಸಾಧ್ಯ.  ಕೊವಿಡ್‌ – 19 ರೈತರ ಬದುಕಿಗೆ ಬರೆ ಎಳೆದಿದೆ. ಇಂಥ ಸಂದರ್ಭದಲ್ಲಿ ಇರುವ ಫಸಲಿಗೆ ಉತ್ತಮ ಬೆಲೆ ಪಡೆದುಕೊಳ್ಳಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
   ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಎನ್‌.ಕೆ.ರಾಘವೇಂದ್ರ ಪ್ರಕಾಶ್‌, ಮುಖಂಡರಾದ ಕೆ.ಕೆ.ಮಂಜುನಾಥರೆಡ್ಡಿ, ರಾಮಾಂಜಮ್ಮ, ವರ್ತನಹಳ್ಳಿ ವೆಂಕಟೇಶ್‌, ಬೈರಾರೆಡ್ಡಿ, ಎಜೆಕೆ ಜಬ್ಬೀರ್, ಎಸ್‌.ಎನ್‌.ಆರ್‌.ಬಾಬುರೆಡ್ಡಿ, ನರಸಿಂಹರೆಡ್ಡಿ, ಸುಧಾರಕರರೆಡ್ಡಿ, ಎಚ್‌.ವೆಂಕಟರೆಡ್ಡಿ, ಶ್ರೀರಾಮರೆಡ್ಡಿ, ಬಿ.ಎಸ್‌.ಗಂಗಿರೆಡ್ಡಿ, ನಟರಾಜ್‌ ಇದ್ದರು.