ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ: ನವೆಂಬರ್ ಒಂದರಂದು 64ನೆ ಕನ್ನಡ ರಾಜ್ಯೋತ್ಸವನ್ನು ತಾಲ್ಲೂಕು ಆಡಳಿತ ವತಿಯಿಂದ ಅದ್ದೂರಿಯಾಗಿ ಆಚರಿಸಲಾಗುವುದು: ಪ್ರಭಾರಿ ತಹಸೀಲ್ದಾರ್ ಕೆ.ಸುಜಾತ
ಶ್ರೀನಿವಾಸಪುರ: ನವೆಂಬರ್ ಒಂದರಂದು 64ನೆ ಕನ್ನಡ ರಾಜ್ಯೋತ್ಸವನ್ನು ತಾಲ್ಲೂಕು ಆಡಳಿತ ವತಿಯಿಂದ ಅದ್ದೂರಿಯಾಗಿ ಆಚರಿಸಲಾಗುವುದೆಂದು ತಾಲ್ಲೂಕು ಪ್ರಭಾರಿ ತಹಸೀಲ್ದಾರ್ ಕೆ.ಸುಜಾತ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಸುಜಾತ, ಎಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಹಾಗೆ ಈ ಹಬ್ಬವನ್ನು ಅತ್ಯಂತ ಸಡಗರ ಸಂಬ್ರಮದಿಂದ ಆಚರಿಸೋಣ, ಅಂದು ಪಟ್ಟಣದ ಬಾಲಕಿಯರ ಕಾಲೇಜು ಮೈದಾನದಲ್ಲಿ ತಾಯಿ ಭುವನೇಶ್ವರಿಯ ಸ್ಥಬ್ದ ಚಿತ್ರ ಹಾಗೂ ಪಲ್ಲಕ್ಕಿಯೊಂದಿಗೆ ಚಾಲನೆ ನೀಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು ಎಂದರು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಎಲ್ಲಾ ಅಧಿಕಾರಿಗಳು ಬೆಳಿಗ್ಗೆ 8 ಗಂಟೆಗೆ ಕಾರ್ಯಕ್ರಮಕ್ಕೆ ಹಾಜರಾಗಬೇಕು. ಅಧಿಕಾರಿಗಳು ಗೈರು ಹಾಜರಾದಲ್ಲಿ ಮೇಲಾಧಿಕಾರಿಗಳಿಗೆ ವರಧಿಯನ್ನು ಸಲ್ಲಿಸಲಾಗುವುದೆಂದು ಎಚ್ಚರಿಕೆಯನ್ನು ನೀಡಿದರು.
ತಾಲ್ಲೂಕು ಮಟ್ಟದ ಕಚೇರಿಗಳ ಮೇಲೆ ಕಡ್ಡಾಯವಾಗಿ ದೀಪಾಲಂಕಾರವನ್ನು ಮಾಡಬೇಕು. ಈಬಾರಿ ಎಸ್.ಎಸ್.ಎಲ್.ಸಿ. ಯ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 78 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಲಾಗುವುದೆಂದರು.
ಸಮಾಜ ಕಲ್ಯಾಣ ಇಲಾಖೆ ಮತು ಅಬಕಾರಿ ಇಲಾಖೆ ವತಿಯಿಂದ ಬೆಳ್ಳಿರಥ, ತಾಲ್ಲೂಕು ಪಂಚಾಯಿತಿ ಪುರಸಭೆ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ 78 ವಿದ್ಯಾರ್ಥಿಗಳಿಗೆ ಮೂಮೆಂಟುಗಳನ್ನು ನೀಡಲು ಸೂಚಿಸಿದರು. 4 ಹೋಬಳಿಗಳಿಂದ ಸ್ಥಬ್ದ ಚಿತ್ರಗಳ ವ್ಯವಸ್ಥೆಯನ್ನು ಇ.ಒ.ರವರಿಗೆ ವಹಿಸಲಾಯಿತು. ಪತ್ರಕರ್ತರಾದ ಎನ್. ಮುನಿವೆಂಕಟೇಗೌಡ ಪ್ರಶಸ್ತಿ ಪತ್ರಗಳನ್ನು ತಾವೇ ಮುದ್ರಿಸಿ ಕೊಡುವ ಜವಾಬ್ದಾರಿಯನ್ನು ವಹಿಸಿಕೊಂಡರು. ತಾಲ್ಲೂಕಿನ ಎಲ್ಲ ಕನ್ನಡ ಪರ ಸಂಘಸಂಸ್ಥೆಗಳು, ಅಧ್ಯಕ್ಷರು ಕನ್ನಡ ರಾಜ್ಯೋತ್ಸವದಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಇದೆ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇ.ಒ., ಆನಂದ್, ಪುರಸಭೆ ಮುಖ್ಯಾಧಿಕಾರಿ ಮೋಹನ್ ಕುಮಾರ್, ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.