ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರ ಚುನಾವಣೆ 2 ನೇ ಅವಧಿಗೆ 13 ರಂದು ನಿಗದಿಯಾಗಿದ್ದು ಕೋರಂ ಕೊರತೆ
ಶ್ರೀನಿವಾಸಪುರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರ ಚುನಾವಣೆ 2 ನೇ ಅವಧಿಗೆ 13 ರಂದು ನಿಗದಿಯಾಗಿದ್ದು ಕೋರಂ ಕೊರತೆಇರುವುದರಿಂದ ಇದೇ ತಿಂಗಳು 21 ರಂದು ಮತ್ತೊಂದು ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಯಾದ ವಿ.ಸೋಮಶೇಖರ್ ರವರು ತಿಳಿಸಿದ್ದಾರೆ.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಆಯ್ಕೆಯ ಪ್ರಕ್ರಿಯೆ ಚುನಾವಣೆ 13 ನೇ ತಾರಿಖಿನಂದು ನಿಗದಿಯಾಗಿದ್ದು ಬೆಳಗ್ಗೆ 9:30 ರಿಂದ ನಾಮ ಪತ್ರ ಸಲ್ಲಿಸಲು ಅವಕಾಶವಿದ್ದು ಒಟ್ಟು 18 ಮಂದಿ ಸದಸ್ಯರಲ್ಲಿ 10 ಮಂದಿ ಜೆಡಿಎಸ್ ಬೆಂಬಲಿತ ಮತ್ತು 8 ಮಂದಿ ಕಾಂಗ್ರೇಸ್ ಬೆಂಬಲಿತ ಸದಸ್ಯರು ಇದ್ದು ಇವರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತವಾಗಿ ಕೆ.ಎಂ.ನರೇಶ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಆರ್.ಜಿ.ನರಸಿಂಹಯ್ಯ, ಬಾಲಾವತಿ ಮೂರು ಮಂದಿ ನಾಮ ಪತ್ರ ಸಲ್ಲಿಸಿದ್ದು, ಮದ್ಯಾಹ್ನ 1-00 ಗಂಟೆಗೆ ಕೋರಂ ಸಭೆ ಕರೆಯಲಾಗಿದ್ದು, 1:30 ನಿಮಿಷಗಳಾದರು ಜೆಡಿಎಸ್ ನ 10 ಮಂದಿ ಸದಸ್ಯರಲ್ಲಿ ಯಾವೊಬ್ಬರು ಸಹ ಹಾಜರಾಗದೆ ಕೇವಲ ಕಾಂಗ್ರೇಸ್ ನ 8 ಮಂದಿ ಸದಸ್ಯರು ಹಾಜರಾಗಿದ್ದರಿಂದ ಕೋರಂ ಕೊರತೆಯಿಂದ ಅಧ್ಯಕ್ಷರ ಸ್ಥಾನ ಆಯ್ಕೆ ಪ್ರಕ್ರಿಯೆ ಮುಂದಿನ ಇದೇ ತಿಂಗಳ 21 ನೇ ತಾರೀಖಿನಂದು ಮದ್ಯಾಹ್ನ 12 ಗಂಟೆಗೆ ಮತ್ತೊಮ್ಮೆ ಸಭೆಯನ್ನು ಕರೆಯಲಾಗಿದೆ ಎಂದು ಚುನಾವಣಾ ಅಧಿಕಾರಿ ಸೋಮಶೇಖರ್ ರವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಭಾರ ಇ.ಓ.ರಾಜಣ್ಣ, ಲೆಕ್ಕಾಧಿಕಾರಿ ಮಂಜುನಾಥ, ಎಫ್.ಡಿ.ಎ ಆನಂದಚಾರಿ ಹಾಜರಿದ್ದರು.